More

    ತಿಹಾರ್​ ಜೈಲಿನ ಅಧಿಕಾರಿಗಳು ಕೇಜ್ರಿವಾಲ್​ರ ಪತ್ನಿಯನ್ನೇ ಒಳಗೆ ಬಿಡ್ತಿಲ್ಲ: ಎಎಪಿ ಆರೋಪ

    ನವದೆಹಲಿ: ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇತ್ತೀಚೆಗಷ್ಟೇ ತಮಗೆ ಸಕ್ಕರೆ ಖಾಯಿಲೆ ಇದ್ದರೂ ಸಹ ಅತಿಯಾದ ಸಿಹಿ ತಿನಿಸುಗಳು, ಮಾವಿನ ಹಣ್ಣು ಸೇವನೆ ಮಾಡಿದರು ಎಂದು ಇಡಿ ದೆಹಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಸಕ್ಕರೆ ಖಾಯಿಲೆ ಇರುವ ಸಿಎಂ, ಸಿಹಿ ಪದಾರ್ಥಗಳನ್ನು ಸೇವಿಸುವಂತದ್ದೇನಿತ್ತು? ಇದು ತಮ್ಮ ದೇಹದಲ್ಲಿನ ಶುಗರ್ ಪ್ರಮಾಣವನ್ನು ಹೆಚ್ಚಿಸಿಕೊಂಡು, ಮೆಡಿಕಲ್ ಕಾರಣಗಳಿಂದ ಬೈಲ್ ಪಡೆಯುವ ಹುನ್ನಾರ ಎಂದು ಅಧಿಕಾರಿಗಳು ಕೋರ್ಟ್​ಗೆ ದೂರಿದ್ದರು. ಆದರೆ, ಇದೀಗ ದೆಹಲಿ ಮುಖ್ಯಮಂತ್ರಿಗಳ ಪರ ಎಎಪಿ ಧ್ವನಿ ಎತ್ತಿದೆ.

    ಇದನ್ನೂ ಓದಿ: ಪ್ರಾಣ ಹಿಂಡುತ್ತಿರುವ ಶಬ್ಧ ಮಾಲಿನ್ಯ; ರಾತ್ರಿ ನಿದ್ರೆಗೆ ಭಂಗ, ಹೃದಯಾಘಾತ ಹೆಚ್ಚುವ ಆತಂಕ

    ಇಂದು ತಮ್ಮ ಪತಿ ಅರವಿಂದ್ ಕೇಜ್ರಿವಾಲ್​ರನ್ನು ಭೇಟಿ ಮಾಡಲೆಂದು ತಿಹಾರ್​ ಜೈಲಿಗೆ ಆಗಮಿಸಿದ ಅವರ ಪತ್ನಿ ಸುನಿತಾ ಕೇಜ್ರಿವಾಲ್​ ಅವರನ್ನು ಜೈಲಿನ ಅಧಿಕಾರಿಗಳು ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದಾರೆ. ಕೇಜ್ರಿವಾಲ್​​ ತಮ್ಮ ಪತ್ನಿಯನ್ನು ನೋಡದಂತೆ ಅಧಿಕಾರಿಗಳು ತಡೆದಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸಿದೆ.

    ಮೂಲಗಳ ಪ್ರಕಾರ, ದೆಹಲಿ ಸಚಿವರಾದ ಅತಿಶಿ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ರನ್ನು ಭೇಟಿ ಮಾಡಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದು, ನಾಳೆ (ಏ.30) ಪಂಜಾಬ್ ಸಿಎಂ ಭಗವಂತ್ ಮಾನ್ ಸಿಎಂರನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಿಕೊಂಡಿದ್ದಾರೆ. ಹೀಗಿರುವಾಗ ಸುನಿತಾ ಅವರನ್ನು ಬಿಡಲು ಜೈಲಿನ ನಿಯಮಾವಳಿಗಳು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಿಂದ ವಿಕಸಿತ ಭಾರತ, ಕಾನೂನು ಸಚಿವ ಅರ್ಜುನ ರಾಮ್ ಅಭಿಮತ

    ಅತಿಶಿ ಮತ್ತು ಭಗವಂತ್ ಮಾನ್​ ಭೇಟಿಯ ಬಳಿಕ ಮುಂದಿನ ವಾರದಲ್ಲಿ ಸುನಿತಾ ಅವರು ತಮ್ಮ ಪತಿಯನ್ನು ನೋಡಲು ಅವಕಾಶವಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕಳೆದ ಮಾರ್ಚ್​ 21ರಂದು ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದ ಕೇಜ್ರಿವಾಲ್, ಏಪ್ರಿಲ್​ 1ರಿಂದ ಜೈಲಿನಲ್ಲಿದ್ದಾರೆ,(ಏಜೆನ್ಸೀಸ್).

    ಇನ್ನೇನು ತಾಳಿ ಕಟ್ಟಬೇಕು ಅಷ್ಟರೊಳಗೆ ಅವನು ಬೇಡ ಎಂದಳು ವಧು! ಆಕೆ ಕೊಟ್ಟ ಕಾರಣ ಕೇಳಿ ವರ ಕಂಗಾಲು

    ‘ಪುಷ್ಪರಾಜ್’ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಪಡೆದಿದ್ದು ಅಲ್ಲು ಅರ್ಜುನ್​ ಅಲ್ಲ! ಬದಲಿಗೆ ಈ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts