More

    ನೀವಿದನ್ನು ಗಮನಿಸಿದ್ರಾ? ಆರ್​ಸಿಬಿಯಿಂದ ಸನ್​ ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಅವಮಾನ, ಫ್ಯಾನ್ಸ್​ ಆಕ್ರೋಶ

    ಹೈದರಾಬಾದ್​: ಇಲ್ಲಿಯವರೆಗೂ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡಗಳು ಭಯಪಡುವ ಪರಿಸ್ಥಿತಿ ಇತ್ತು. ಏಕೆಂದರೆ, ಎಸ್​ಆರ್​ಎಚ್​​ ಬ್ಯಾಟಿಂಗ್ ತುಂಬಾ ವಿನಾಶಕಾರಿಯಾಗಿತ್ತು. ಆದರೆ, ಗುರುವಾರ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡ ಸಂಪೂರ್ಣ ವಿಭಿನ್ನ ಆಟವಾಡಿತು. ಈ ಸೀಸನ್​ನಲ್ಲಿ 266, 277, 287 ರಂತಹ ಬೃಹತ್ ಸ್ಕೋರ್ ಗಳಿಸಿದ್ದ ಎಸ್​ಆರ್​ಎಚ್, ಆರ್​ಸಿಬಿ ವಿರುದ್ಧದ 207 ರನ್​​ಗಳ ಗುರಿ ಬೆನ್ನತ್ತಲಾಗದೆ ಸೋಲನ್ನು ಅನುಭವಿಸಿತು. ಪಂದ್ಯದ ಫಲಿತಾಂಶದ ಹೊರತಾಗಿ ಈ ಪಂದ್ಯದಲ್ಲಿ ಆರ್​ಸಿಬಿ, ಎಸ್​ಆರ್​ಎಚ್​ ತಂಡದ ಸೊಕ್ಕನ್ನು ಅಡಗಿಸಿತು. ಅಲ್ಲದೆ, ಪ್ಯಾನ್​ ಕಮಿನ್ಸ್​ ಪಡೆಯನ್ನು ಫಾಪ್​ ಡುಪ್ಲಿಸಿಸ್​ ಪಡೆ ಕೆಟ್ಟದಾಗಿ ಅವಮಾನಿಸಿ ಸೇಡು ತೀರಿಸಿಕೊಂಡಿತು ಎಂದು ಹೇಳಲಾಗುತ್ತಿದೆ.

    ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 207 ರನ್‌ಗಳ ಗುರಿಯನ್ನು ಮುಟ್ಟಲು ಕಣಕ್ಕಿಳಿದ ಎಸ್‌ಆರ್‌ಎಚ್‌ಗೆ ಆರ್​ಸಿಬಿ ಆಲ್​ರೌಂಡರ್​ ವಿಲ್ ಜಾಕ್ಸ್ ಆಘಾತ ನೀಡಿದರು. ಎಸ್​ಆರ್​ಎಚ್​ನ ವಿಧ್ವಂಸಕ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಔಟ್​ ಮಾಡಿದರು ಮತ್ತು ಸನ್‌ರೈಸರ್ಸ್ ಪತನಕ್ಕೆ ಮುಖ್ಯ ಕಾರಣರಾದರು. ಹೆಡ್​ ಬೆನ್ನಲ್ಲೇ ಶೀಘ್ರದಲ್ಲೇ ಅಭಿಷೇಕ್ ಶರ್ಮ, ಈಡನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಕೂಡ ಔಟಾದರು. ಎಸ್​ಆರ್​ಎಚ್​ ಅವರ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಂಡದ ಹಾರ್ಡ್ ಹಿಟ್ಟರ್ ಅಬ್ದುಲ್ ಸಮದ್ ಬ್ಯಾಟಿಂಗ್​ಗೆ ಬಂದರು. ಇದೇ ಸಮಯದಲ್ಲಿ ಆರ್​ಸಿಬಿ, ಎಸ್​ಆರ್​ಎಚ್​ ತಂಡವನ್ನು ಅವಮಾನಿಸಿದೆ. ಆರ್‌ಸಿಬಿಯ ಈ ನಡೆಯನ್ನು ನೋಡಿ ಎಸ್‌ಆರ್‌ಎಚ್ ಬ್ಯಾಟರ್‌ಗಳು ಮಾತ್ರವಲ್ಲದೆ ಕ್ರೀಡಾಂಗಣದಲ್ಲಿದ್ದ ಎಲ್ಲ ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ಶಾಕ್ ಆದರು.

    ಅಬ್ದುಲ್ ಸಮದ್ ಕ್ರೀಸ್‌ಗೆ ಬಂದ ನಂತರ, ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಟೆಸ್ಟ್ ಫೀಲ್ಡಿಂಗ್ ಸೆಟ್​ ಮಾಡಿದರು. ಇದರಲ್ಲಿ ಕೊಹ್ಲಿಯ ಐಡಿಯಾವೂ ಸೇರಿದೆ. ಕೊಹ್ಲಿಯ ಸ್ಲಿಪ್ ಮತ್ತು ಸಿಲ್ಲಿ ಪಾಯಿಂಟ್‌ನಲ್ಲೂ ಫೀಲ್ಡರ್ ಹಾಕಿ, ಸಮದ್ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಟೆಸ್ಟ್ ಫೀಲ್ಡಿಂಗ್ ಮಾಡುವ ಮೂಲಕ ಆರ್‌ಸಿಬಿ, ಎಸ್​ಆರ್​ಎಚ್​ ತಂಡವನ್ನು ಅವಮಾನಿಸಿತು. ಈ ದೃಶ್ಯ ನೋಡಿದ ಆರ್​ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ, ಎಸ್​ಆರ್​ಎಚ್​ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

    ಎಸ್​ಆರ್​ಎಚ್​ ಮೊದಲು ಬ್ಯಾಟ್ ಮಾಡಿದರೆ ಆರ್​ಸಿಬಿ ಬೌಲರ್​ಗಳನ್ನು ಬೆಂಡೆತ್ತಿ, 300 ರನ್​ ಗಡಿ ದಾಟುತ್ತದೆ ಎಂದು ಅನೇಕ ಎಸ್​ಆರ್​ಎಚ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದರು. ಆದರೆ, ಆಗಿದ್ದೇ ಬೇರೆ. ಅಲ್ಲದೆ, ಅವರೆಲ್ಲರಿಗೂ ಕೌಂಟರ್ ಕೊಟ್ಟು ಆರ್​ಸಿಬಿ ಟೆಸ್ಟ್ ಫೀಲ್ಡಿಂಗ್ ಸೆಟ್ ಮಾಡಿತು. (ಏಜೆನ್ಸೀಸ್​)

    ಕುಣಿಗಲ್​ನಲ್ಲಿ ಕಾಂಗ್ರೆಸ್ ಪುಂಡರ ಅಟ್ಟಹಾಸ, ವಾಟರ್ ಮನ್ ಸಾವು

    ಇವಿಎಂ ಮತಗಳ ಜತೆಗೆ ವಿವಿಪ್ಯಾಟ್​ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿಗಳು ವಜಾ! ಸುಪ್ರೀಂಕೋರ್ಟ್​ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts