More

    ಐಪಿಎಲ್​ ವೇಳೆ ಸುನೀಲ್​ ನರೈನ್-ಆ್ಯಂಡ್ರೆ ರಸೆಲ್​ ರಾತ್ರಿಯಿಡೀ ಎಚ್ಚರವಿರುತ್ತಾರೆ; ಸ್ಫೋಟಕ ಹೇಳಿಕೆ ನೀಡಿದ ಕೆಕೆಆರ್ ಮಾಜಿ ಕೋಚ್

    ಕಲ್ಕತ್ತಾ: ಹಾಲಿ ಐಪಿಎಲ್​ ಆವೃತ್ತಿಯಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಸುನಿಲ್​ ನರೈನ್​ ಹಾಗೂ ಆ್ಯಂಡ್ರೆ ರಸೆಲ್​ ತಮ್ಮ ಆಲ್ರೌಂಡ್​ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದೀಗ ಈ ಇಬ್ಬರು ಆಟಗಾರರ ಕುರಿತು ಕೆಕೆಆರ್​ ತಂಡದ ಮಾಜಿ ಬೌಲಿಂಗ್​ ಕೋಚ್​ ವಾಸಿಂ ಅಕ್ರಮ್​ ಈ ಇಬ್ಬರು ಆಟಗಾರರ ಬಗ್ಗೆ ವಿಚಾರ ಒಂದನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಐಪಿಎಲ್​ನಲ್ಲಿ ನಾನು ಕೆಕೆಆರ್​ನ ಬೌಲಿಂಗ್​ ಕೋಚ್ ಆಗಿ ಕೆಲಸ ಮಾಡುವಾಗ ಈ ಇಬ್ಬರು ಆಟಗಾರರು ರಾತ್ರಿ ವೇಳೆ ನಿದ್ರಿಸದೆ ಎಚ್ಚರವಾಗಿರುತ್ತಿದ್ದರು. ಹಗಲು ಹೊತ್ತಿನಲ್ಲಿ ಈ ಇಬ್ಬರು ಆಟಗಾರರು ನಿದ್ದೆ ಮಾಡುತ್ತಿದ್ದರು. ಇದು ನನಗೆ ವಿಚಿತ್ರ ಎನ್ನಿಸಿದರೂ ನಾನು ಈ ಬಗ್ಗೆ ಇಬ್ಬರ ಬಳಿ ಕೇಳಲಿಕ್ಕೆ ಹೋಗಿರಲಿಲ್ಲ. ಮುಂದೊಂದು ದಿನ ಈ ಬಗ್ಗೆ ನರೈನ್​ ಬಳಿ ಕೇಳಿದಾಗ ಆತ ಕೊಟ್ಟ ಉತ್ತರದಿಂದ ನನಗೆ ಅಚ್ಚರಿಯಾಯಿತು.

    ಒಂದು ದಿನ ತಿಂಡಿ ಮಾಡುವ ವೇಳೆ ಸುನೀಲ್​ ನರೈನ್​ ನಿದ್ದೆ ಮಂಪರಿನಲ್ಲಿ ನಡೆದುಕೊಂಡು ಬಂದಿದ್ದನ್ನು ನಾನು ನೋಡಿದೆ. ಏನಾಗಿದೆ ಎಂದು ನಾನು ಆತನ ಬಳಿ ಪ್ರಶ್ನಿಸಿದಾಗ ಭಾರತಕ್ಕೂ ಹಾಗೂ ವೆಸ್ಟ್​ ಇಂಡೀಸ್​ಗೂ ಸುಮಾರು 9 ಗಂಟೆಗಳ ವ್ಯತ್ಯಾಸವಿದ್ದು, ನಾವು ರಾತ್ರಿ ಹೊತ್ತು ಮಲಗುವುದಿಲ್ಲ. ಬದಲಾಗಿ ಹಗಲು ಹೊತ್ತಿನಲ್ಲಿ ಮಲಗುತ್ತೇವೆ ಎಂದು ಹೇಳಿದರು. ಇದು ನನಗೆ ಅಚ್ಚರಿ ಎನ್ನಿಸಿದರೂ ಈ ಬಗ್ಗೆ ನಾನು ಅವರಿಬ್ಬರ ಬಳಿ ಹೆಚ್ಚು ಮಾತನಾಡಲು ಹೋಗಲಿಲ್ಲ ಎಂದು ಕೆಕೆಆರ್​ ತಂಡದ ಮಾಜಿ ಬೌಲಿಂಗ್​ ಕೋಚ್ ವಾಸಿಂ ಅಕ್ರಮ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts