More

    ರಾಮಮಂದಿರ ಉದ್ಘಾಟನೆಯಂದು ಮುಸ್ಲಿಮರು ಜೈ ಶ್ರೀರಾಮ್​ ಘೋಷಣೆ ಕೂಗಬೇಕು: ಆರ್​ಎಸ್​ಎಸ್​ ನಾಯಕ

    ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನೆರವೇರಲಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರದಿಂದ  ಕಾಯುತ್ತಿದ್ದಾರೆ. ಈ ನಡುವೆ ಪವಿತ್ರ ರಾಮಮಂದಿರಕ್ಕೆ  ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಭಕ್ತರು ಒಂದಲ್ಲಾ ರೂಪದಲ್ಲಿ ರಾಮಮಂದಿರಕ್ಕೆ ತಮ್ಮ ಕೈಲಾದಷ್ಟು ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ.

    ಜನವರು 22 ರಂದು ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಮುಸ್ಲಿಮರು ಮಸೀದಿ ಮತ್ತು ದರ್ಗಾಗಳಲ್ಲಿ ಜೈ ಶ್ರೀರಾಮ್​ ಘೋಷಣೆಗಳನ್ನು ಕೂಗಬೇಕು ಎಂದು ಆರ್​ಎಸ್​ಎಸ್​ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಮನವಿ ಮಾಡಿದ್ದಾರೆ.

    ಭಾನುವಾರ ನಡೆದ ರಾಮಮಂದಿರ, ರಾಷ್ಟ್ರ ಮಂದಿರ್-ಎ ಹೆರಿಟೇಜ್​​ ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಇಂದ್ರೇಶ್​ ಕುಮಾರ್, ಶೇ. 99 ಪ್ರತಿಶತದಷ್ಟು ಮುಸ್ಲಿಮರು ಮತ್ತು ಇತರ ಹಿಂದೂಗಳಲ್ಲದವರು ದೇಶಕ್ಕೆ ಸೇರಿದವರುನಮಗೆ ಸಾಮಾನ್ಯ ಪೂರ್ವಜರಿರುವುದರಿಂದ ಅವರು ಹಾಗೆ ಮುಂದುವರಿಯುತ್ತಾರೆ. ಅವರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ, ದೇಶವನ್ನಲ್ಲ ಎಂದಿದ್ದಾರೆ.

    Ayodhya

    ಇದನ್ನೂ ಓದಿ: ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ; ಕಾರಣ ಹೀಗಿದೆ

    ಇಸ್ಲಾಂ, ಕ್ರಿಶ್ಚಿಯನ್, ಸಿಖ್​ಅಥವಾ ಇನ್ನಾವುದೇ ಧರ್ಮವನ್ನು ಆಚರಿಸುವ ಜನರು ‘ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವ’ಕ್ಕಾಗಿ ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಅಯೋಧ್ಯೆಯ ಸಮರ್ಪಣಾ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ನಾವೆಲ್ಲರೂ ಈ ದೇಶದವರು, ವಿದೇಶಿಯರೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಮಸೀದಿ, ದರ್ಗಾ ಅಲ್ಲದೇ ಗುರುದ್ವಾರಗಳು, ಚರ್ಚ್‌ಗಳು ಮತ್ತು ಎಲ್ಲಾ ಧಾರ್ಮಿಕ ಸ್ಥಳಗಳು ತಮ್ಮ ಇಬಾದತ್ ಗಾಹ್ ಮತ್ತು ಪ್ರಾರ್ಥನಾ ಮಂದಿರಗಳನ್ನು ಜನವರಿ 22 ರಂದು 11-2 ಘಂಟೆಯ ನಡುವೆ ಭವ್ಯವಾಗಿ ಅಲಂಕರಿಸಲು ಮತ್ತು ದೊಡ್ಡ ಪರದೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ರಾಮ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವನು ಎಂದು ಆರ್​ಎಸ್​ಎಸ್​ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts