ಬಸ್​ ಅಡ್ಡಗಟ್ಟಿ ಚಾಲಕ-ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಯುವಕರು; ಸಾರಿಗೆ ಇಲ್ಲದೇ ಜನರ ಪರದಾಟ

Assault Case

ಬೆಳಗಾವಿ: ಬಸ್​ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಯುವಕರ ಗುಂಪೊಂದು ಬಸ್ಸನ್ನು ಅಡ್ಡಗಟ್ಟಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿ ನಡೆದಿದೆ.

blank

ಇತ್ತ ಪುಂಡರ ಗುಂಪು ಹಲ್ಲೆ ಮಾಡಿ ಪರಾರಿಯಾಗುತ್ತಿದ್ದಂತೆ ಸಾರಿಗೆ ನೌಕರರು ವೃತ್ತಿ ಸುರಕ್ಷತೆ ನೀಡುವಂತೆ ಆಗ್ರಹಿಸಿ ಬೈಲಹೊಂಗಲ ಪೋಲಿಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಳು ಮತ್ತೊಬ್ಬ ಸ್ಟಾರ್ ನಟಿ; ಈಕೆ ತಂದೆ ಕೂಡ ಖ್ಯಾತ ರಾಜಕಾರಣಿ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಸ್​ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಒಳಗೊಂಡಂತೆ ಮುಸ್ಲಿಂ ಯುವಕರ ಗುಂಪೊಂದು ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇತ್ತ ಸಾರಿಗೆ ನೌಕರರು ಹಲ್ಲೆ ಖಂಡಿಸಿ ಬೈಲಹೊಂಗಲ ಠಾಣೆ ಮುಂದೆ ಪ್ರತಿಭಟಿಸಿದ ಪರಿಣಾಮ ಬೇರೆ ಊರುಗಳಿಗೆ ತೆರಳಬೇಕಿದ್ದ ಜನರು ಬಸ್​ಗಳು ಸಿಗದೆ ಹೈರಣಾಗಿದ್ದು ಮಾತ್ರ ಸುಳ್ಳಲ್ಲ.

Share This Article
blank

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

blank