More

    26/11 ಉಗ್ರ ಕಸಬ್​ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್​ಗೆ ಬಿಜೆಪಿ ಟಿಕೆಟ್! ಪೂನಂಗೆ ಕೊಕ್​?

    ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 15ನೇ ಪಟ್ಟಿ ಬಿಡುಗಡೆಯಾಗಿದ್ದು, 26/11ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್​​ನನ್ನು ಗಲ್ಲಿಗೇರಿಸುವಂತೆ ಮಾಡಲು ಸರ್ಲಾರದ ಪರ ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್ ಮುಂಬೈ ನಾರ್ತ್ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ.

    ಇದನ್ನೂ ಓದಿ: ಭೂ ಹಗರಣ ಪ್ರಕರಣ: ಹೇಮಂತ್ ಸೊರೆನ್ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್!​

    ಉಜ್ವಲ್ ನಿಕಮ್ ಅವರು ಭಯೋತ್ಪಾದಕ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಲು ಸಂಬಂಧಪಟ್ಟಂತೆ ವಾದ ಮಂಡಿಸಿದ್ದು, 1993 ರ ಸರಣಿ ಬಾಂಬ್ ಸ್ಫೋಟ, ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ ಮತ್ತು ಪ್ರಮೋದ್ ಮಹಾಜನ್ ಹತ್ಯೆಯಂಥ ಉನ್ನತ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.

    ಉಜ್ವಲ್ ನಿಕಮ್ ಅವರು ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್ ಅವರಿಗೆ ಈ ಬಾರಿ ಟಿಕೆಟ್​ ನೀಡಿಲ್ಲ.

    ಪ್ರಸಿದ್ಧ ವಕೀಲ ನಿಕಮ್​ ಅವರು, 2013ರಲ್ಲಿ ನಡೆದ ಮುಂಬೈ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಉಜ್ವಲ್ ನಿಕಮ್ ಅವರಿಗೆ 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.ಜಲಗಾಂವ್‌ ಮೂಲದವರಾದ ಉಜ್ವಲ್ ನಿಕಮ್ ಕಳೆದ ಚುನಾವಣೆಯಲ್ಲಿ ಅವರನ್ನು ಜಲಗಾಂವ್‌ನಿಂದ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಚಿಂತನೆ ನಡೆಸಿತ್ತು ಎಂದು ವರದಿಯಾಗಿದೆ.

    ಈ ಮುಂಬೈ ನಾರ್ತ್​ ಸೆಂಟ್ರಲ್​ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್ ವಿರುದ್ಧ ಅನೇಕ ಸಮೀಕ್ಷೆಗಳು ನೆಗಟೀವ್​ ಆಗಿ ಬಂದಿದ್ದು, ಈ ಕಾರಣದಿಂದ ಹಾಲಿ ಸಂಸದೆಯನ್ನು ಟಿಕೆಟ್​ ನೀಡದೆ, ಖ್ಯಾತ ವಕೀಲ ನಿಕಮ್ ಅವರನ್ನು ಕಣಕ್ಕಿಳಿಸುತ್ತಿದೆ. ಇದೇ ಕ್ಷೇತ್ರಕ್ಕೆ ಮುಂಬೈ ಬಿಜೆಪಿ ಅಧ್ಯಕ್ಷ ಅಶಿಶ್​ ಶೇಲಾರ್ ಅವರ ಹೆಸರು ಕೇಳಿಬಂದಿತ್ತು. ಆದರೆ ಅವರು ಸ್ಪರ್ಧಿಸಲು ನಿರಾಕರಿಸಿದ್ದರು. ಈ ಕಾರಣದಿಂದ ಉಜ್ವಲ್​ ನಿಕಮ್​ ಅವರಿಗೆ ಟಿಕೆಟ್ ನೀಡಲಾಗಿದೆ.

    ಅಮೆರಿಕದಲ್ಲಿ 20 ಅಡಿ ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು; ಭಾರತ ಮೂಲದ 3 ಮಹಿಳೆಯರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts