More

    ಬ್ಯಾಟರಿ ಉತ್ಪಾದನೆ ಕಂಪನಿ ನಷ್ಟದಿಂದ ಲಾಭದತ್ತ: ಷೇರು ಬೆಲೆಯಲ್ಲಿ ಚೇತರಿಕೆ

    ಮುಂಬೈ: ಬ್ಯಾಟರಿ ತಯಾರಿಕೆ ಕಂಪನಿ ಎವೆರೆಡಿ ಇಂಡಸ್ಟ್ರೀಸ್ ಇಂಡಿಯಾ, ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು ನಷ್ಟದಿಂದ ಲಾಭದತ್ತ ಹೊರಳಿದೆ.

    2923-24ನೇ ಹಣಕಾಸು ವರ್ಷದ ಮಾರ್ಚ್​ ತ್ರೈಮಾಸಿಕದಲ್ಲಿ ಎವರೆಡಿ ಇಂಡಸ್ಟ್ರೀಸ್ ನಿವ್ವಳ ಲಾಭ 8 ಕೋಟಿ ರೂ. ಮಾಡಿದೆ. 2022-23ನೇ ಹಣಕಾಸು ವರ್ಷದ ಮಾರ್ಚ್​ ತ್ರೈಮಾಸಿಕದಲ್ಲಿ ಕಂಪನಿಯು ರೂ 14.39 ಕೋಟಿ ನಷ್ಟ ಅನುಭವಿಸಿತ್ತು.

    ಮಾರ್ಚ್​ ತ್ರೈಮಾಸಿಕದಲ್ಲಿ ಆದಾಯವು 281 ಕೋಟಿ ರೂ.ಗೆ ಕುಸಿದಿದೆ ಎಂದು ಕಂಪನಿ ಹೇಳಿದೆ. ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಸ್ವಲ್ಪಮಟ್ಟಿಗೆ ಕುಸಿದಿದೆ.

    ಕಂಪನಿಯ ಆದಾಯವು ಕಳೆದ ಹಣಕಾಸು ವರ್ಷದಲ್ಲಿ 1,314.2 ಕೋಟಿ ರೂ. ಆಗಿ, ಸ್ವಲ್ಪಮಟ್ಟಿಗೆ ಕುಸಿದಿದೆ, ಇದು 2022-23 ರ ಹಣಕಾಸು ವರ್ಷದಲ್ಲಿ 1,327.7 ಕೋಟಿ ರೂ. ಇತ್ತು. 2023-24ನೇ ಹಣಕಾಸು ವರ್ಷದಲ್ಲಿ, ಕಂಪನಿಯ ಲಾಭವು 66.7 ಕೋಟಿ ರೂಪಾಯಿಗಳಾಗಿದ್ದು, ಇದು ಶೇಕಡಾ 231 ರಷ್ಟು ಜಿಗಿತವಾಗಿದೆ, ಇದು 2022-23 ರಲ್ಲಿ 20.1 ಕೋಟಿ ಆಗಿತ್ತು.

    ಈ ಹಿನ್ನೆಲೆಯಲ್ಲಿ ಎವೆರೆಡಿ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‌ನ ಷೇರುಗಳ ಬೆಲೆ ಶೇ. 0.99% ರಷ್ಟು ಏರಿಕೆಯಾಗಿ ರೂ. 357.75 ತಲುಪಿದವು. ಆಗಸ್ಟ್ 2023 ರಲ್ಲಿ ಈ ಷೇರಿನ ಬೆಲೆ 441.55 ರೂ. ಇತ್ತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿತ್ತು. ಮೇ 2023 ರಲ್ಲಿ, ಈ ಷೇರಿನ ಬೆಲೆ ರೂ 286.60 ರ ಮಟ್ಟವನ್ನು ಮುಟ್ಟಿತ್ತು.

    ಈ ಕಂಪನಿಯಲ್ಲಿ ಪ್ರವರ್ತಕರು ಶೇಕಡಾ 43.20 ಪಾಲನ್ನು ಹೊಂದಿದ್ದರೆ, ಸಾರ್ವಜನಿಕ ಷೇರುದಾರರು ಶೇಕಡಾ 56.80 ಪಾಲನ್ನು ಹೊಂದಿದ್ದಾರೆ. ಪ್ರವರ್ತಕರಲ್ಲಿ ಯಶೋದರಾ ಖೇತಾನ್, ಆದಿತ್ಯ ಖೇತಾನ್ ಮುಖ್ಯ ಪ್ರವರ್ತಕರಾಗಿದ್ದಾರೆ.

    ಕಂಪನಿ ತ್ರೈಮಾಸಿಕ ಲಾಭ 41% ಹೆಚ್ಚಳ: ಐಟಿ ಸ್ಟಾಕ್​ ಬೆಲೆ ಏರಿಕೆ, ಖರೀದಿ ಜೋರು

    ಟಿಸಿಎಸ್​ vs ಎಚ್​ಸಿಎಲ್​ ಟೆಕ್ vs ವಿಪ್ರೋ vs ಇನ್ಫೋಸಿಸ್: ತ್ರೈಮಾಸಿಕ ಫಲಿತಾಂಶಗಳ ನಂತರ ಯಾವ ಸ್ಟಾಕ್ ಖರೀದಿಸಬೇಕು?

    ಇರೇಡಾಗೆ ದೊರೆಯಿತು ನವರತ್ನ ಸ್ಥಾನಮಾನ: ಈ ಪಿಎಸ್​ಯು ಷೇರು ಖರೀದಿ ಲಾಭದಾಯಕ ಏಕೆಂದು ವಿವರಿಸಿದ್ದಾರೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts