More

    ಬಿಜೆಪಿ ಕಾರ್ಯಕರ್ತನ ಕೈತುಂಡರಿಸಿದ ವ್ಯಕ್ತಿ ಮನೆ ನೆಲಸಮ: ಮಧ್ಯಪ್ರದೇಶದಲ್ಲಿ ಶುರುವಾಯಿತು ಬುಲ್​ಡೋಜರ್​ ಕಲ್ಚರ್​

    ಭೋಪಾಲ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಲ್​ಡೋಜರ್ ಬಾಬಾ ಎಂದೇ ಜನಪ್ರಿಯರಾಗಿದ್ದಾರೆ. ಸಮಾಜ ವಿರೋಧಿ ಶಕ್ತಿಗಳ ಅಕ್ರಮ ಆಸ್ತಿಗಳನ್ನು ಬುಲ್​ಡೋಜರ್​ ಮೂಲಕ ನೆಲಸಮಗೊಳಿಸುವ ಕಠಿಣ ಕ್ರಮಗಳನ್ನು ನಿರಂತರವಾಗಿ ಕೈಗೊಂಡಿದ್ದರಿಂದಲೇ ಅವರಿಗೆ ಈ ಹೆಸರು ಥಳಕು ಹಾಕಿಕೊಂಡಿದೆ. ಈಗ ನೆರೆಯ ರಾಜ್ಯದ ಮತ್ತೊಬ್ಬ ಮುಖ್ಯಮಂತ್ರಿಗಳು ಇಂತಹ ದಿಟ್ಟ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.

    ಈಗಷ್ಟೇ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಮೋಹನ ಯಾದವ್​ ಅವರೀಗ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ.

    ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಬಿಜೆಪಿ ಕಾರ್ಯಕರ್ತ ದೇವೇಂದ್ರ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮನೆಯ ಮೇಲೆ ಬುಲ್ಡೋಜರ್ ಕ್ರಮಕ್ಕೆ ಆದೇಶಿಸಿದ್ದಾರೆ. ಈ ಆರೋಪಿಯನ್ನು ಫಾರೂಖ್ ರೈನ್ ಎಂದು ಗುರುತಿಸಲಾಗಿದೆ. ಈತ ಹಲ್ಲೆ ನಡೆಸಿದ್ದರಿಂದ ಬಿಜೆಪಿ ಕಾರ್ಯಕರ್ತನ ದೇವೇಂದ್ರ ಠಾಕೂರ್ ಅವರ ಕೈ ತುಂಡಾಗಿದೆ.

    ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು ಎನ್ನಲಾಗಿದೆ. ಡಿಸೆಂಬರ್ 3 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಠಾಕೂರ್ ಮೇಲೆ ಹರಿತವಾದ ಆಯುಧಗಳು ಮತ್ತು ವಸ್ತುಗಳಿಂದ ದಾಳಿ ನಡೆಸಲಾಗಿತ್ತು. ಪ್ರಕರಣದ ಇತರ ಆರೋಪಿಗಳಾದ ಅಸ್ಲಾಂ, ಶಾರುಖ್, ಬಿಲಾಲ್ ಮತ್ತು ಸಮೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದೇವೇಂದ್ರ ಠಾಕೂರ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇವೇಂದ್ರ ಠಾಕೂರ್ ಅವರನ್ನು ಭೇಟಿ ಮಾಡಲು ಬಿಜೆಪಿಯ ಕೈಲಾಶ್ ವಿಜಯವರ್ಗಿಯಾ ಕೂಡ ತೆರಳಿದ್ದರು.

    ಮಿನ್ನಿ ಎಂದು ಕರೆಯಲ್ಪಡುವ ಆರೋಪಿ ಫಾರೂಖ್ ರೈನ್ ಮನೆ ಕೆಡವಲು ಗುರುವಾರ ಮಧ್ಯಪ್ರದೇಶದ ಅಧಿಕಾರಿಗಳು ಆದೇಶಿಸಿದ್ದಾರೆ. ಈತನ ಮನೆ ಬಳಿ ಬುಲ್ಡೋಜರ್ ತರಲಾಗಿದೆ. ಬುಲ್​ಡೋಜರ್​ಗೆ ಸಿಲುಕಿದ ಕಟ್ಟಡ ನೆಲಸಮವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts