More

    ಐಪಿಎಲ್​ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

    ಹೈದರಾಬಾದ್: ಇಲ್ಲಿನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 41ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಸನ್​ರೈಸರ್ಸ್​​ ಹೈದರಾಬಾದ್​ ಸವಾಲನ್ನು ಎದುರಿಸಲಿದ್ದು, ಉಭಯ ತಂಡಗಳಿಗೆ ಈ ಪಂದ್ಯ ಮಹತ್ವವೆನ್ನಿಸಿದೆ.

    ಹಾಲಿ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಆರ್​ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 8 ಪಂದ್ಯಗಳಲ್ಲಿ 1 ಶತಕ ಒಳಗೊಂಡಂತೆ 379 ರನ್​ ಸಿಡಿಸಿ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಲಿ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ವಿರಾಟ್​ ಕೊಹ್ಲಿ ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲೂ ದಾಖಲೆ ಬರೆಯುವ ಮತ್ತೊಂದು ಅವಕಾಶವನ್ನು ಹೊಂದಿದ್ದಾರೆ.

    Virat Kohli

    ಇದನ್ನೂ ಓದಿ: ಸಿಎಸ್​ಕೆ ಸೋಲಿಗೆ ಧೋನಿಯನ್ನು ದೂಷಿಸಿ; ಎಲ್​ಎಸ್​ಜಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ

    ಎಸ್​​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 81 ರನ್​ ಗಳಿಸಿದರೆ ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಹೆಸರಿನಲ್ಲಿರುವ ಎಲೈಟ್​ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಒಂದು ವೇಳೆ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲಿ 81 ರನ್​ ಗಳಿಸಲು ಶಕ್ತರಾದರೆ ಐಪಿಎಲ್​ನಲ್ಲಿ ಎಸ್​ಆರ್​ಎಚ್​ ವಿರುದ್ಧ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ವಿರಾಟ್​ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಳ್ಳಲಿದ್ದಾರೆ.

    ಹಾಲಿ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಸೋತು 1 ರಲ್ಲಿ ಗೆದ್ದಿರುವ ಫಾಫ್​ ಡು ಪ್ಲೆಸಿಸ್​ ನೇತೃತ್ವದ ಆರ್​ಸಿಬಿಯೂ ಪ್ಲೇಆಫ್​ ಹಾದಿಯನ್ನು ಕಠಿಣವಾಗಿದೆ. ಸನ್​ರೈಸರ್ಸ್​ ಪಾಲಿಗೆ ಪ್ಲೇ ಆಫ್​ ಹಾದಿ ಬಹತೇಕ ಸುಗಮವಾಗಿದ್ದು, ಪ್ಯಾಟ್​ ಕಮ್ಮಿನ್ಸ್​ ಪಡೆಯೂ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಎರಡರಲ್ಲಿ ಸೋಲುಂಡಿದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಎಸ್​​ಆರ್​ಎಚ್​ ಸಜ್ಜಾಗಿದ್ದು, ಅಂತಿಮವಾಗಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts