More

    ಮತದಾನಕ್ಕಾಗಿ ರ್‍ಯಾಪಿಡೋ ವತಿಯಿಂದ ಉಚಿತ ಸೇವೆ; ಯಾರೆಲ್ಲಾ ಇದರ ಸೇವೆ ಪಡೆಯಬಹುದು, ಇಲ್ಲಿದೆ ಮಾಹಿತಿ

    ಬೆಂಗಳೂರು:  ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಮತಬೇಟೆಯಲ್ಲಿ ನಿರತರಾಗಿದ್ದಾರೆ. ಚುನಾವಣೆಗಳಲ್ಲಿ ಮತಪ್ರಮಾಣವನ್ನು ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಮತದಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರ್‍ಯಾಪಿಡೋ ಸಂಸ್ಥೆಯೊಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

    ಏಪ್ರಿಲ್​ 26ರಂದು ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅದರಂತೆ ರ್‍ಯಾಪಿಡೋ ಮತದಾನದ ದಿನದಂದು ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ವಿಕಲಾಂಗರಿಕಗೆ ಮತ್ತು ಹಿರಿಯ ನಾಗರೀಕರಿಗೆ ಉಚಿತ ಸೇವೆ ನೀಡಲಿದ್ದು, ಎಲ್ಲರೂ ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: VIDEO| ಯುವತಿಯನ್ನ ಕೂಡಿಹಾಕಿ, ಹಿಂಸೆ ಕೊಟ್ಟವನ ಮನೆ ಉಡೀಸ್​ ಮಾಡಿದ ಸರ್ಕಾರ; ನಮ್ಮಲಿ ಯಾವಾಗೆಂದ ನೆಟ್ಟಿಗರು

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರ್‍ಯಾಪಿಡೋ, ಮತದಾನ ಮಾಡಲು ರ್‍ಯಾಪಿಡೋ ಉಪಯೋಗಿಸಿ ಮತಗಟ್ಟೆಗೆ ಹೋಗಿ ಮತದಾನ ಮಾಡಿದೆ ಎಂದು ಹೇಳಿ. ಈ ಸೇವೆಯನ್ನು ಬಳಸಿಕೊಳ್ಳುವ ಹಿರಿಯ ನಾಗರೀಕರು, ವಿಕಲಚೇತನರು VOTENOW ಕೋಡ್​​ ಬಳಸಿಕೊಳ್ಳಬೇಕಾಗುತ್ತದೆ. ರ್‍ಯಾಪಿಡೋದ ಈ ವಿಶೇಷ ಆಫರ್​ಗೆ ಚುನಾವಣಾ ಆಯೋಗದ ಸಹಯೋಗವಿರುವುದಾಗಿ ತಿಳಿಸಿದೆ.

    ಈ ಕುರಿತು ಮಾತನಾಡಿರುವ ರ್‍ಯಾಪಿಡೋ ಸಹ ಸಂಸ್ಥಾಪಕ ಪವನ್​ ಗುಂಟುಪಲ್ಲಿ, ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ರ್‍ಯಾಪಿಡೋ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮತಗಟ್ಟೆ ಹೋಗಿ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಿದೆ. ವಿಕಲಚೇತರು ಹಾಗೂ ಹಿರಿಯರು ಕೂಡ ತಮ್ಮ ಮತದಾನವನ್ನು ಚಲಾಯಿಸಬೇಕು ಎಂದು ನಾವು ಈ ಕಾರ್ಯವನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts