More

    ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಪುಷ್ಪ-2 ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್

    ಹೈದರಾಬಾದ್: ಸುಕುಮಾರ್​ ನಿರ್ದೇಶನದ ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿರುವ ಪುಷ್ಪ-2 ಚಿತ್ರವು ಬಿಡುಗಡೆಗೂ ಮುನ್ನವೇ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಆರಂಭಗೊಂಡಿದ್ದು, ಅಭಿಮಾನಿಗಳು ಚಿತ್ರದ ಟ್ರೇಲರ್​​ ಹಾಗೂ ಹಾಡುಗಳಿಗೆ ಕಾತುರದಿಂದ ಕಾಯುತ್ತಿದ್ದಾರೆ.

    ಇದೀಗ ಚಿತ್ರತಂಡದಿಂದ ಹೊಸ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಗರಿಗೆದರಿಸಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪುಷ್ಪ-2 ಚಿತ್ರದ ಮೊದಲ ಹಾಡನ್ನು ಮೇ 01ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಈ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮತದಾನಕ್ಕಾಗಿ ರ್‍ಯಾಪಿಡೋ ವತಿಯಿಂದ ಉಚಿತ ಸೇವೆ; ಯಾರೆಲ್ಲಾ ಇದರ ಸೇವೆ ಪಡೆಯಬಹುದು, ಇಲ್ಲಿದೆ ಮಾಹಿತಿ

    ರಾಕ್​ಸ್ಟಾರ್​ ದೇವಿ ಶ್ರೀ ಪ್ರಸಾದ್​ ಪುಷ್ಪ-2 ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಇದೀಗ ಮೇ 01ರಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದ್ದು,  ಅಭಿಮಾನಿಗಳ ಹೈಪ್​ ಇನ್ನಷ್ಟು ಜೋರಾಗುವುದು ಖಚಿತವಾಗಿದೆ. ಬಿಡುಗಡೆಗೂ ಮುನ್ನ ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಬ್ಯುಸಿನೆಸ್​ ಮಾಡಿರುವ ಪುಷ್ಪ-2 ಚಿತ್ರವು ಆಗಸ್ಟ್​ 15, 2024ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

    ನಾಯಕ ಅಲ್ಲು ಅರ್ಜುನ್​ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಟೀಸರ್​ ಈಗಾಗಲೇ ಸಿನಿರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಚಿತ್ರ ಬಿಡುಗಡೆಯಾದ ಬಳಿಕ 1,000 ಕೋಟಿ ಕ್ಲಬ್​ ಸೇರುತ್ತದೆ ಎಂದು ಬಾಕ್ಸ್​ ಆಫೀಸ್​ ಪಂಡಿತರು ಅಂದಾಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts