More

    ಮಹಿಳಾ ಪ್ರಧಾನ ಸಿನಿಮಾದಲ್ಲಿ ‘ರಣವಿಕ್ರಮ’ ಹಾಟ್​ ಬೆಡಗಿ ಅನುಪಮಾ ಪರಮೇಶ್ವರನ್..! ನಾಳೆ ಫಸ್ಟ್ ಲುಕ್ ರಿಲೀಸ್​

    ಹೈದರಾಬಾದ್​: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ ಸದ್ಯ ಪಡ್ಡೆ ಹುಡುಗರ ಕ್ರಶ್ ಆಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ನಂತರ ಅನುಪಮಾ ದುಬಾರಿ ನಟಿಯಾಗಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ. ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಎಂದಿದ್ದ ಅನುಪಮಾ ಇದೀಗ ಬದಲಾಗಿದ್ದಾರೆ. ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಅಭಿಮಾನಿಗಳ ಉತ್ತರ ಸಿಕ್ಕಿದೆ. ಈ ಚಿತ್ರ ರಿಲೀಸ್ ಆದ್ಮೇಲೆ ಅನುಪಮಾಗೆ ಸಹಜವಾಗಿ ಬೇಡಿಕೆ ಜಾಸ್ತಿ ಆಗಿದೆ.

    ಇದನ್ನೂ ಓದಿ: Viral video: ಬಿಜೆಪಿಗೆ ಮತ ಹಾಕ್ತೇನೆ ಎಂದ ಅಜ್ಜಿಗೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಅಭ್ಯರ್ಥಿ!

    ಹೌದು…ಟಿಲ್ಲು ಸಿನಿಮಾ ಸಕ್ಸಸ್ ನಂತರ ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಮೂಲಕ ನಿರ್ಮಾಣ ಆಗಲಿರುವ ಹೊಸ ಸಿನಿಮಾದಲ್ಲಿ ಅನುಪಮಾಗೆ ಆಫರ್ ಸಿಕ್ಕಿದೆ. ಮೇ 6ರಂದು ಸಂಜೆ 5 ಗಂಟೆಗೆ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಮಾಡೋದಾಗಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

    ಮಹಿಳಾ ಪ್ರಧಾನ ಸಿನಿಮಾದಲ್ಲಿ 'ರಣವಿಕ್ರಮ' ಹಾಟ್​ ಬೆಡಗಿ ಅನುಪಮಾ ಪರಮೇಶ್ವರನ್..! ನಾಳೆ ಫಸ್ಟ್ ಲುಕ್ ರಿಲೀಸ್​

    ‘ಕಾರ್ತಿಕೇಯ 2’ ಸಿನಿಮಾ ಬಳಿಕ ‘ಟಿಲ್ಲು ಸ್ಕ್ವೇರ್’ ಚಿತ್ರದ ಮೂಲಕ ಕೂಡ ಭರ್ಜರಿ ಯಶಸ್ಸಿ ಸಿಕ್ಕಿದೆ. 40ರಿಂದ 60 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಇದೀಗ ಒಂದೂವರೆ ಕೋಟಿ ರೂ.ವರೆಗೂ ಹೆಚ್ಚು ಪಡೆಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಅನುಪಮಾ ಪರಮೇಶ್ವರನ್​ ಅವರಿಗೆ ಸಖತ್​ ಬೇಡಿಕೆ ಇದೆ. ‘ನಟಸಾರ್ವಭೌಮ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ನಟಿಗೆ ಇದೀಗ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

    ಅನುಪಮಾಗೆ ತೆಲುಗು, ತಮಿಳು, ಮಲಯಾಳಂನಲ್ಲೂ ಸಾಕಷ್ಟು ಸಿನಿಮಾ ಆಫರ್​ ಬಂದಿದೆ. ಅನುಪಮಾ ಪರಮೇಶ್ವರನ್ ಕೇವಲ ಒಂದೇ ಭಾಷೆಗೆ ಸೀಮಿತವಾಗಿರೋ ನಟಿ ಅಲ್ವೇ ಅಲ್ಲ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ದಕ್ಷಿಣದ ಅಷ್ಟೂ ಭಾಷೆಯಲ್ಲೂ ಅಭಿನಯಿಸಿದ್ದಾರೆ.

    new
    ಅನುಪಮಾ ಪರಮೇಶ್ವರನ್ ಕರ್ಲಿ ಹೇರ್​ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಅದೇ ಲುಕ್ ಅಲ್ಲಿಯೇ ಈಗ ಎಲ್ಲರ ದಿಲ್ ಕದಿಯುತ್ತಿದ್ದಾರೆ.

    ಪ್ರಜ್ವಲ್‌ ರೇವಣ್ಣ ವಿಡಿಯೋ ನೋಡಿದ ಹರ್ಷಿಕಾ ಪೂಣಚ್ಚ ಶಾಕ್​ ಕಾಮೆಂಟ್ಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts