More

    ಕುಣಿಗಲ್​ನಲ್ಲಿ ಕಾಂಗ್ರೆಸ್ ಪುಂಡರ ಅಟ್ಟಹಾಸ, ವಾಟರ್ ಮನ್ ಸಾವು

    ಕುಣಿಗಲ್: ಕುಣಿಗಲ್ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪುಂಡರ ದೌರ್ಜನ್ಯ ಮುಂದುವರಿದ್ದು, ಅಮಾಯಕ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

    ಗುರುವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಪರ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದ ಹಳೇವೂರು ಪಂಚಾಯಿತಿಯ ಕಿಚ್ಚವಾಡಿ ಗ್ರಾಮದ ಚಂದ್ರಪ್ಪ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಜಗಳ ತೆಗೆದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ವಾಟರ್ ಮನ್ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಿ ಹಿಂಸೆ ನೀಡಿದ್ದಾರೆ. ನೋವಿನಿಂದ ನರಳುತ್ತಿದ್ದ ಚಂದ್ರಪ್ಪ ಮಧ್ಯರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಚಂದ್ರಪ್ಪ ಅವರ ಮೃತದೇಹವನ್ನ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ಮುಖಂಡರಾದ ಡಾ.ರವಿ ಬಿ. ನಾಗರಾಜಯ್ಯ, ಜಗದೀಶ್ ನಾಗರಾಜಯ್ಯ ಮತ್ತಿತ್ತರರು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ಕುಣಿಗಲ್​ನಲ್ಲಿ ರಾಜಕೀಯ ದ್ವೇಷಕ್ಕೆ ಇನ್ನೆಷ್ಟು ಬಲಿಯಾಗಬೇಕು? ಗೂಂಡಾವರ್ತನೆಗೆ ಕೊನೆ ಇಲ್ಲವೇ? ಆಡಳಿತ ವರ್ಗ ಏನು ಮಾಡ್ತಿದೆ? ಎಂದು ಆಕ್ರೋಶ ಹೊರ ಹಾಕಿದರು. ಚಂದ್ರಪ್ಪ ಸಾವಿಗೆ ನ್ಯಾಯ ಸಿಗಬೇಕು. ಪುಡಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಕ್ಷೇತ್ರದ ಶಾಸಕರು ಏನು ಮಾಡ್ತಾಯಿದ್ದಾರೆ. ತಮ್ಮ ಪಕ್ಷದ ಗೂಂಡಗಳ ಬಾಲ ಕತ್ತರಿಸೋದನ್ನು ಬಿಟ್ಟು ಬೆಳೆಯೋಕೆ ಬಿಟ್ಟಿದ್ದಾರಾ ಎಂದು ಕಿಡಿಕಾರಿದರು.

    ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರಾದ ನಟೇಶ್, ವೆಂಕಟೇಶ್, ಸಂತು, ರವಿ ಎಂಬುವವರು ನನ್ನ ತಂದೆ ಮೇಲೆ ಗಲಾಟೆ ತೆಗೆದು ಮನಸೋ ಇಚ್ಛೆ ಹಲ್ಲೆ ಮಾಡಿದ್ರು. ಬಿಜೆಪಿ ಪರ ಕೆಲಸ‌ ಮಾಡೋಕೆ ನಿನಗೆ ಎಷ್ಟು ಧೈರ್ಯ? ಕೆಲ್ಸದಿಂದ ತೆಗೆಸ್ತೀವಿ ಎಂದು ಅವಾಚ್ಯವಾಗಿ ನಿಂದಿಸಿದ್ರು. ಈಗ ನೋಡಿದ್ರೆ ನಮ್ಮಪ್ಪ ಹೆಣವಾಗಿದ್ದಾರೆ. ಅವರ ಸಾವಿಗೆ ಕಾಂಗ್ರೆಸ್ ಕಾರ್ಯರ್ಕತರೇ ಕಾರಣ ಎಂದು ಮೃತನ ಪುತ್ರ ಉಮೇಶ್ ಆರೋಪಿಸಿದ್ದಾರೆ.

    ಏಪ್ರಿಲ್​ 10ರಂದು ಕುಣಿಗಲ್​ನ ಕೆಂಪನಹಳ್ಳಿ ಗ್ರಾಮ ಪಂಚಾಯಿತಿಯ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಮೇಲೆ ಕಾಂಗ್ರೆಸ್​ನ ಬೊರೇಗೌಡ ಹಾಗೂ ಬೆಂಬಲಿಗರಿಂದ‌ ಹಲ್ಲೆ ನಡೆದಿತ್ತು. ಈ ಘಟನೆ ಕುಣಿಗಲ್ ತಾಲ್ಲೂಕಿನ ಅಂಚೇಪಾಳ್ಯದಲ್ಲಿ ನಡೆದಿತ್ತು. ಏ.10ರ ಸಂಜೆ 6.40ರ ಸುಮಾರಿಗೆ ನಿನ್ನೊಂದಿಗೆ ಮಾತನಾಡಬೇಕೆಂದು‌ ಮಂಜುನಾಥ್​ನನ್ನ ಕರೆಸಿಕೊಂಡ ಬೋರೇಗೌಡ, ಅಂಚೇಪಾಳ್ಯದ ಬಳಿ ಮಂಜುನಾಥ್​ ಬರುತ್ತಿದ್ದಂತೆ ಏಕಾಏಕಿ ಚಾಕುವಿಂದ‌ ತಿವಿದು ಹಲ್ಲೆ ಮಾಡಿದ್ದಾನೆ. ಈ‌ ವೇಳೆ ಪ್ರಾಣ ಉಳಿಸಿಕೊಳ್ಳಲು ಮಂಜುನಾತ್​ ಕೆಳಗೆ ಬಗ್ಗಿದ್ದಾನೆ. ಇದರಿಂದ ಚಾಕು ಮಂಜುನಾಥನ ತಲೆಗೆ ಚುಚ್ಚಿದೆ. ತಲೆಗೆ ಪೆಟ್ಟಾಗಿದ್ದು, ಕುಣಿಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಇದರ ಬೆನ್ನಲ್ಲೇ ಕೊತ್ತಗೆರೆ ಹೋಬಳಿಯ ಜೆಡಿಎಸ್ ಮುಖಂಡ ಚಂದ್ರಪ್ಪ ಎಂಬುವರ ಮೇಲೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ್ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದರು.

    ಕುಣಿಗಲ್​ನಲ್ಲಿ ಕಾಂಗ್ರೆಸ್​ ಮುಖಂಡರ ದರ್ಪ: ಡಾ. ಮಂಜುನಾಥ್ ಪರ ಕೆಲಸ ಮಾಡಿದವರ ಮೇಲೆ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts