More

    ಹೊಸ ವರ್ಷಾಷರಣೆ 2024; ನ್ಯೂ ಇಯರ್​ ವೆಲ್​ಕಮ್ ಮಾಡಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?

    ನವದೆಹಲಿ: ವಿಶ್ವಾದಾದ್ಯಂತ ಹೊಸ ವರ್ಷಾಚರಣೆ ಜೋರಾಗಿದ್ದು, ಹರ್ಷೋದ್ಗಾರ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಆದರೆ, ಯಾವ ದೇಶ ಮೊದಲಿಗೆ ಹೊಸ ವರ್ಷವನ್ನು ಸ್ವಾಗತಿಸಿತ್ತು ಎಂಬ ಕುತೂಹಲಕಾರಿ ಅಂಶ ತಿಳಿಯೋಣ ಬನ್ನಿ.

    ಫೆಸಿಫಿಕ್ ಸಾಗರದ ಕಿರಿಬತಿ (Kiribati) ಎಂಬ ದ್ವೀಪ ರಾಷ್ಟ್ರ 2024ರ ಹೊಸ ವರ್ಷವನ್ನು ಮೊದಲು ಸ್ವಾಗತಿಸಿತು. ನಂತರ ಅದರ ಸನಿಹದ ನ್ಯೂಜಿಲೆಂಡ್ ಹೊಸ ವರ್ಷವನ್ನು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಲೇಸರ್​ ಶೋ ಆಯೋಜಿಸುವ ಮೂಲಕ ಸ್ವಾಗತಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಆ ನಂತರ ಆಸ್ಟ್ರೇಲಿಯಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಹೊಸ ವರ್ಷ ಸ್ವಾಗತಿಸಿದವು. ಆಸ್ಟ್ರೇಲಿಯಾದ ನಗರ ಸಿಡ್ನಿಯ ಒಪೆರಾ ಹೌಸ್ ಬಳಿ ಚಿತ್ತಾಕರ್ಷಕ ಬಾಣ ಬಿರುಸುಗಳನ್ನು ಸಿಡಿಸಿ ಸ್ವಾಗತ ಮಾಡಲಾಯಿತು. ಇದನ್ನು ವೀಕ್ಷಿಸಲು ಜನಸ್ತೋಮವೇ ಹರಿದು ಬಂದಿತ್ತು. ಇತ್ತ ಭಾರತದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದ್ದು ವರ್ಷದ ಕೊನೆ ದಿನ ಭಾನುವಾರವಾಗಿದ್ದರಿಂದ ಪ್ರವಾಸಿ ತಾಣಗಳು, ಹೋಟೆಲ್, ರೆಸಾರ್ಟ್, ರೆಸ್ಟೊರಂಟ್‌ಗಳು ಬಹುತೇಕ ಹೌಸ್​ಫುಲ್​ ಆಗಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts