More

    ವಿಷಕಾರಿ ಹಾವಿನಿಂದ ಪಾರಾಗುವುದು ಹೇಗೆ ಗೊತ್ತಾ? ಈ ಸಲಹೆಗಳನ್ನು ಪಾಲಿಸಿದ್ರೆ ಸಾಕು..

    ಬೆಂಗಳೂರು: ಹಾವು.. ಈ ಹೆಸರು ಕೇಳಿದ ಮಾತ್ರಕ್ಕೆ ಹಲವರು ಭಯದಿಂದ ನಡುಗುತ್ತಾರೆ. ಎಲ್ಲೋ ಹಾವು ಇದೆ ಎಂದು ತಿಳಿದರೆ ಹೆದರಿ ಓಡಿ ಹೋಗುತ್ತಾರೆ.  ವಿಷಕಾರಿ ಹಾವು ಕಚ್ಚಿದರೆ ಏನು ಮಾಡಬೇಕು? ಇಲ್ಲಿ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿಸಲಾಗಿದೆ.

    ಹಾವು ಇದೆ ಎಂದು ತಿಳಿದಾಗ ನೀವು ಶಾಂತವಾಗಿರಬೇಕು, ಕೂಗಬೇಡಿ. ಆದರೆ ಹಾವಿನ ಮೇಲೆ ನಿಗಾ ಇರಿಸಿ. ಹಾವನ್ನು ಹೆದರಿಸಬೇಡಿ. ಹಾವು ಇರುವ ದಿಕ್ಕಿನಿಂದ ಬೇರೆ ಕಡೆಗೆ ಸಾಗಿರಿ. ಸಹಾಯಕ್ಕಾಗಿ ತಕ್ಷಣ ಯಾರನ್ನಾದರೂಕರೆಯುವ ಪ್ರಯತ್ನ ಮಾಡಿದ.

    ಮೊದಲಿಗೆ ಹಾವಿಗೆ ಹೆದರಬೇಡಿ. ಹಾವು ಬರುವ ದಿಕ್ಕಿನಲ್ಲಿ ಹೋಗಬೇಡಿ. ನೀವು ಅವುಗಳಿಗೆ ತೊಂದರೆ ಕೊಡದಿದ್ದರೆ ಅವರು ತಾವಾಗಿಯೇ ಹೋಗುತ್ತವೆ.

    ಉದ್ದನೆಯ ಕೋಲನ್ನು ತೆಗೆದುಕೊಂಡು ಹಾವು ನಿಮ್ಮ ಕಡೆಗೆ ಬರದಂತೆ ಅದನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸಿ. ಹಾವಿಗೆ ಕಿವಿಯಿಲ್ಲದ ಕಾರಣ, ಅದು ಕಂಪನವಿಲ್ಲದ ಸ್ಥಳದ ಕಡೆಗೆ ಓಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಾವಿಹೆ ಹಿಂಸೆ ಕೊಡಬೇಡಿ.

    ಯಾವುದಾರೂ ಒಂದು ಕೋಲಿನಿಂದ ನೆಲಕ್ಕೆ ಹೊದೆದಂತೆ ಮಾಡಿ ಆಗ ಹಾವು ಹೆದರಿ ದೂರ ಹೋಗುತ್ತದೆ.  ಸಹಾಯಕ್ಕಾಗಿ ಹಾವು ಹಿಡಿಯುವವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿ.

    ಹಾವುಗಳನ್ನು ಕಂಡಾಗ ಮೊದಲ ಉರಗ ಪ್ರೇಮಿಗಳಿಗೆ ಕರೆ ಮಾಡಿ. ಹಾವುಗಳನ್ನು ಯಾವುದೇ ಕಾರಣಕ್ಕೂ ಸಾಯಿಸಬೇಡಿ. ಉರಗ ಪ್ರೇಮಿಗಳು ಬಂದು ಹಾವನ್ನು ರಕ್ಷಣೆ ಮಾಡಿ, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಾರೆ

    ಆಕಸ್ಮಿಕವಾಗಿ ಹಾವು ಕಚ್ಚಿದ ವ್ಯಕ್ತಿ ಉದ್ವಿಗ್ನಗೊಳ್ಳಬಾರದು. ಓಡಬೇಡಿ. ಓಟವು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ನಂತರ ವಿಷವು ದೇಹದಾದ್ಯಂತ ವೇಗವಾಗಿ ಹರಡುತ್ತದೆ. ಅದಕ್ಕೇ ಟೆನ್ಶನ್ ಇಲ್ಲದೇ ಧೈರ್ಯವಾಗಿ ಇರಬೇಕು. 

    ಹಾವು ಕಚ್ಚಿದ ಗಾಯವನ್ನು ಕತ್ತರಿಸಿ ವಿಷವನ್ನು ಹೊರತೆಗೆಯಲು ಪ್ರಯತ್ನಿಸಬೇಡಿ. ಗಾಯದ ಸುತ್ತ ಟೇಪ್ ಕಟ್ಟಬಾರದು ಎನ್ನುತ್ತಾರೆ ತಜ್ಞರು. ಆದಷ್ಟು ಬೇಗ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರ ಬಳಿ ಹೋಗಿ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಿ..

    ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts