More

    ಔಟ್​ ಮಾಡಿದ ಬೌಲರ್​ಗೆ ವಿಶೇಷ ಉಡುಗೊರೆ ನೀಡಿದ ವಿರಾಟ್​; ಏನದು?

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡವು ಅಲ್ರೌಂಡ್​ ಪ್ರದರ್ಶನದ ಫಲವಾಗಿ ಗುಜರಾತ್​ ಟೈಟಾನ್ಸ್​ ವಿರುದ್ಧ ಜಯ ಸಾಧಿಸಿದ್ದು, ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನಕ್ಕೇರಿದೆ.

    ಗುಜರಾತ್​ ವಿರುದ್ಧದ ಪಂದ್ಯದಲ್ಲಿ 148 ರನ್​ಗಳ ಸುಲಭ ಗುರಿ ಬೆನ್ನತ್ತಿದ್ದ ಆರ್​ಸಿಬಿ ತಂಡಕ್ಕೆ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ ಪವರ್​ಪ್ಲೇ ಅಂತ್ಯಕ್ಕೆ 92 ರನ್​ ಗಳಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮವಾಗಿಸಿದರು. ಈ ವೇಳೆ ಫಾಫ್​ ಹಾಗೂ ವಿರಾಟ್​ ಬೇರ್ಪಟ್ಟರು.

    ಇದರ ನಡುವೆ ಅರ್ಧಶತಕದತ್ತ ಸಾಗಿದ್ದ ಕೊಹ್ಲಿಯನ್ನು ಔಟ್ ಮಾಡುವಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಯಶಸ್ವಿಯಾದರು. ನೂರ್ ಅಹ್ಮದ್ ಎಸೆದ 11ನೇ ಓವರ್​ನ 4ನೇ ಎಸೆತವನ್ನು ಕೊಹ್ಲಿ ಕವರ್ಸ್​ನತ್ತ ಬಾರಿಸಲು ಯತ್ನಿಸಿದ್ದರು. ಆದರೆ ಚೆಂಡು ಬ್ಯಾಟ್​ ಅನ್ನು ಸವರಿ ವಿಕೆಟ್ ಕೀಪರ್ ಕೈ ಸೇರಿತು. ಇತ್ತ ಕಿಂಗ್ ಕೊಹ್ಲಿಯ ವಿಕೆಟ್ ಸಿಗುತ್ತಿದ್ದಂತೆ ನೂರ್ ಅಹ್ಮದ್ ಕುಣಿದು ಕುಪ್ಪಳಿಸಿದರು.

    Noor Kohli

    ಇದನ್ನೂ ಓದಿ: ರಾಜ್ಯದಲ್ಲಿ ಈ ಬಾರಿ ಬಿಜೆಪಿ ಒಂದಂಕಿ ದಾಟುವುದು ಡೌಟ್​: ರಾಮಲಿಂಗಾರೆಡ್ಡಿ

    ಏಕೆಂದರೆ ನೂರ್​ ಅಹ್ಮದ್​ ಅವರ ನೆಚ್ಚಿನ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇದೇ ಮೊದಲ ಬಾರಿಗೆ ತನ್ನ ಫೇವರೇಟ್ ಕ್ರಿಕೆಟಿಗನ ವಿಕೆಟ್ ಪಡೆದ ನೂರ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಇದೀಗ ಈ ಸಂತಸವನ್ನು ವಿರಾಟ್ ಕೊಹ್ಲಿ ಇಮ್ಮಡಿಗೊಳಡಿಸಿದ್ದಾರೆ. ಬಳಿಕ ನೂರ್​ ಅಹ್ಮದ್​ ಹಾಗೂ ರಶೀದ್​ ಖಾನ್​ ಜೊತೆ ವಿರಾಟ್​ ಕೊಹ್ಲಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಪಂದ್ಯದ ಬಳಿಕ ವಿರಾಟ್​ ಕೊಹ್ಲಿ ತಮ್ಮನ್ನು ಔಟ್​ ಮಾಡಿದ ಬೌಲರ್​ಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದ್ಭುತವಾಗಿ ಬೌಲಿಂಗ್ ಮಾಡಿದ್ದೀಯ, ಒಳ್ಳೆಯದಾಗಲಿ ಎಂದು ಆಟೋಗ್ರಾಫ್​ನೊಂದಿಗೆ ಕೊಹ್ಲಿ ನೂರ್​ ಅಹ್ಮದ್​ಗೆ ಜೆರ್ಸಿಯನ್ನು ಗಿಫ್ಟ್​ ನೀಡಿದ್ದಾರೆ. ಈ ಬಗ್ಗೆ ನೂರ್​ ಅಹ್ಮದ್​ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ನೀವು ಯಾವತ್ತೂ ನನ್ನ ನೆಚ್ಚಿನವರಲ್ಲಿ ಒಬ್ಬರು ಎಂದು ವಿರಾಟ್​ ಕೊಹ್ಲಿಗೆ ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts