ಸೌತ್ ಕೆರೊಲಿನಾ: ಅಮೆರಿಕದ ಸೌತ್ ಕೆರೊಲಿನಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗುಜರಾತ್‌ನ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ, ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ಅತಿ ವೇಗದಲ್ಲಿ ರಸ್ತೆಯಿಂದ ಜಾರಿದೆ. ಗಾಳಿಯಲ್ಲಿ ಜಿಗಿದು ಎತ್ತರದಿಂದ ಅದು ಮರಗಳ ಮೇಲೆ ಬಿದ್ದು ಭಯಾನಕ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಕುಕಿ ಉಗ್ರರ ಬಾಂಬ್ ದಾಳಿ; ಇಬ್ಬರು ಯೋಧರು ಹುತಾತ್ಮ
ಮೃತರನ್ನು ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ.
ಉತ್ತರದ ಭಾಗಕ್ಕೆ ತೆರಳುತ್ತಿದ್ದ ಎಎಸ್ಯುವಿ ಕಾರು, ರಸ್ತೆಯ ಎಲ್ಲಾ ಪಥಗಳನ್ನು ದಾಟಿ, ಬಳಿಕ ರಸ್ತೆ ಬದಿಗೆ ಅಳವಡಿಸಲಾಗಿದ್ದ ತಡೆಗೋಡೆಯನ್ನು ರಭಸದಿಂದ ಏರಿದೆ. ಸುಮಾರು 20 ಅಡಿಗಳಷ್ಟು ಎತ್ತರಕ್ಕೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿದೆ ಎಂದು ಈ ಭಯಾನಕ ಅಪಘಾತ ಕುರಿತು ಗ್ರೀನ್‌ವಿಲ್ಲೆ ಕೌಂಟಿಯ ಅಧಿಕಾರಿಯ ಕಚೇರಿ ತಿಳಿಸಿರುವುದಾಗಿ ವರದಿಯಾಗಿದೆ.
“ಅವರು ನಿಗದಿತ ವೇಗ ಮಿತಿಗಿಂತಲೂ ಹೆಚ್ಚು ವೇಗದಿಂದ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಚೀಫ್ ಡೆಪ್ಯುಟಿ ಕೊರೊನರ್ ಮೈಕ್ ಎಲ್ಲಿಸ್ ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಈ ಕಾರು ಮರಗಳ ನಡುವೆ ಸಿಕ್ಕಿಕೊಂಡಿದ್ದು, ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿದೆ. ಅದರ ಭಾಗಗಳು ಛಿದ್ರ ಛಿದ್ರವಾಗಿದೆ.
ವಾಹನವೊಂದು 4- 6 ಲೇನ್‌ಗಳಷ್ಟು ಜಿಗಿದು ಅತಿಯಾದ ವೇಗದಲ್ಲಿ ರಸ್ತೆ ದಾಟಿ ಹೋಗುವುದು ಮತ್ತು ಸುಮಾರು 20 ಅಡಿಗಳಷ್ಟು ಎತ್ತರದ ಮರದ ಮೇಲೆ ಇಳಿಯುವುದು ಬಹಳ ಅಪರೂಪದ ಘಟನೆ” ಎಂದಿರುವ ಎಲ್ಲಿಸ್, ಇಂತಹ ಅಪಘಾತ ಹಿಂದೆಂದೂ ನಡೆದಿರಲಿಲ್ಲ ಎಂದಿದ್ದಾರೆ.
ಸೌತ್ ಕೆರೊಲಿನಾ ಹೈವೇ ಗಸ್ತು, ಅಗ್ನಿಶಾಮಕ ಹಾಗೂ ರಕ್ಷಣಾ ತಂಡ ಮತ್ತು ಗ್ರೀನ್‌ವಿಲ್ಲೆ ಕೌಂಟಿಯ ವಿವಿಧ ಇಎಂಎಸ್ ಘಟಕಗಳು ಸೇರಿದಂತೆ ಅನೇಕ ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ದೌಡಾಯಿಸಿ, ಕಾರನ್ನು ಹಾಗೂ ಶವಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿವೆ. ಈ ಭಯಾನಕ ಅಪಘಾತದಲ್ಲಿ ಒಬ್ಬರು ಬದುಕುಳಿರುವ ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಅವರು ಸೌತ್ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕ ಆತ್ಮಹತ್ಯೆ