More

    ಚುನಾವಣಾ ಪ್ರಕ್ರಿಯೆ, ಚೆಕ್‌ಪೋಸ್ಟ್‌ಗಳ ಪರಿಶೀಲನೆ

    ಹೊನ್ನಾಳಿ: ದಾವಣಗೆರೆ ಸಾಮಾನ್ಯ ವೀಕ್ಷಕಿ ಹಾಗೂ ತಮಿಳುನಾಡು ಐಎಎಸ್ ಅಧಿಕಾರಿ ಲಕ್ಷ್ಮೀ ಅವರು ಶುಕ್ರವಾರ ತಾಲೂಕಿನ ಚುನಾವಣಾ ಪಕ್ರಿಯೆ ಹಾಗೂ ಗೊಲ್ಲರಹಳ್ಳಿ ಚೆಕ್‌ಪೋಸ್ಟ್‌ಗಳ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ವಿ. ಅಭಿಷೇಕ್ ಮಾಹಿತಿ ನೀಡಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿದ್ದು, ಒಟ್ಟಾರೆಯಾಗಿ 245 ಮತಗಟ್ಟೆಗಳಿವೆ. 24 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಅವಳಿ ತಾಲೂಕು ವ್ಯಾಪ್ತಿಯಲ್ಲಿ 6 ಚೆಕ್‌ಪೋಸ್ಟ್ ರಚಿಸಲಾಗಿದೆ ಎಂದು ತಿಳಿಸಿದರು.

    85 ವರ್ಷ ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಅವರಿದ್ದಲ್ಲೇ ಮತ ಹಾಕಿಸುವ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದ್ದು, 1698 ಪೋಸ್ಟಲ್ ಮತಪತ್ರಗಳು ಹಾಗೂ 1265 ಇ.ಡಿ.ಸಿ. ಮತಪತ್ರಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಈ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು

    ನಂತರ, ಹೊನ್ನಾಳಿ ಮಾರ್ಗದಲ್ಲಿ ಬರುವ ಗೊಲ್ಲರಹಳ್ಳಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದರು. ನಂತರ ಅವರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರ ಸ್ಥಾಪಿಸಿರುವ ಹೊನ್ನಾಳಿ ಪಟ್ಟಣದ ಗಂಗಮ್ಮ ಶ್ರೀ ವೀರಭದ್ರ ಶಾಸ್ತ್ರಿ ಐಟಿಐ ಕಾಲೇಜಿನ ಕಟ್ಟಡಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಮತಯಂತ್ರಗಳ ಸ್ಟ್ರಾಂಗ್ ರೂಂ ಪರಿಶೀಲಿಸಿದರು.

    ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts