More

    ವಾರ್ಷಿಕವಾಗಿ ಶೇಕಡಾ 45ಕ್ಕೂ ಅಧಿಕ ಲಾಭ ತಂದುಕೊಟ್ಟ ಮ್ಯೂಚುವಲ್ ಫಂಡ್​ಗಳಿವು: ಶೇಕಡಾ 80 ಲಾಭ ನೀಡಿದ ಫಂಡ್​ ಯಾವುದು ಗೊತ್ತೆ?

    ಮುಂಬೈ: 2023ನೇ ವರ್ಷ ಕೊನೆಗೊಳ್ಳುತ್ತಿದ್ದು, ನೂತನ ವರ್ಷ ಸ್ವಾಗತಿಸುವ ದಿನ ಸಮೀಪಿಸುತ್ತಿದೆ. 2023 ವರ್ಷ ಒಂದಿಷ್ಟು ಜನರಿಗೆ ಸಂತಸ; ಮತ್ತೊಂದಿಷ್ಟು ಮಂದಿಗೆ ನಿರಾಸೆ ಮೂಡಿಸಿರಬಹುದು. ಆದರೆ, ಬಹುತೇಕ ಮ್ಯೂಚುವಲ್ ಫಂಡ್​ ಹೂಡಿಕೆದಾರರಲ್ಲಿ ಈ ವರ್ಷವು ಸಂತಸವನ್ನೇ ತಂದಿದೆ.

    ಬಹುತೇಕ ಹೂಡಿಕೆದಾರರು ಈಗಾಗಲೇ ಹೆಚ್ಚಿನ ಇಕ್ವಿಟಿ ಫಂಡ್​ ಯೋಜನೆಗಳಲ್ಲಿ ಉತ್ತಮ ಆದಾಯ ಗಳಿಸಿದ್ದಾರೆ. ಅದರಲ್ಲೂ ಕೆಲವು ಟಾಪ್​ ಪರ್ಫಾಮಿಂಗ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್ ಲಾಭ ಬಂದಿದೆ. ಇವುಗಳಲ್ಲಿ ವಾರ್ಷಿಕವಾಗಿ ಶೇಕಡಾ 80ಕ್ಕೂ ಅಧಿಕ ಪ್ರಾಫಿಟ್​ ನೀಡಿದ ಅಚ್ಚರಿ ಮೂಡಿಸಿದ ಫಂಡ್​ ಕೂಡ ಇದೆ.

    2023ರಲ್ಲಿ ಶೇಕಡಾ 45ಕ್ಕಿಂತ ಹೆಚ್ಚಿನ ಲಾಭವನ್ನು 20 ಫಂಡ್​ ಯೋಜನೆಗಳು ನೀಡಿವೆ. ಇವುಗಳಲ್ಲಿ ಮುಂಚೂಣಿಯಲ್ಲಿರುವುದು ಮಿರಾ ಅಸೆಟ್​ ಎನ್​ವೈಎಸ್​ಇ ಫಂಗ್ ಇಟಿಎಫ್​ (Mirae Asset NYSE FANG ETF) ಫಂಡ್​, 2023ರಲ್ಲಿ ಇದು ಶೇಕಡಾ 80.65 ಲಾಭ ನೀಡಿದೆ. ನಂತರದಲ್ಲಿ ಎಡಲ್​ವೆಸಿಸ್​ ಯುಸ್​ ಟೆಕ್ನಾಲಜಿ ಈಕ್ವಿಟಿ ಫಂಡ್​ ಶೇಕಡಾ 54.97ರಷ್ಟು ಪ್ರಾಫಿಟ್​ ನೀಡಿದೆ. ಈ ಎರಡೂ ಯೋಜನೆಗಳು ವಿದೇಶಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ.

    ಮಹೀಂದ್ರಾ ಮ್ಯಾನುಲೈಫ್ ಸ್ಮಾಲ್ ಕ್ಯಾಪ್ ಫಂಡ್ ಮತ್ತು ನಿಪ್ಪಾನ್ ಇಂಡಿಯಾ ಪವರ್ & ಇನ್ಫ್ರಾ ಫಂಡ್ 2023 ರಲ್ಲಿ ಕ್ರಮವಾಗಿ 50.79% ಮತ್ತು 50.20% ಲಾಭ ನೀಡಿವೆ.

    ಕೋಟಕ್​ ನಾಸ್​ಡಾಕ್​ 100 ಫಂಡ್ ಮತ್ತು ಮಿರಾ ಅಸೆಟ್​ ಗ್ಲೋಬಲ್​ ಎಕ್ಸ್​ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಟೆಕ್ನಾಲಜಿ ಇಟಿಎಫ್​ ಫಂಡ್​ – ಈ ಎರಡು ಅಂತಾರಾಷ್ಟ್ರೀಯ ಫಂಡ್​ಗಳು ಅಂದಾಜು ಶೇಕಡಾ 49ರಷ್ಟು ಗಳಿಕೆಯನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ.

    ಫ್ರಾಂಕ್ಲಿನ್ ಇಂಡಿಯಾ ಆಪರ್ಚುನಿಟೀಸ್ ಫಂಡ್ 2023 ರಲ್ಲಿ ಶೇಕಡಾ 47.93 ನೀಡಿವೆ. ಅಂದಾಜು ಐದು ಇತರ ಯೋಜನೆಗಳು ಶೇಕಡಾ 46ರಷ್ಟು ಪ್ರಾಫಿಟ್​ ನೀಡಿವೆ. ಆರು ಯೋಜನೆಗಳು ಸರಿಸುಮಾರು ಶೇಕಡಾ 45ರಷ್ಟು ಲಾಭ ತಂದಿವೆ.

    ಎಚ್​ಡಿಎಫ್​ಸಿ ಇನ್​ಪ್ರಾಸ್ಟ್ರಕ್ಚರ್​ ಫಂಡ್, ನಾವಿ ನಾಸ್ಡಾಕ್​ ಫಂಡ್​, ಫ್ರಾಂಕ್ಲಿನ್​ ಇಂಡಿಯಾ ಅಪಾರ್ಚುನಿಟೀಸ್​ ಫಂಡ್​, ಐಸಿಐಸಿಐ ಪ್ರುಡೆನ್ಶಿಯಲ್​ ನಾಸ್ಡಾಕ್​ 100 ಇಂಡೆಕ್ಸ್​ ಫಂಡ್​, ಆದಿತ್ಯ ಬಿರ್ಲಾ ಸನ್​ ಲೈಫ್​ ನಾಸ್ಡಾಕ್​ ಫಂಡ್​, ಫ್ರಾಂಕ್ಲಿನ್​ ಇಂಡಿಯಾ ಸ್ಮಾಲರ್​ ಕಂಪನೀಸ್​ ಫಂಡ್​, ಫ್ರಾಂಕ್ಲಿನ್​ ಬಿಲ್ಡ್​ ಇಂಡಿಯಾ ಫಂಡ್​, ಆದಿತ್ಯ ಬಿರ್ಲಾ ಸನ್​ ಲೈಫ್​ ಪಿಎಸ್​ಯು ಈಕ್ವಿಟಿ ಫಂಡ್​, ಬಂಧನ್​ ಸ್ಮಾಲ್ ಕ್ಯಾಪ್​ ಫಂಡ್​, ಆ್ಯಕ್ಸಿಸ್​ ನಾಸ್ಡಾಕ್​ 100 ಫಂಡ್​, ಬಂಧನ್​ ಇನ್ಫ್ರಾಸ್ಟ್ರಕ್ಚರ್​ ಫಂಡ್​, ಇನ್ವೆಸ್ಕೊ ಇಂಡಿಯಾ ಪಿಎಸ್​ಯು ಈಕ್ವಿಟಿ ಫಂಡ್​, ಐಟಿಐ ಸ್ಮಾಲ್​ ಕ್ಯಾಪ್​ ಫಂಡ್, ಮೋತಿಲಾಲ್​ ಓಸ್ವಾಲ್​, ನಾಸ್ಡಾಕ್​ 100 ಫಂಡ್​ ಇವುಗಳಲ್ಲಿ ಸೇರಿವೆ.

    ಸಂಸತ್​ ಭದ್ರತಾ ಲೋಪ ಪರಿಶೀಲಿಸಿದ ಪ್ರಧಾನಿ; ತನಿಖೆಗೆ ಸಮಿತಿ ರಚನೆ

    ಎಲೆಕ್ಟ್ರಿಕ್​ ವಾಹನ ಪ್ರಿಯರಿಗೆ ಸಂತಸದ ಸುದ್ದಿ: ಕಡಿಮೆಯಾಗುತ್ತಲೇ ಸಾಗಿದೆ ಬ್ಯಾಟರಿಗಳ ಬೆಲೆ…

    ಒಂದೇ ದಿನದಲ್ಲಿ ಹೂಡಿಕೆದಾರರಿಗೆ ರೂ. 3.22 ಲಕ್ಷ ಕೋಟಿ ಲಾಭ; ದಾಖಲೆ ಸೃಷ್ಟಿಸಿದ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts