'ನಿಮ್ಮ ಕ್ಯಾಮೆರಾ ಕಣ್ಣು ನನ್ನೆದೆ ಮೇಲಿದೆ ಬಾಯ್ಸ್​..ನಿಮ್ಮನ್ನು ನಂಬಲ್ಲ '..ಖ್ಯಾತ ನಟಿ ಹೀಗೆ ಸಿಡಿಮಿಡಿಗೊಳ್ಳಲು ಕಾರಣ ಇದೇ..

rakhi
Published on

ಮುಂಬೈ: ತನ್ನ ದಿಟ್ಟ ಹೇಳಿಕೆಗಳು ಮತ್ತು ತುಂಡುಡುಗೆಗಳಿಗೆ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಗೆ ನಿತ್ಯ ಸುದ್ದಿಯಲ್ಲಿ ಇರುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಿದೆ. ಆಕೆ ಮಾಜಿ ಪತಿ ಆದಿಲ್ ದುರಾನಿಯ ಖಾಸಗಿ ವೀಡಿಯೊವನ್ನು ಹಂಚಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿದೆ. ಇದರ ನಡುವೆ ರಾಖಿ ಸಾವಂತ್ ದುಬೈನಿಂದ ಮುಂಬೈಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಆಕೆ ಕ್ಯಾಮೆರಾಮನ್ ಗೆ ಕ್ಲಾಸ್ ತೆಗೆದುಗೊಂಡಿದ್ದಾಳೆ. ಈ ಸಂಬಂಧದ ವೀಡಿಯೋ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.

ಇಷ್ಟಕ್ಕೂ ರಾಖಿಸಾವಂತ್ ಕ್ಯಾಮೆರಾಮನ್ ಗೆ ಕ್ಲಾಸ್ಟ್ ತೆಗೆದುಕೊಂಡಿದ್ದೇಕೆ ಎಂಬುದನ್ನು ನೋಡುವುದಾದರೆ, "ನಿಮ್ಮ ಕ್ಯಾಮರಾ ಎಲ್ಲಿದೆ, ಅದು ನನ್ನ ಎದೆಯ ಮೇಲಿದೆಯೇ ಅಥವಾ ಬೇರೆಲ್ಲಿಯಾದರೂ ಇದೆಯೇ. ನಾನು ನಿಮ್ಮನ್ನು ನಂಬುವುದಿಲ್ಲ ಬಾಯ್ಸ್, ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದಾಗ, ನಿಮ್ಮ ಕ್ಯಾಮೆರಾಗಳು ಬೇರೆಡೆಯೇ ಇರುವುದು ಕಂಡುಬರುತ್ತದೆ. ಈ ತಪ್ಪು ಕೆಲಸ ಮಾಡಬೇಡಿ. ನಾನೊಬ್ಬ ಭಾರತೀಯ ಮಹಿಳೆ" ಎನ್ನುತ್ತಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಜನ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಬಳಕೆದಾರನೊಬ್ಬ, 'ಮೊದಲು ನಿಮ್ಮ ಬಟ್ಟೆಗಳನ್ನು ಸರಿಪಡಿಸಿ' ಎಂದು ಹೇಳಿದ್ದಾನೆ. ಮತ್ತೊರ್ವ ಬಳಕೆದಾರ, 'ಭಾರತೀಯ ಮಹಿಳೆಯರು ಹೀಗಿದ್ದಾರೆಯೇ, ನನಗೆ ಗೊತ್ತೇ ಇರಲಿಲ್ಲ" ಎಂದು ಬರೆದಿದ್ದಾನೆ. ಮೂರನೇ ಬಳಕೆದಾರ, "ಭಾರತೀಯ ಮಹಿಳೆ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾಳೆ" ಎಂದು ಬರೆದಿದ್ದಾರೆ. ಇದಕ್ಕೂ ಮುಂದುವರೆದು ಕಾಮೆಂಟ್ ಮಾಡಿರುವ ಮತ್ತೊರ್ವ ಬಳಕೆದಾರ " ಇದರಲ್ಲಿ ಕ್ಯಾಮೆರಾಮನ್ ತಪ್ಪು ಏನು ಇಲ್ಲ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net