More

    ಸಂಸತ್​ ಭದ್ರತಾ ಲೋಪ ಪರಿಶೀಲಿಸಿದ ಪ್ರಧಾನಿ; ತನಿಖೆಗೆ ಸಮಿತಿ ರಚನೆ

    ನವದೆಹಲಿ: ಸಂಸತ್ತಿನಲ್ಲಿ ಬುಧವಾರದ ಭಾರಿ ಭದ್ರತಾ ಲೋಪದ ಘಟನೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆ ಕೇಂದ್ರ ಕೆಲವು ಉನ್ನತ  ಸಚಿವರೊಂದಿಗೆ ಸಭೆ ನಡೆಸಿದರು. ಏತನ್ಮಧ್ಯೆ, ಇಬ್ಬರು ವ್ಯಕ್ತಿಗಳು ಲೋಕಸಭೆಯೊಳಗೆ ನುಸುಳಲು ಮತ್ತು ಕಲಾಪವನ್ನು ಅಡ್ಡಿಪಡಿಸಲು ಅವಕಾಶ ಮಾಡಿಕೊಟ್ಟ ಸಂಭವನೀಯ ಲೋಪಗಳ ಕುರಿತು ತನಿಖೆ ಮಾಡಲು ಸರ್ಕಾರವು ಸಮಿತಿಯನ್ನು ರಚಿಸಿತು.

    ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಕ್ರಮಗಳನ್ನು ಶಿಫಾರಸು ಮಾಡಲು ಸಿಆರ್‌ಪಿಎಫ್ ಡಿಜಿ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ಗೃಹ ಸಚಿವಾಲಯವು ತನಿಖಾ ಸಮಿತಿಯನ್ನು ರಚಿಸಿದೆ.

    ಬೆಳಗ್ಗೆ ಸಂಸತ್ತಿನ ಉಭಯ ಸದನಗಳು ಸಭೆ ಸೇರಿದ ಕೂಡಲೇ, ಪ್ರತಿಪಕ್ಷ ನಾಯಕರು ಜೋರಾಗಿ ಪ್ರತಿಭಟಿಸಿ ಭದ್ರತಾ ಲೋಪದ ಬಗ್ಗೆ ಸರ್ಕಾರದಿಂದ ವಿವರಣೆಗೆ ಒತ್ತಾಯಿಸಿದ್ದರಿಂದ ಗೊಂದಲವು ಉಂಟಾಯಿತು. ಈ ಕೋಲಾಹಲದ ನಡುವೆ ಅಶಿಸ್ತಿನ ವರ್ತನೆಗಾಗಿ ಹಲವು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು, ಇದೇ ವೇಳೆ, ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ಅವರನ್ನು ಸಭಾಪತಿ ಜಗದೀಪ್ ಧನಖರ್ ಅವರು ರಾಜ್ಯಸಭೆಯಿಂದ ಅಮಾನತುಗೊಳಿಸಿದರು.

    ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಐದನೇ ಶಂಕಿತನನ್ನು ದೆಹಲಿ ಪೊಲೀಸರ ವಿಶೇಷ ಘಟಕವು ಬಂಧಿಸಿದೆ ಎಂದು ತಿಳಿದುಬಂದಿದೆ.

    ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ವ್ಯವಹರಿಸುವ ದೆಹಲಿ ಪೊಲೀಸರ ವಿಶೇಷ ಘಟಕವು ತನಿಖೆಯನ್ನು ಮುನ್ನಡೆಸುತ್ತಿದೆ. ಅತಿಕ್ರಮಣ, ಕ್ರಿಮಿನಲ್ ಪಿತೂರಿ, ಅಡ್ಡಿ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ವಿಚಾರಣೆ ವೇಳೆ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಭಗತ್ ಸಿಂಗ್ ಅಭಿಮಾನಿಗಳ ಸಂಘದೊಂದಿಗೆ ಸಂಬಂಧ ಹೊಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದ ಅವರು ನಂತರ ಈ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗಿದೆ.

    ಒಂದೇ ದಿನದಲ್ಲಿ ಹೂಡಿಕೆದಾರರಿಗೆ ರೂ. 3.22 ಲಕ್ಷ ಕೋಟಿ ಲಾಭ; ದಾಖಲೆ ಸೃಷ್ಟಿಸಿದ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ

    ಲೋಕಸಭೆಯಲ್ಲಿ ಐವರು ಕಾಂಗ್ರೆಸ್​ ಸಂಸದರು; ರಾಜ್ಯಸಭೆಯಲ್ಲಿ ಟಿಎಂಸಿಯ ಡೆರೆಕ್​ ಅಮಾನತು

    ‘ಸಿಂಗ್ ಈಸ್ ಕಿಂಗ್’: ಹೀಗೆ ಶಶಿ ತರೂರ್ ಶ್ಲಾಘಿಸಿದ ಸಂಸದ ಯಾರು?

    ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts