More

    ಎಲೆಕ್ಟ್ರಿಕ್​ ವಾಹನ ಪ್ರಿಯರಿಗೆ ಸಂತಸದ ಸುದ್ದಿ: ಕಡಿಮೆಯಾಗುತ್ತಲೇ ಸಾಗಿದೆ ಬ್ಯಾಟರಿಗಳ ಬೆಲೆ…

    ಮುಂಬೈ: ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (EV) ಮಾರುಕಟ್ಟೆಯು ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆ ಮತ್ತು ಹವಾಮಾನದ ಕಾಳಜಿ ಕಾರಣದಿಂದಾಗಿ ಇವುಗಳ ಜನಪ್ರಿಯತೆ ಹೆಚ್ಚುತ್ತಿದೆ. ಈಗ ಎಲೆಕ್ಟ್ರಿಕ್​ ವಾಹನ ಪ್ರಿಯರಿಗೆ ಶುಭ ಸುದ್ದಿಯೊಂದು ಬಂದಿದೆ.

    ಎಲೆಕ್ಟ್ರಿಕ್​ ವಾಹನಗಳ ಪ್ರಮುಖ ಖರ್ಚು ಎಂದರೆ ಅವುಗಳ ಬ್ಯಾಟರಿ. ಈ ವಾಹನಗಳನ್ನು ಖರೀದಿಸುವವರು ಬ್ಯಾಟರಿಗಳ ನಿರ್ವಹಣೆ, ವೆಚ್ಚದ ಬಗೆಗೆ ತಿಳಿಯಬೇಕಾದದು ಅಗತ್ಯ. ಅದೃಷ್ಟವಶಾತ್, ಈಗ ಬ್ಯಾಟರಿ ಬೆಲೆಗಳು ತೀವ್ರವಾಗಿ ಕುಸಿತ ಕಾಣುತ್ತಿವೆ.

    ಬ್ಲೂಮ್‌ಬರ್ಗ್‌ ಎನ್‌ಇಎಫ್‌ನ ವಾರ್ಷಿಕ ಲಿಥಿಯಂ-ಐಯಾನ್ ಬ್ಯಾಟರಿ ಬೆಲೆ ಸಮೀಕ್ಷೆಯ ಪ್ರಕಾರ, ಈ ವರ್ಷ ಸರಾಸರಿ ಬೆಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ (kWh) 139 ಡಾಲರ್​ಗೆ (11582 ರೂಪಾಯಿ) ಇಳಿದಿದೆ, 2022ರಲ್ಲಿ ಈ ಬೆಲೆಯು 161 ಡಾಲರ್ ಇತ್ತು. ಇದಕ್ಕೆ ಹೋಲಿಸಿದರೆ ಈಗ ಶೇಕಡಾ 14ರಷ್ಟು ಬೆಲೆ ಕುಸಿತವಾಗಿದೆ.

    ಪ್ರಮುಖ ಬ್ಯಾಟರಿ ಲೋಹಗಳ ಬೆಲೆಗಳು, ವಿಶೇಷವಾಗಿ ಲಿಥಿಯಂ ಬೆಲೆಯು ಜನವರಿಯಿಂದ ಸಾಕಷ್ಟು ಕುಸಿದಿದೆ. ಉತ್ಪಾದನೆ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಮುಂದಿನ ವರ್ಷ ಈ ಬೆಲೆಯು ಇನ್ನಷ್ಟು ಕಡಿಮೆಯಾಗಿ, 133 ಡಾಲರ್​ ಆಗಬಹುದು ಎಂದು ಬ್ಲೂಮ್‌ಬರ್ಗ್ ಅಂದಾಜಿಸಿದೆ. ಅಲ್ಲದೆ, ಈ ಬ್ಯಾಟರಿ ಪ್ಯಾಕ್ ಬೆಲೆಗಳು 100 ಡಾಲರ್​ಗೆ (8332 ರೂಪಾಯಿ )ಕುಸಿಯುವ ನಿರೀಕ್ಷೆಯನ್ನೂ ಬ್ಲೂಮ್​ಬರ್ಗ್​ ವ್ಯಕ್ತಪಡಿಸಿದೆ.

    ಹೆಚ್ಚಿನ ಕಾರುಗಳು 30-40 kWh ಬ್ಯಾಟರಿ ಯೂನಿಟ್‌ ಹೊಂದಿರುತ್ತವೆ, ಅಂದರೆ 2023ರಲ್ಲಿ ನೀವು ಭಾರತದಲ್ಲಿನ ಬಹುತೇಕ ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿಗೆ ಅಂದಾಜು 3 ಲಕ್ಷದಿಂದ 4.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದಾಜಿನ ಪ್ರಕಾರ, ಆಟೋ ತಯಾರಕರು ಬ್ಯಾಟರಿಯನ್ನು ಬದಲಾಯಿಸಲು ಪ್ರತಿ kWh ಗೆ ಅಂದಾಜು 15,000-Rs 20,000 ಶುಲ್ಕ ವಿಧಿಸುತ್ತಿದ್ದಾರೆ. ಜಾಗತಿಕವಾಗಿ ಬ್ಯಾಟರಿಗಳ ಬೆಲೆ ಪ್ರತಿ kWh ಗೆ ಸರಾಸರಿ 11582 ರೂಪಾಯಿ ಇದ್ದರೂ ಆಟೋ ತಯಾರಕರು ಭಾರತದಲ್ಲಿ ಸ್ವಲ್ಪ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಇನ್ನು ಮುಂದಾದರೂ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಭಾರತದ ವಾಹನ ತಯಾರಕರು ದರ ಪಡೆದುಕೊಂಡರೆ ಇವಿ ವಾಹನಗಳ ಖರೀದಿದಾರರಿಗೆ ಭರ್ಜರಿ ಉಳಿತಾಯವಾಗುತ್ತದೆ.

    ಒಂದೇ ದಿನದಲ್ಲಿ ಹೂಡಿಕೆದಾರರಿಗೆ ರೂ. 3.22 ಲಕ್ಷ ಕೋಟಿ ಲಾಭ; ದಾಖಲೆ ಸೃಷ್ಟಿಸಿದ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ

    ಲೋಕಸಭೆಯಲ್ಲಿ ಐವರು ಕಾಂಗ್ರೆಸ್​ ಸಂಸದರು; ರಾಜ್ಯಸಭೆಯಲ್ಲಿ ಟಿಎಂಸಿಯ ಡೆರೆಕ್​ ಅಮಾನತು

    ‘ಸಿಂಗ್ ಈಸ್ ಕಿಂಗ್’: ಹೀಗೆ ಶಶಿ ತರೂರ್ ಶ್ಲಾಘಿಸಿದ ಸಂಸದ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts