ಹೈದರಾಬಾದ್: ಟಾಲಿವುಡ್ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ ಸ್ತ್ರೀವಾದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣುಮಕ್ಕಳು ಆತ್ಮವಿಶ್ವಾಸದಿಂದ ಇರಬೇಕು ಎನ್ನುತ್ತಾರೆ ಅನುಸೂಯ. ಇತ್ತೀಚೆಗೆ, ಅವರು ಹೆಣ್ಣು ಮಕ್ಕಳ ನಿಂದನೆಯ ಬಗ್ಗೆ ಪ್ರಮುಖ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಅನಸೂಯ ಅವರು ಆತ್ಮಸ್ಥೈರ್ಯದ ಜೀವಂತ ಉದಾಹರಣೆ. ಮಹಿಳೆಯರ ಹಕ್ಕುಗಳ ಬಗ್ಗೆ ಧ್ವನಿ ಎತ್ತುವುದರಲ್ಲಿ ಸದಾ ಮುಂದಿರುತ್ತಾರೆ. ಹುಡುಗಿಯರ ಮೇಲಿನ ನಿರ್ಬಂಧಗಳನ್ನು ಅವರು ಸಹಿಸುವುದಿಲ್ಲ. ಅದರಲ್ಲೂ ಡ್ರೆಸ್ಸಿಂಗ್ ಅನ್ನು ಟೀಕಿಸುವವರ ವಿರುದ್ಧ ಉರಿದು ಬೀಳುತ್ತಾರೆ. ಜಬರ್ದಸ್ತ್ ಶೋನಲ್ಲಿ ಅನಸೂಯಾ ಧರಿಸಿದ್ದ ಬಟ್ಟೆಗಳು ಈ ಹಿಂದೆ ತೀವ್ರ ಟೀಕೆಗೆ ಗುರಿಯಾಗಿದ್ದವು. ಆದರೆ, ಇದ್ಯಾವುಕ್ಕೂ ಆಕೆ ಕ್ಯಾರೆ ಎನ್ನುತ್ತಿರಲಿಲ್ಲ.
ಟೀಕೆ ಮಾಡಿದವರಿಗೆಲ್ಲ, ನಾನು ಯಾವ ಬಟ್ಟೆ ಧರಿಸಬೇಕೆಂದು ನಿರ್ಧರಿಸಲು ನೀವು ಯಾರು? ನಾನು ಇರುವುದೇ ಹೀಗೆ, ನನಗಿಷ್ಟವಾದುದನ್ನು ಧರಿಸುತ್ತೇನೆ ಎಂದು ತಿರುಗೇಟು ನೀಡಿದ್ದರು. ಸಮಾಜದಲ್ಲಿ ನಡೆಯುತ್ತಿರುವ ಅಪರಾಧಕ್ಕೆ ಹೆಣ್ಣುಮಕ್ಕಳ ಡ್ರೆಸ್ಸಿಂಗ್ ಕಾರಣ ಎಂಬುದನ್ನು ಅನುಸೂಯ ಒಪ್ಪಿಕೊಳ್ಳುವುದಿಲ್ಲ.
ಇತ್ತೀಚೆಗೆ ಅನಸೂಯ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆಧುನಿಕ ಬಟ್ಟೆಯಾಗಲಿ ಅಥವಾ ಸಾಂಪ್ರದಾಯಿಕ ಉಡುಗೆಯಾಗಲಿ ಯಾವುದೇ ಉಡುಪು ಧರಿಸಿದರೂ ಹೆಣ್ಣು ಮಕ್ಕಳ ಮೇಲಿನ ಕಿರುಕುಳ ಮಾತ್ರ ನಿಲ್ಲುವುದಿಲ್ಲ. ಡ್ರೆಸ್ಸಿಂಗ್ ಅಲ್ಲ, ಬದಲಾಗಿ ನಿಮ್ಮ ಆಲೋಚನಾ ಕ್ರಮ ಬದಲಾಗಬೇಕು ಎಂದು ಫ್ಯಾನ್ಸ್ ಪೋಸ್ಟ್ ಹಾಕಿದ್ದರು.
ಅಭಿಮಾನಿಯ ಪೋಸ್ಟ್ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಅನಸೂಯ, ನನ್ನ ಸುತ್ತಮುತ್ತಲಿನ ಜನರು ಕೂಡ ಹೀಗೇನೆ. ಅವರು ಯಾರೊಬ್ಬರಿಗೂ ಕಿರುಕುಳ ನೀಡುವುದಿಲ್ಲ. ಪ್ರಚೋದನೆ ಮಾಡುವುದಿಲ್ಲ. ಯಾರನ್ನೂ ನೋಯಿಸುವುದಿಲ್ಲ. ಎಂದಿಗೂ ತಪ್ಪು ವಿಷಯಗಳತ್ತ ಗಮನ ಹರಿಸಲಿಲ್ಲ, ಯಾವುದೇ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ಓಡಿಹೋಗಲಿಲ್ಲ. ಕೇವಲ ಶುದ್ಧ ಶಕ್ತಿ, ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದಾರೆ. ನೀವು ನನಗೆ ಹೆಮ್ಮೆ ತರುತ್ತೀರಿ ಎಂದು ಅಭಿಮಾನಿಗಳ ಬಗ್ಗೆ ಅನುಸೂಯ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
This. Is. My. People.
Unlike many “fan pages” .. never abused anyone, never targeted anyone, never gaslighted anyone, never provoked anyone or disrespected anyone unnecessarily, never whitewashed anything, never sought attention for wrong things, never ran away from taking any… https://t.co/LKD6C1LubV— Anasuya Bharadwaj (@anusuyakhasba) April 24, 2024
ಕೆಲವರು ಮತ್ತೆ ಪ್ರಾಣಿಗಳಂತೆ ಪ್ರಚೋದನೆಗೆ ಒಳಗಾಗುತ್ತಾರೆ ಎಂದು ನನಗೆ ತಿಳಿದಿದೆ ಎನ್ನುವ ಮೂಲಕ ಕೆಲವರಿಗೆ ತಿರುಗೇಟು ನೀಡಿರುವ ಅನುಸೂಯ ಯುವತಿಯರ ಡ್ರೆಸ್ಸಿಂಗ್ ಕಿರುಕುಳಕ್ಕೆ ಕಾರಣವಲ್ಲ ಎಂದು ಪರೋಕ್ಷವಾಗಿ ಅಭಿಮಾನಿ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. (ಏಜೆನ್ಸೀಸ್)
ವಿದೇಶದಲ್ಲಿ ದುಡಿಯುತ್ತಿರುವ ಗಂಡ: ಇತ್ತ ಇಬ್ಬರೊಂದಿಗೆ ಪತ್ನಿಯ ಸರಸ, ಕರ್ಮದ ಫಲಕ್ಕೆ ದುರಂತ ಸಾವು
ನೀವಿದನ್ನು ಗಮನಿಸಿದ್ರಾ? ಆರ್ಸಿಬಿಯಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಅವಮಾನ, ಫ್ಯಾನ್ಸ್ ಆಕ್ರೋಶ