More

    ಇವಿಎಂ ಮತಗಳ ಜತೆಗೆ ವಿವಿಪ್ಯಾಟ್​ ಚೀಟಿ ಎಣಿಕೆಗೆ ಕೋರಿದ್ದ ಅರ್ಜಿಗಳು ವಜಾ! ಸುಪ್ರೀಂಕೋರ್ಟ್​ ತೀರ್ಪು

    ನವದೆಹಲಿ: ಎಲೆಕ್ಟ್ರಾನಿಕ್​ ವೋಟಿಂಗ್​ ಮೆಷಿನ್​ (ಇವಿಎಂ) ಮತಗಳ ಜೊತೆಗೆ ವಿವಿಪ್ಯಾಟ್​ ಚೀಟಿಯನ್ನು ಎಣಿಕೆ ಮಾಡುವಂತೆ ಕೋರಿ, ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರಿಂಕೋರ್ಟ್​ ಇಂದು (ಏಪ್ರಿಲ್​ 26) ವಜಾಗೊಳಿಸಿದೆ.

    ದೇಶದೆಲ್ಲೆಡೆ ಇಂದು ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇದರ ನಡುವೆ ಸುಪ್ರೀಂಕೋರ್ಟ್​ ಈ ಮಹತ್ವದ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸರ್ವಾನುಮತದಿಂದ ಈ ತೀರ್ಪನ್ನು ಪ್ರಕಟಿಸಿದೆ.

    ಸಮತೋಲಿತ ದೃಷ್ಟಿಕೋನವು ಮುಖ್ಯವಾಗಿದ್ದರು ಕೂಡ ವ್ಯವಸ್ಥೆಯನ್ನು ಕುರುಡಾಗಿ ಸಂದೇಹಿಸುವುದು ಸರಿಯಲ್ಲ. ಅರ್ಥಪೂರ್ಣ ಟೀಕೆಗಳ ಅಗತ್ಯವಿದೆ. ನ್ಯಾಯಾಂಗವಾಗಿರಲಿ ಅಥವಾ ಶಾಸಕಾಂಗವಾಗಿರಲಿ ಪ್ರಜಾಪ್ರಭುತ್ವದ ಎಲ್ಲ ಆಧಾರ ಸ್ತಂಭಗಳ ನಡುವೆ ಸಾಮರಸ್ಯ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಬೇಕಿದೆ. ನಂಬಿಕೆ ಮತ್ತು ಸಹಯೋಗದ ಸಂಸ್ಕೃತಿಯನ್ನು ಪೋಷಿಸುವ ಮೂಲಕ ನಾವು ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು ಎಂದು ನ್ಯಾಯಮೂರ್ತಿ ದತ್ತಾ ತೀರ್ಪಿನಲ್ಲಿ ಹೇಳಿದರು.

    ಆದರೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಎರಡು ನಿರ್ದೇಶನಗಳನ್ನು ನೀಡಿದೆ. ಚಿಹ್ನೆಗಳನ್ನು ಲೋಡ್ ಮಾಡಿದ ನಂತರ ಇವಿಎಂಗಳಲ್ಲಿನ ಸಿಂಬಲ್ ಲೋಡಿಂಗ್ ಘಟಕವನ್ನು ಸೀಲ್ ಮಾಡಬೇಕು ಮತ್ತು ಈ ಘಟಕವನ್ನು ಕನಿಷ್ಠ 45 ದಿನಗಳವರೆಗೆ ಸಂಗ್ರಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.

    ಇವಿಎಂನ ಮೈಕ್ರೊಕಂಟ್ರೋಲರ್‌ನಲ್ಲಿ ಬರ್ನ್ಟ್​ ಮೆಮೊರಿಯನ್ನು ಇಂಜಿನಿಯರ್‌ಗಳ ತಂಡವು, ಫಲಿತಾಂಶಗಳನ್ನು ಘೋಷಿಸಿದ ನಂತರ ಕ್ರಮ ಸಂಖ್ಯೆ 2 ಮತ್ತು 3 ರ ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಪರಿಶೀಲಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಇವಿಎಂಗಳಲ್ಲಿ ಹಾಕಲಾದ ಪ್ರತಿ ಮತವನ್ನು ವಿವಿಪ್ಯಾಟ್ ವ್ಯವಸ್ಥೆಯಿಂದ ರಚಿಸಲಾದ ಪೇಪರ್ ಸ್ಲಿಪ್‌ಗಳೊಂದಿಗೆ ಕ್ರಾಸ್ ವೆರಿಫೈ ಮಾಡಲು ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್​ ಸಾಕಷ್ಟು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಪ್ರಸ್ತುತ ಪ್ರತಿ ಅಸೆಂಬ್ಲಿ ಕ್ಷೇತ್ರದಲ್ಲಿ ಯಾದೃಚ್ಛಿಕವಾಗಿ ಆಯ್ಕೆಯಾದ ಐದು ಇವಿಎಂಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. (ಏಜೆನ್ಸೀಸ್​)

    ಮೈಕಲ್​ ಬಳಿಕ ಶಂತನು ಜತೆಯೂ ಬ್ರೇಕಪ್​ ಮಾಡಿಕೊಂಡ ಶ್ರುತಿ ಹಾಸನ್​! ಅನುಮಾನ ಹುಟ್ಟಿಸಿದ ಶ್ರುತಿ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts