More

    ಕಪ್ಪು ಕುಳಿಗಳ ಅಧ್ಯಯನಕ್ಕಾಗಿ ಉಪಗ್ರಹ ಉಡಾವಣೆ ಮಾಡಿದ ಇಸ್ರೋ

    ನವದೆಹಲಿ: ಕಪ್ಪುಕುಳಿಗಳ ಅಧ್ಯಯನಕ್ಕಾಗಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ವರ್ಷದ ಮೊದಲ ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ. ಎಕ್ಸ್‌ಪೋಸ್ಯಾಟ್ (XPoSat) ಅನ್ನು ತನ್ನ ಪಿಎಸ್‌ಎಲ್‌ವಿ ಸಿ58 (PSLV-C58) ರಾಕೆಟ್ ಮೂಲಕ ಉಡಾವಣೆ ಮಾಡಿದೆ.

    ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 2023 ರಲ್ಲಿ ಚಂದ್ರಯಾನ -3 ಯೋಜನೆ ಮೂಲಕ ಚಂದ್ರನನ್ನು ತಲುಪಿದ ಬಳಿಕ ಮತ್ತು ಆದಿತ್ಯ ಎಲ್ -1 ಮಿಷನ್ ಮೂಲಕ ಸೂರ್ಯನೆಡೆಗೆ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಇಸ್ರೋ ಈ ವರ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟಿದೆ.

    ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ವಿಶೇಷ ಖಗೋಳ ವೀಕ್ಷಣಾಲಯವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವಿಶ್ವದ ಎರಡನೇ ದೇಶ ಭಾರತವಾಗಿದೆ. ಎಕ್ಸ್‌ಪೋಸ್ಯಾಟ್ ಸಂಶೋಧನೆಗಾಗಿ ಒಂದು ರೀತಿಯ ವೀಕ್ಷಣಾಲಯವಾಗಿದೆ, ಇದು ಬಾಹ್ಯಾಕಾಶದಿಂದ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತದೆ.

    ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಮುಸ್ಲಿಮರು ಜೈ ಶ್ರೀರಾಮ್​ ಘೋಷಣೆ ಕೂಗಬೇಕು: ಆರ್​ಎಸ್​ಎಸ್​ ನಾಯಕ

    ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸುವುದು, ಸೂರ್ಯನ ಅಂಗಳದಿಂದ ಅಧ್ಯಯನಕ್ಕಾಗಿ ಮಾದರಿಗಳನ್ನು ತರುವ ಯೋಜನೆಗಳ ಜಾರಿಗೆ ಈಗ ಸಿದ್ಧತೆ ನಡೆದಿದೆ. ಈ ಎರಡೂ ಯೋಜನೆಗಳ ಪ್ರಯೋಗಾರ್ಥ ಪರೀಕ್ಷೆಯು 2024ರಲ್ಲಿ ನಿಗದಿಯಾಗಿದೆ. ಭಾರತೀಯ ವಿಜ್ಞಾನಿಗಳ ಸಂಶೋಧನೆ ಗುರಿ ಚಂದಿರ ಮತ್ತು ಸೂರ್ಯನ ಅಂಗಳಕ್ಕಷ್ಟೇ ಸೀಮಿತವಾಗಿಲ್ಲ. ಸಮುದ್ರದಾಳದ ಸಂಶೋಧನೆಗೂ ಒತ್ತು ನೀಡಿದ್ದು, ಸಮುದ್ರದಲ್ಲಿ 500 ಮೀಟರ್‌ ಆಳಕ್ಕೆ ಜಲಾಂತರ್ಗಾಮಿಗಳನ್ನು ಮಾರ್ಚ್‌ನಲ್ಲಿ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

    ಜನವರಿ 6ರಂದು ಸಂಜೆ 4ಗಂಟೆಗೆ ಸರಿಯಾಗಿ ಆದಿತ್ಯ ಎಲ್‌ –1 ಉಪಗ್ರಹವನ್ನು ಲಾಗ್ರೇಂಜ್‌ ಪಾಯಿಂಟ್‌–1ಕ್ಕೆ ತಲುಪಿಸುವ ಕಾರ್ಯ ನಡೆಯಲಿದೆ. ಈ ಪ್ರಕ್ರಿಯೆಯು ಮುಂದಿನ ಐದು ವರ್ಷ ಕಾಲ ಸೂರ್ಯನ ಅನಿಯಮಿತ ಅಧ್ಯಯನಕ್ಕೆ ನೆರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts