More

    ಮೂಗುತಿ ನುಂಗಿದ ಯುವತಿ! ವೈದ್ಯರಿಂದ ಬಯಲಾಯ್ತು ಭಯಾನಕ ಸಂಗತಿ, ಇದು ನಂಗೆ ಗೊತ್ತೇ ಇಲ್ಲ ಅಂತಾಳೆ ಈಕೆ

    ಕಿರಿಯ ವಯಸ್ಕರು ಆಟ ಆಡುವಾಗ ತಿಳಿಯದೆ ಏನಾದರೂ ಎಡವಟ್ಟು ಮಾಡಿಕೊಳ್ಳುವುದು, ನಾಣ್ಯ ಅಥವಾ ಇತರೆ ವಸ್ತುಗಳನ್ನು ನುಂಗಿ ಜೀವಕ್ಕೆ ತೊಂದರೆ ತಂದುಕೊಂಡ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ. ಇಂತಹ ಅನೇಕ ಘಟನೆಗಳ ನಿದರ್ಶನಗಳು ಇಂದು ನಮ್ಮ ಕಣ್ಣಮುಂದಿವೆ. ಆದರೆ, ದೊಡ್ಡವರು ಗೊತ್ತಿಲ್ಲದೆಯೂ ಈ ರೀತಿಯ ತಪ್ಪುಗಳಿಗೆ ಸಿಲುಕಲ್ಲ. ಕಾರಣ, ಅವರು ಹೆಚ್ಚು ಜವಾಬ್ದಾರಿಯಿಂದ ಇರುತ್ತಾರೆ ಎಂಬುದು. ಆದರೆ, ಇಲ್ಲಿ ಅದೇ ಉಲ್ಟಾ ಹೊಡೆದಿದೆ.

    ಇದನ್ನೂ ಓದಿ: ಲೋಕ ಸಮರ 2024: ಮತದಾನ ಕುರಿತು ತೇಜಸ್ವಿ ಸೂರ್ಯ ಅಸಮಾಧಾನ! ಬೆಂಬಲಿಗರಿಗೆ ಕೊಟ್ಟ ಸಂದೇಶವಿದು…

    ಇಲ್ಲೊಬ್ಬರು ಮಹಿಳೆ ತಾವು 16-17 ವರ್ಷಗಳ ಹಿಂದೆ ಮದುವೆಯಾದಾಗ ಧರಿಸಿದ್ದ ಮೂಗುತಿಯ ಪಿನ್​ ಸ್ಕ್ರೂವನ್ನು ಲೂಸ್​ ಆಗಿರಬಹುದು ಎಂದು ಭಾವಿಸಿ, ಅದನ್ನು ಬದಲಾಯಿಸಲು ಹಿಂದೆ-ಮುಂದೆ ತಿರುಗಿಸಿದ್ದಾಳೆ. ಈ ವೇಳೆ ಆಕೆಯ ಅರಿವಿಗೆ ಬಾರದಂತೆ ಪಿನ್ ಕೈಯಿಂದ ಜಾರಿ, ನೇರವಾಗಿ ಆಕೆಯ ಶ್ವಾಸನಾಳದೊಳಗೆ ಸಿಲುಕಿಕೊಂಡಿದ್ದು, ಬಳಿಕ ಹೊರಬಂದಿಲ್ಲ. ಆದರೆ ಇದ್ಯಾವುದು ಆಕೆಗೆ ಆ ಕ್ಷಣಕ್ಕೂ ಗೊತ್ತಾಗಿಲ್ಲ. ಅದಾಗಿ ಕೆಲವು ದಿನಗಳಾದರೂ ತಿಳಿದುಬಂದಿಲ್ಲ.

    ಮಹಿಳೆಯನ್ನು ಸಾಹು ಎಂದು ಹೇಳಲಾಗಿದ್ದು, “ಸ್ಕ್ರೂ ಲೂಸ್ ಆಗಿರಬಹುದು ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅದನ್ನು ಸರಿಪಡಿಸಿಕೊಳ್ಳುವಾಗ ದೀರ್ಘವಾಗಿ ಉಸಿರು ಎಳೆದುಕೊಂಡೆ, ತಕ್ಷಣವೇ ಪಿನ್ ಶ್ವಾಸನಾಳದಲ್ಲಿ ಸಿಲುಕಿ, ಅಲ್ಲೇ ಉಳಿದುಕೊಂಡಿದೆ. ಇದಾದ ಕೆಲವು ದಿನಗಳ ನಂತರ ನನಗೆ ಉಸಿರಾಟದ ತೊಂದರೆ, ಕೆಮ್ಮು ಮತ್ತು ನ್ಯುಮೋನಿಯಾ ಲಕ್ಷಣಗಳು ಕಾಡತೊಡಗಿತು. ಆಗ ಈ ಬಗ್ಗೆ ವೈದ್ಯರ ಬಳಿ ದೂರು ನೀಡಿದೆ” ಎಂದಿದ್ದಾರೆ.

    ಇದನ್ನೂ ಓದಿ: ‘ಲಂಚವಿಲ್ಲದೇ ಬಂಗಾಳದಲ್ಲಿ ಏನೂ ಆಗುವುದಿಲ್ಲ’: ಮಮತಾ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    “ಮಾರ್ಚ್‌ನಲ್ಲಿ ವೈದ್ಯರನ್ನು ಭೇಟಿ ಮಾಡಿದಾಗ ಈ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿತು. ಆಗ ನಿಜಕ್ಕೂ ನನಗೆ ನಂಬಲು ಅಸಾಧ್ಯವಾಯಿತು. ಈ ಹಿಂದೆ ಮೂಗುತಿಯಿಂದ ಗಾಯದಿಂದ ಈ ರೋಗಲಕ್ಷಣಗಳಿಗೆ ಕಾರಣವಿರಬಹುದು ಎಂದು ನಾನು ಭಾವಿಸಿದ್ದೆ” ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸಿಟಿ ಸ್ಕ್ಯಾನ್​ನಲ್ಲಿ ಆಕೆಯ ಶ್ವಾಸಕೋಶದಲ್ಲಿ ಸ್ಕ್ರೂ ಇರುವುದು ಪತ್ತೆಯಾಗಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದ ವೈದ್ಯರು, ಈ ಪ್ರಕರಣ ಅತ್ಯಂತ ಅಪರೂಪ ಎಂದು ಹೇಳಿದ್ದಾರೆ,(ಏಜೆನ್ಸೀಸ್). 

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts