More

    ಸಿಐಡಿ ಜತೆ ಇನ್ಫೋಸಿಸ್ ಒಪ್ಪಂದ; 4 ವರ್ಷಗಳಿಗೆ 33 ಕೋಟಿ ಅನುಧಾನ

    ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೈಬರ್ ಕ್ರೈಂ ತನಿಖಾ ಸಾಮರ್ಥ್ಯ ಬಲಪಡಿಸಲು ಇನ್ಫೋಸಿಸ್ ಫೌಂಡೇಷನ್, 33 ಕೋಟಿ ರೂ. ಅನುದಾನವನ್ನು ನೀಡಿದೆ.

    ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಸಹಯೋಗವನ್ನು ನವೀಕರಿಸಲು ಇನ್ಫೋಸಿಸ್ ಫೌಂಡೇಷನ್, ಅಪರಾಧ ತನಿಖಾ ಇಲಾಖೆ(ಸಿಐಡಿ) ಮತ್ತು ಡೇಟಾ ಭದ್ರತಾ ಮಂಡಳಿ (ಡಿಎಸ್‌ಸಿಐ) ಜೊತೆಗಿನ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
    ಬುಧವಾರ ಸಿಐಡಿ ಪ್ರಧಾನ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಸಿಸಿಐಟಿಆರ್ ಜೊತೆಗಿನ ತನ್ನ ಒಪ್ಪಂದವನ್ನು 4 ವರ್ಷದವರೆಗೆ ವಿಸ್ತರಿಸುವ ಮೂಲಕ ರಾಜ್ಯ ಪೊಲೀಸರ ಸೈಬರ್ ಕ್ರೈಂ ತನಿಖಾ ಸಾಮರ್ಥ್ಯ ಬಲಪಡಿಸಲು 33 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ೌಂಡೇಷನ್ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ, ಈ ಒಪ್ಪಂದದಿಂದ ರಾಜ್ಯ ಪೊಲೀಸರ ಸೈಬರ್ ಕ್ರೈಂ ತನಿಖಾ ಸಾಮರ್ಥ್ಯ ಹೆಚ್ಚಾಗಲಿದೆ. ಡೇಟಾ ಭದ್ರತಾ ಮಂಡಳಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವುದರ ಜತೆಗೆ, ಕ್ರಿಮಿನಲ್ ನ್ಯಾಯ ವಿತರಣಾ ವ್ಯವಸ್ಥೆಯ ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ವ್ಯವಸ್ಥೆಗೂ ವಿಸ್ತರಿಸಲಾಗುತ್ತದೆ ಎಂದರು.

    ಇದಲ್ಲದೆ, ಸೈಬರ್ ಕ್ರೈಂ ಪ್ರಕರಣಗಳ ತನಿಖೆಗೆ ಡಿಜಿಟಲ್ ಫೋರೆನ್ಸಿಕ್ಸೃ್ ಸಾಕ್ಷಾೃಧಾರಗಳ ಸಂಗ್ರಹದಲ್ಲಿ ಹೆಚ್ಚಿನ ಬಲತುಂಬಲಿದೆ. ಸೈಬರ್ ಕ್ರೈಂ ತನಿಖೆಯಲ್ಲಿ ತರಬೇತಿ, ಸಂಶೋಧನೆ ಮತ್ತು ಪ್ರಾಸಿಕ್ಯೂಷನ್ ಸಾಮರ್ಥ್ಯವನ್ನು ಈ ಒಪ್ಪಂದ ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಡಾ. ಸಲೀಂ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts