More

    ಮೈಕಲ್​ ಬಳಿಕ ಶಂತನು ಜತೆಯೂ ಬ್ರೇಕಪ್​ ಮಾಡಿಕೊಂಡ ಶ್ರುತಿ ಹಾಸನ್​! ಅನುಮಾನ ಹುಟ್ಟಿಸಿದ ಶ್ರುತಿ ನಡೆ

    ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಬಾಯ್​ಫ್ರೆಂಡ್​ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಇತ್ತೀಚೆಗೆ ಶ್ರುತಿ ಹಾಸನ್​ ಅವರ ‘ಇನಿಮೇಲ್’ ಹಾಡು ದೊಡ್ಡ ರೀತಿಯಲ್ಲಿ ವೈರಲ್ ಆಗಿತ್ತು. ಲೋಕೇಶ್ ಕನಕರಾಜ್ ಅವರು ಶ್ರುತಿ ಜತೆ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಶಂತನು ಹಜಾರಿಕಾ ಜೊತೆ ಶ್ರುತಿ ಹಾಸನ್ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

    ಶ್ರುತಿ ಅವರು ಶಂತನು ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಮತ್ತು ಅವರ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ಅಲ್ಲದೆ, ಶ್ರುತಿ, ಶಂತನು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಬ್ರೇಕಪ್​ ಆಗಿರುವುದು ಕನ್ಫರ್ಮ್​ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಕೆಲವು ತಿಂಗಳ ಹಿಂದೆ ಶ್ರುತಿ ಹಾಸನ್ ಮತ್ತು ಶಾಂತನು ವಿವಾಹವಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಇದು ಸಂಪೂರ್ಣ ವದಂತಿ ಎಂದು ಶ್ರುತಿ ಹಾಸನ್ ವಿವರಣೆ ನೀಡಿದ್ದರು. ಇದೀಗ ಇಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

    ಶಂತನುಗೂ ಮುಂಚೆ ಶ್ರುತಿ ಮೈಕಲ್​ ಕೊರ್ಸಲೆ ಜತೆ ಎರಡು ವರ್ಷ ಪರಸ್ಪರ ಡೇಟಿಂಗ್ ನಡೆಸಿದ್ದರು. ಶ್ರುತಿ ಮತ್ತು ಮೈಕಲ್​ 2016ರಲ್ಲಿ ತಮ್ಮ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಅಲ್ಲದೆ, ಹಾಗಾಗ ಶ್ರುತಿ ಹಾಸನ್​ ಲಾಸ್​ ಏಂಜಲೀಸ್​ಗೆ ಹೋಗಿ ಬರುತ್ತಿದ್ದರು.​ ಮೈಕಲ್​ ಕೂಡ ಶ್ರುತಿ ಗುಂಗಿನಲ್ಲಿ ಪದೇಪದೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಆದರೆ, 2019ರ ಏಪ್ರಿಲ್​ನಲ್ಲಿ ತಮ್ಮ ಸಂಬಂಧಕ್ಕೆ ಇಬ್ಬರು ಕೊನೆಯಾಡಿದ್ದರು.

    ಇದಾದ ಬಳಿಕ ಶ್ರುತಿ ಕೆಲ ಕಾಲ ಖಿನ್ನತೆಗೆ ಜಾರಿದ್ದರು. ಬಳಿಕ ಖಿನ್ನತೆಯಿಂದ ಗುಣವಾದ ಶ್ರುತಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೂ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತಷ್ಟು ಖ್ಯಾತಿಯನ್ನು ಗಿಟ್ಟಿಸಿಕೊಂಡರು. ಇದರ ನಡುವೆ ಶಂತನು ಪರಿಚಯವಾಗಿ, ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. (ಏಜೆನ್ಸೀಸ್​)

    ತಾಯಿ ದಯವಿಟ್ಟು ಇಲ್ಲಿಂದ ಹೋಗು! ಮಹಿಳೆಯ ಹೈಡ್ರಾಮ, ಕೈ ಮುಗಿದು ಬೇಡಿಕೊಂಡ ಪೊಲೀಸ್​ ಅಧಿಕಾರಿ

    1971ರಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts