More

    ಕುಣಿಗಲ್​ನಲ್ಲಿ ಕಾಂಗ್ರೆಸ್​ ಮುಖಂಡರ ದರ್ಪ: ಡಾ. ಮಂಜುನಾಥ್ ಪರ ಕೆಲಸ ಮಾಡಿದವರ ಮೇಲೆ ಹಲ್ಲೆ

    ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಚುನಾವಣಾ ಪ್ರಚಾರ ಜೋರಾಗಿದೆ. ಇದರ ನಡುವೆ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸಹ ವರದಿಯಾಗುತ್ತಿವೆ. ಇದೀಗ ತುಮಕೂರಿನ ಕುಣಿಗಲ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ರೌಡಿಸಂ ನಡೆಸುತ್ತಿರುವ ಆರೋಪ ಕೇಳಿಬಂದಿದೆ.

    ಇದುವರೆಗೂ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯುತ್ತಿತ್ತು. ಆದರೆ, ಈ ಬಾರಿ ಮಂಡ್ಯಕ್ಕಿಂತ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶದ ಗಮನ ಸೆಳೆದಿದೆ. ಕರ್ನಾಟಕದ ಏಕೈಕ ಕಾಂಗ್ರೆಸ್​ ಸಂಸದನನ್ನು ಸೋಲಿಸಲು ಬಿಜೆಪಿ ಈ ಬಾರಿ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಿದೆ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ, ಹೃದ್ರೋಗ ತಜ್ಞ ಹಾಗೂ ಜಯದೇವ ಸಂಸ್ಥೆಯ ನಿರ್ದೇಶಕರಾಗಿ ರಾಜ್ಯದಲ್ಲಿ ಜನಮನ್ನಣೆ ಗಳಿಸಿರುವ ಡಾ.ಸಿ.ಎನ್ ಮಂಜುನಾಥ್ ಕಣದಲ್ಲಿದ್ದಾರೆ.

    ಡಾ. ಮಂಜುನಾಥ್​ ಪರ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಕೂಡ ಪ್ರಚಾರ ಮಾಡಿದ್ದರು. ಅಲ್ಲದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲ್ಲು ಹೆಚ್ಚು ಒತ್ತುಕೊಡುವಂತೆ ಬಿಜೆಪಿ-ಜೆಡಿಎಸ್​ ಮೈತ್ರಿ ನಾಯಕರಿಗೆ ಅಮಿತ್​ ಷಾ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಶೇಷ ಗಮನ ಸೆಳೆಯುತ್ತಿದೆ. ಪ್ರತಿಸ್ಪರ್ಧಿ ಡಿ.ಕೆ.ಸುರೇಶ್​ ಅವರಿಗೂ ಕೂಡ ಈಗಾಗಲೇ ತಳಮಳ ಶುರುವಾಗಿದೆ. ಇದರ ನಡುವೆ ಕಾಂಗ್ರೆಸ್​ ಕಾರ್ಯಕರ್ತರು ರೌಡಿಸಂ ಶುರು ಮಾಡಿರುವ ಆರೋಪವೂ ಕೇಳಿಬಂದಿದೆ.

    ಜೆಡಿಎಸ್​ ಬೆಂಬಲಿಗರ ಮೇಲೆ ಹಲ್ಲೆ
    ನಿನ್ನೆ (ಏಪ್ರಿಲ್​ 10) ಕುಣಿಗಲ್​ನ ಕೆಂಪನಹಳ್ಳಿ ಗ್ರಾಮ ಪಂಚಾಯಿತಿಯ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಮೇಲೆ ಕಾಂಗ್ರೆಸ್​ನ ಬೊರೇಗೌಡ ಹಾಗೂ ಬೆಂಬಲಿಗರಿಂದ‌ ಹಲ್ಲೆ ನಡೆದಿತ್ತು. ಈ ಘಟನೆ ಕುಣಿಗಲ್ ತಾಲ್ಲೂಕಿನ ಅಂಚೇಪಾಳ್ಯದಲ್ಲಿ ನಡೆದಿತ್ತು. ಸಂಜೆ 6.40ರ ಸುಮಾರಿಗೆ ನಿನ್ನೊಂದಿಗೆ ಮಾತನಾಡಬೇಕೆಂದು‌ ಮಂಜುನಾಥ್​ನನ್ನ ಕರೆಸಿಕೊಂಡ ಬೋರೇಗೌಡ, ಅಂಚೇಪಾಳ್ಯದ ಬಳಿ ಮಂಜುನಾಥ್​ ಬರುತ್ತಿದ್ದಂತೆ ಏಕಾಏಕಿ ಚಾಕುವಿಂದ‌ ತಿವಿದು ಹಲ್ಲೆ ಮಾಡಿದ್ದಾನೆ. ಈ‌ ವೇಳೆ ಪ್ರಾಣ ಉಳಿಸಿಕೊಳ್ಳಲು ಮಂಜುನಾತ್​ ಕೆಳಗೆ ಬಗ್ಗಿದ್ದಾನೆ. ಇದರಿಂದ ಚಾಕು ಮಂಜುನಾಥನ ತಲೆಗೆ ಚುಚ್ಚಿದೆ. ತಲೆಗೆ ಪೆಟ್ಟಾಗಿದ್ದು, ಕುಣಿಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯನ್ನು ದೂರು ದಾಖಲಾಗಿದೆ.

    ಇದೀಗ ಕೊತ್ತಗೆರೆ ಹೋಬಳಿಯ ಜೆಡಿಎಸ್ ಮುಖಂಡ ಚಂದ್ರಪ್ಪ ಎಂಬುವರ ಮೇಲೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ್ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರೆಲ್ಲರೂ ಕಾಂಗ್ರೆಸ್ ನಾಯಕರು ಎನ್ನಲಾಗಿದೆ.

    ಮಂಜುನಾಥ್​ ಪರ ಕೆಲಸ ಮಾಡದಂತೆ ಬೆದರಿಕೆ
    ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಕೆಲಸ ಮಾಡದಂತೆ ಬೆದರಿಕೆ ಹಾಕಿ, ಹಲ್ಲೆ ಮಾಡುವ ಮೂಲಕ ಕಾಂಗ್ರೆಸ್​ ನಾಯಕರು ರೌಡಿಸಂ ಶುರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನೀಡಲಾಗಿದೆ.

    ಟ್ರಾಫಿಕ್​ನಲ್ಲಿ ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದು ಬ್ಯಾನ್​! ಆಹ್ವಾನವಿಲ್ಲದೆ ಮನೆಗಳಿಗೂ ಹೋಗುವಂತಿಲ್ಲ

    ಈ ವರ್ಷವೇ ಕೊನೆ​​! 2025ಕ್ಕೆ ರೋಹಿತ್ ಶರ್ಮಾ ಆ ತಂಡದಲ್ಲಿರುತ್ತಾರೆ… ಶಾಕ್ ಕೊಟ್ಟ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts