ಮುಂಬೈ: 2022ರಲ್ಲಿ ಬಿಡುಗಡೆಯಾದ ಸೀತಾ ರಾಮಂ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಮೃಣಾಲ್ ಠಾಕೂರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮಂ ಚಿತ್ರದಲ್ಲಿನ ಅವರ ಪಾತ್ರದಂತೆ ನಿಜಜೀವನದಲ್ಲೂ ಇರಬೇಕೆಂದು ಅಭಿಮಾನಿಗಳು ಅಪೇಕ್ಷೊಇಸಿದ್ದರು. ಅದರೆ, ಮೃಣಾಲ್ ಠಾಕೂರ್ ಅದಕ್ಕೆ ವಿರುದ್ಧವಾಗಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ನಟಿ ಮೃಣಾಲ್ ಠಾಕೂರ್ ಮತ್ತೊಮ್ಮೆ ಸುದ್ದಿಯಾಗಿದ್ದು, ಈ ಬಾರಿ ಉಡುಗೆಯಿಂದಲ್ಲ ಬದಲಾಗಿ ತಮ್ಮ ಹೇಳಿಕೆಯಿಂದ ಎಂಬುದು ವಿಶೇಷ.
ಕಳೆದ ಕೆಲ ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ನಟಿ ಮೃಣಾಲ್ ಠಾಕೂರ್ ಎಗ್ ಫ್ರೀಜ್ ಮಾಡಿ ಮಕ್ಕಳನ್ನು ಪಡೆಯೋ ಆಲೋಚನೆ ಇರುವುದಾಗಿ ಹೇಳಿಕೊಂಡಿದ್ದರು. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ನಾನು ಮನಸ್ಸು ಮಾಡಿದರೆ ಜನಾರ್ದನ ರೆಡ್ಡಿಯನ್ನು ಬೆತ್ತಲೆಯಾಗಿ ನಿಲ್ಲಿಸುವೆ: ಸಚಿವ ಶಿವರಾಜ್ ತಂಗಡಗಿ
ನಟಿ ಮೃಣಾಲ್ ಹೇಳಿದ್ದೇನು?
ಸಂಬಂಧ ತುಂಬಾ ಕಷ್ಟ ಏಕೆಂದರೆ ಮೊದಲಿಗೆ ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥವಾಗಬೇಕಿದೆ. ಏಕೆಂದರೆ ಉತ್ತಮ ಒಡನಾಟ ಇದ್ದರೆ ಮಾತ್ರ ಸಂಬಂಧಗಳು ಗಟ್ಟಿಯಾಗುತ್ತವೆ ಎಂಬುದು ನನ್ನ ಅನಿಸಿಕೆ. ನಾನು ಕೂಡ ಎಗ್ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮದುವೆಯಾಗದೇನೆ ಮಗು ಪಡೆಯಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಬೆಳಿಗ್ಗೆ ಏಳಲು ಮನಸ್ಸೇ ಇಲ್ಲದ ದಿನಗಳು ಇದ್ದವು. ನನಗೆ ಹಾಸಿಗೆಯಿಂದ ಏಳಲು ಮನಸ್ಸೇ ಬರುತ್ತಿರಲಿಲ್ಲ. ಆದಾಗ್ಯೂ ನಾನು ಎದ್ದೆ. ಬೇರೆಯವರಿಗಾಗಿ ಅಲ್ಲ, ನನಗಾಗಿ. ನಮಗೆ ಬೇಸರ ಆದರೆ, ನಮ್ಮ ಕುಟುಂಬದವರನ್ನು ಬಿಟ್ಟು ಬೇರಾರೂ ಆ ಬಗ್ಗೆ ಕೇರ್ ಮಾಡುವುದಿಲ್ಲ ಎಂದು ನಟಿ ಮೃಣಾಲ್ ಠಾಕೂರ್ ಟ್ರೋಲ್ ವಿಚಾರವಾಗಿ ಕುಟುಂಬದವರು ನೀಡಿದ ಬೆಂಬಲದ ಕುರಿತಾಗಿ ಹೇಳಿಕೊಂಡಿದ್ದಾರೆ.