More

    ‘ಲಂಚವಿಲ್ಲದೇ ಬಂಗಾಳದಲ್ಲಿ ಏನೂ ಆಗುವುದಿಲ್ಲ’: ಮಮತಾ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಕೋಲ್ಕತ್ತಾ: ಲಂಚವಿಲ್ಲದೆ ಪಶ್ಚಿಮ ಬಂಗಾಳದಲ್ಲಿ ಏನೂ ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಕಲಬುರಗಿಗೆ ಬಂದು ವಿಜಯಪುರಕ್ಕೆ ತೆರಳಿದ ರಾಹುಲ್ ಗಾಂಧಿ: ಸಂಜೆ ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಆಗಮನ

    ಉತ್ತರ ಮಾಲ್ಡಾದಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಗಾಳದಲ್ಲಿ ಲಂಚ ಕೊಡದೆ ಯಾವ ಕೆಲಸವನ್ನೂ ಮಾಡಿಕೊಡುವುದಿಲ್ಲ. ಅಲ್ಲಿನ ಆಡಳಿತ ಯಂತ್ರಾಂಗ ಭ್ರಷ್ಟಾಚಾರದ ಕೂಪವಾಗಿದೆ. ಅವರು ರೈತರನ್ನು ಸಹ ಬಿಡಲಿಲ್ಲ. ಟಿಎಂಸಿ ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. 26000 ಕುಟುಂಬಗಳು ಉದ್ಯೋಗವಿಲ್ಲದೆ ಉಳಿದಿವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಮಾಲ್ಡಾದ ರೈತರು ಉತ್ಪಾದಿಸುವ ಮಾವು ಮತ್ತು ‘ಮಖಾನಾ’ ವಿಶ್ವವಿಖ್ಯಾತಿ ಪಡೆದಿವೆ. ಈ ರೈತರ ಆದಾಯ ಹೆಚ್ಚಬೇಕು, ಅದಕ್ಕಾಗಿ ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸುತ್ತೇವೆ. ಅದರಲ್ಲಿಯೂ ಟಿಎಂಸಿ ತಮ್ಮ ಪರ್ಸೆಂಟೇಜ್​ ಪಾಲು ಕೇಳುತ್ತದೆ ಎಂದು ವ್ಯಂಗ್ಯವಾಡಿದರು.

    ಟಿಎಂಸಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಸಂಘರ್ಷದಲ್ಲಿರುವಂತೆ ನಟಿಸುತ್ತಿವೆ. ಆದರೆ ಸತ್ಯ ಬೇರೇ ಇದೆ. ಈ ಎರಡೂ ಪಕ್ಷಗಳ ಪಾತ್ರ ಮತ್ತು ಸಿದ್ಧಾಂತ ಒಂದೇ. ತುಷ್ಟೀಕರಣವು ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಸಾಮಾನ್ಯ ವಿಷಯವಾಗಿದೆ. ಅದಕ್ಕಾಗಿ ಅವೆರಡೂ ಪಕ್ಷಗಳು ಏನು ಬೇಕಾದರೂ ಮಾಡಬಹುದು. ನಮ್ಮ ದೇಶದ ಸುರಕ್ಷತೆಗಾಗಿ ನಾವು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ಅವರು ಹಿಂಪಡೆಯಲು ಬಯಸುತ್ತಾರೆ. ಹೀಗಾಗಿ ಟಿಎಂಸಿ ಮತ್ತು ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

    ಲೋಕಸಭಾ ಚುನಾವಣೆ 2024: ಮತದಾರನ ಕುಗ್ಗದ ಉತ್ಸಾಹ- ಬೆಳಗ್ಗೆ 9 ಗಂಟೆಯವರೆಗೆ ಶೇ. 9.21 ದಾಖಲೆ ಮತದಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts