More

    ‘ಸಿಂಗ್ ಈಸ್ ಕಿಂಗ್’: ಹೀಗೆ ಶಶಿ ತರೂರ್ ಶ್ಲಾಘಿಸಿದ ಸಂಸದ ಯಾರು?

    ನವದೆಹಲಿ: “ಸಿಂಗ್ ಈಸ್ ಕಿಂಗ್…

    ಬುಧವಾರ ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆಯೊಳಗೆ ನುಗ್ಗಿದ ಇಬ್ಬರ ಪೈಕಿ ಒಬ್ಬರನ್ನು ತಡೆದಿದ್ದಕ್ಕಾಗಿ ತಮ್ಮ ಪಕ್ಷದ ಸಹೋದ್ಯೋಗಿಯಾದ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಈ ರೀತಿ ಶ್ಲಾಘಿಸಿದ್ದಾರೆ.

    “ಸಿಂಗ್ ಈಸ್ ಕಿಂಗ್! ಅದ್ಭುತ ಔಜ್ಲಾ, ಲೋಕಸಭೆಯಲ್ಲಿ ಒಳನುಗ್ಗುವವರನ್ನು ಎದುರಿಸಿದ ನನ್ನ ಕೆಚ್ಚೆದೆಯ ಸಹೋದ್ಯೋಗಿ,” ಎಂದು ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್​ ಅವರು ಎಕ್ಸ್ ಸೋಷಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ಕೊಂಡಾಡಿದ್ದಾರೆ.

    ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಅವರು ಸಂದರ್ಶಕರ ಗ್ಯಾಲರಿಯಿಂದ ಜಗಿದು ಲೋಕಸಭೆಯ ಚೇಂಬರ್‌ಗೆ ಬಂದಿದ್ದಾರೆ. ಶರ್ಮಾ ಅವರು ಡೆಸ್ಕ್‌ಗಳ ಮೇಲೆ ಹಾರಿ ಸ್ಪೀಕರ್ ಕುರ್ಚಿಯತ್ತ ಓಡುತ್ತಿದ್ದರೆ, ಮನೋರಂಜನ್ ಡಬ್ಬಿಗಳಿಂದ ಹಳದಿ ಹೊಗೆಯನ್ನು ಎರಚಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರು ಶರ್ಮಾ ಅವರನ್ನು ಹಿಡಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. ಶರ್ಮಾ ಶೂನಿಂದ ಮತ್ತೊಂದು ಹೊಗೆಯ ಡಬ್ಬಿಯನ್ನು ಹೊರತೆಗೆದಾಗ ಅದನ್ನು ಕಿತ್ತುಕೊಂಡಿದ್ದಾರೆ ಎಂದು ಶಶಿ ತರೂರ್​ ಘಟನೆಯನ್ನು ವಿವರಿಸಿದ್ದಾರೆ.

    ಲೋಕಸಭೆ ಚೇಂಬರ್​ಗೆ ನುಗ್ಗಿದ ಶರ್ಮಾ ಮೇಲೆ ನಾಲ್ವರು ಸಂಸದರು ಮುಗಿಬಿದಿದ್ದಾರೆ. ಒಬ್ಬ ಸಂಸದರು ಆತನನ್ನು ಕೂದಲಿನಿಂದ ಎಳೆದರೆ ಇತರರು ಹೊಡೆದಿದ್ದಾರೆ.

    ಸಂಸತ್ತಿನ ಒಳಗೆ ಮತ್ತು ಹೊರಗೆ ಕೆಂಪು ಮತ್ತು ಹಳದಿ ಡಬ್ಬಿಗಳನ್ನು ಸಿಡಿಸಿದ ಸಾಗರ್ ಶರ್ಮಾ, ಡಿ ಮನೋರಂಜನ್, ನೀಲಮ್ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡದ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ. ಈ ನಾಲ್ವರೂ “‘ಭಗತ್ ಸಿಂಗ್ ಫ್ಯಾನ್ ಕ್ಲಬ್” ಹೆಸರಿನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಪರ್ಕ ಹೊಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts