More

    2024ರಲ್ಲಿ ಯಾರ ವಿರುದ್ಧ ಆಡಲಿದೆ ಟೀಂ ಇಂಡಿಯಾ; ಸರಣಿಗಳ ವಿವರ ಹೀಗಿದೆ

    ಮುಂಬೈ: ಟೀಂ ಇಂಡಿಯಾಗೆ 2023 ಅಂದುಕೊಂಡಂತೆ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡ ಎರಡು ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಈ ವರ್ಷವಾದರೂ ಟೀಂ ಇಂಡಿಯಾ ಪ್ರಶಸ್ತಿ ಬರವನ್ನು ನೀಗಿಸುತ್ತಾ ಎಂದು ಕಾದು ನೋಡಬೇಕಿದೆ.

    ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 2023ನೇ ವರ್ಷವನ್ನು ಕೊನೆಗೊಳಿಸಿದೆ. ಜನವರಿ 03ರಿಂದ ಎರಡನೇ ಟೆಸ್ಟ್​ ಪಂದ್ಯ ಆರಂಭವಾಗಲಿದ್ದು, ಇದರಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ 2024ರಲ್ಲಿ ಶುಭಾರಂಭ ಕಾಣಬೇಕಿದೆ.

    ದಕ್ಷಿಣ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯ ಹೊರತುಪಡಿಸಿದರೆ ಟೀಂ ಇಂಡಿಯಾ ಮುಂದಿನ ದಿನಗಳಲ್ಲಿ ಯಾವ ತಂಡದ ವಿರುದ್ಧ ಆಲಿದೆ ಮತ್ತು ಅದರ ವೇಳಾಪಟ್ಟಿ ಹೇಗಿದೆ ಎಂಬುದು ನೋಡೋಣ ಬನ್ನಿ. ಜನವರಿಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಹಾಗೂ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

    ಇದನ್ನೂ ಓದಿ: ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ; ಕಾರಣ ಹೀಗಿದೆ

    ಟಿ20 ವಿಶ್ವಕಪ್ ಜೊತೆಗೆ ಭಾರತ ಕ್ರಿಕೆಟ್ ತಂಡ ಅಫ್ಘಾನಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ವಿವಿಧ ಸ್ವರೂಪಗಳಲ್ಲಿ ಸರಣಿಗಳನ್ನು ಆಡಲಿದೆ. ಇದರ ನಡುವೆ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್ 2024ರಲ್ಲಿ ಟೀಂ ಇಂಡಿಯಾ ಬ್ಯುಸಿಯಾಗಲಿದೆ. ಟಿ20 ವಿಶ್ವಕಪ್ 2024 ಕ್ಕಾಗಿ ಭಾರತ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎಗೆ ತೆರಳಲಿದೆ.

    ಟೀಂ ಇಂಡಿಯಾ ವೇಳಾಪಟ್ಟಿ ಹೀಗಿದೆ

    • ಜನವರಿ 3-7 ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್
    • ಜನವರಿ 11 ರಿಂದ 17 – ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ T20 ಸರಣಿ
    • ಜನವರಿ 25 ರಿಂದ ಮಾರ್ಚ್ 11 – ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ T20 ಸರಣಿ
    • ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ – ಐಪಿಎಲ್ 2024
    • ಜೂನ್ 4 ರಿಂದ ಜೂನ್ 30 – ಐಸಿಸಿ ಟಿ20 ವಿಶ್ವಕಪ್ 2024
    • ಜುಲೈ 2024- ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿ
    • ಸೆಪ್ಟೆಂಬರ್ 2024- ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು T20ಗಳು ಮತ್ತು ಎರಡು ಟೆಸ್ಟ್ ಸರಣಿಗಳು
    • ಅಕ್ಟೋಬರ್ 2024 – ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ
    • ನವೆಂಬರ್-ಡಿಸೆಂಬರ್ 2024- ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts