More

    1971ರಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ನವದೆಹಲಿ: ಈಗ ಏನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್​ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಾರೆ. ನೀವು ಕೂಡ ಹಳೆಯ ಬಿಲ್​ ನೋಡಿ ಆಶ್ಚರ್ಯ ಚಕಿತರಾಗಿರುತ್ತೀರಿ ಎಂದು ಭಾವಿಸಿದ್ದೇವೆ.

    ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದಾಗಿದೆ.

    ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1971ನೇ ಇಸವಿಗೆ ಸಂಬಂಧಿಸಿದ ರೆಸ್ಟೋರೆಂಟ್​ ಒಂದರ ಬಿಲ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದರಲ್ಲಿರುವ 2 ಮಸಾಲೆ ದೋಸೆ ಮತ್ತು 2 ಕಪ್ ಕಾಫಿ ಬೆಲೆಯನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಅಂದು 2 ಮಸಾಲೆ ದೋಸೆ ಮತ್ತು 2 ಕಪ್​ ಕಾಫಿಗೆ ಕೇವಲ 2 ರೂಪಾಯಿ ಮಾತ್ರ. ಇದಕ್ಕೆ 16 ಪೈಸೆ ತೆರಿಗೆ ವಿಧಿಸಲಾಗಿದ್ದು, ಒಟ್ಟು ಬಿಲ್​ ಮೊತ್ತ 2 ರೂಪಾಯಿ 16 ಪೈಸೆ ಆಗಿದೆ. ತೆರಿಗೆ ಹೊರತುಪಡಿಸಿದರೆ ಒಂದು ಮಸಾಲೆ ದೋಸೆಗೆ 50 ಪೈಸೆ ಆಗುತ್ತದೆ. ಇಂದು ಯಾವುದೇ ಉತ್ತಮ ಸೌಲಭ್ಯವುಳ್ಳ ರೆಸ್ಟೋರೆಂಟ್​ನಲ್ಲಿ ಮಸಾಲೆ ದೋಸೆ ಮತ್ತು ಕಾಫಿಯನ್ನು ಆರ್ಡರ್​ ಮಾಡಿದರೆ ಕನಿಷ್ಠ 500 ರಿಂದ 800 ರೂಪಾಯಿ ಬಿಲ್​ ಆಗುತ್ತದೆ. ಸಾಮಾನ್ಯ ಹೋಟೆಲ್​ಗಳಲ್ಲಿ ಮಸಾಲೆ ದೋಸೆಗೆ 50 ರಿಂದ 100 ರೂ. ವರೆಗೂ ಬಿಲ್​ ಆಗುತ್ತದೆ.

    51 ವರ್ಷದ ಹಿಂದಿನ ರೆಸ್ಟೋರೆಂಟ್​ ಬಿಲ್​ ಇದಾಗಿದೆ. ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ಗೆ ಸಂಬಂಧಿಸಿದ್ದು, ಇಂಡಿಯನ್​ ಹಿಸ್ಟರಿ ವಿಥ್​ ವಿಷ್ಣು ಶರ್ಮಾ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. 1927ರ ಜೂನ್​ 28ರಲ್ಲಿ ಬಿಲ್​ ಮಾಡಲಾಗಿದ್ದು, ಮಸಾಲೆ ದೋಸೆ ಮತ್ತು ಕಾಫಿಗೆ ತಲಾ ಒಂದು ರೂಪಾಯಿ ಚಾರ್ಜ್​ ಮಾಡಲಾಗಿದೆ.

    ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಈ ಬಿಲ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ತಿಳಿಸಲು ನಮಗೆ ಕಾಮೆಂಟ್​ ಮಾಡಿದೆ. (ಏಜೆನ್ಸೀಸ್​)

    ಎಸ್​ಆರ್​ಎಚ್ ವಿರುದ್ಧ ಭರ್ಜರಿ ಗೆಲುವು: ಈ ಪವಾಡ ನಡೆದರಷ್ಟೇ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯ!

    ತಾಯಿ ದಯವಿಟ್ಟು ಇಲ್ಲಿಂದ ಹೋಗು! ಮಹಿಳೆಯ ಹೈಡ್ರಾಮ, ಕೈ ಮುಗಿದು ಬೇಡಿಕೊಂಡ ಪೊಲೀಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts