More

    ಆರ್​ಸಿಬಿ ಆರ್ಭಟಕ್ಕೆ ಬೆಚ್ಚಿದ ಕಾವ್ಯಾ ಮಾರನ್​; ಸೋಶಿಯಲ್​ ಮೀಡಿಯಾದಲ್ಲಿ ರಿಯಾಕ್ಷನ್​ ವೈರಲ್

    ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸತತ 6 ಸೋಲುಗಳ ಬಳಿಕ ಫಾಫ್​ ಡು ಪ್ಲೆಸಿಸ್​ ನೇತೃತ್ವದ ಆರ್​ಸಿಬಿಯೂ ಗೆಲುವಿನ ನಗೆ ಬೀರಿದ್ದು, ಎಸ್​​ಆರ್​ಎಚ್​ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದೆ. ಇನ್ನೂ ಪಂದ್ಯದ ವೇಳೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡವು ರಜತ್​ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್), ವಿರಾಟ್​ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 206 ರನ್​ಗಳಿಸಿತ್ತು. ಬೃಹತ್​ ಗುರಿ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಆರ್​ಸಿಬಿ ಬೌಲರ್​ಗಳು ಎದುರಾಳಿ ತಂಡವನ್ನು 171 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

    ಇದನ್ನೂ ಓದಿ: 3.2 ಓವರ್​ನಲ್ಲಿ ಒಂದು ರನ್ ನೀಡದೆ 7 ವಿಕೆಟ್; ವಿಶ್ವದಾಖಲೆ ಬರೆದ ಬೌಲರ್

    ಸನ್​ರೈಸರ್ಸ್​ ಹೈದರಾಬಾದಿನ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆರ್​ಸಿಬಿ ಬೌಲರ್​ಗಳು ಎಸ್​ಆರ್​ಎಚ್​ಸಿಇಒ ಕಾವ್ಯಾ ಮಾರನ್​ ನಗು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದರು. ಅಪಾಯಕಾರಿ ಆಗಬಹುದಾಗಿದ್ದ ಬ್ಯಾಟ್ಸ್​ಮನ್​ಗಳ ವಿಕೆಟ್​ಗಳನ್ನೇ ಬೇಗನೆ ಕಿತ್ತ ಆರ್​ಸಿಬಿ ಬೌಲರ್​ಗಳು ಆಟಕ್ಕೆ ದಿಗ್ಬ್ರಮೆಗೊಂಡ ಕಾವ್ಯಾ ಮಾರನ್​ ತಂಡದ ಪ್ರದರ್ಶನಕ್ಕೆ ಸಿಟ್ಟುಗೊಂಡು ನೀಡಿರುವ ರಿಯಾಕ್ಷನ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಪ್ರತಿ ಪಂದ್ಯದಲ್ಲೂ ಕಾವ್ಯಾ ಮಾರನ್​ ನೀಡುವ ರಿಯಾಕ್ಷನ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತದೆ. ಏಕೆಂದರೆ ಕಾವ್ಯಾ ಮಾರನ್​ ಅವರು ನೀಡುವ ರಿಯಾಕ್ಷನ್​ ಪ್ರತಿಬಾರಿಯೂ ಮೀಮ್ಸ್​​ಗೆ ಬಳಸಲಾಗುತ್ತಿದ್ದು, ಆರ್​ಸಿಬಿ ವಿರುದ್ಧದ ಪಂದ್ಯದಲ್ಲೂ ಅವರು ನೀಡಿದ ರಿಯಾಕ್ಷನ್​ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಒಟ್ಟಿನಲ್ಲಿ ಎಸ್​ಆರ್​ಎಚ್​ನ ಪ್ರತಿ ಪಂದ್ಯದಲ್ಲೂ ಕಾವ್ಯಾಮಾರನ್​ ನೀಡುವ ರಿಯಾಕ್ಷನ್​ ಟ್ರೋಲರ್ಸ್​​ಗಳಿಗೆ ಹಬ್ಬ ಎಂದು ಹೇಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts