ಶೂಟಿಂಗ್​ನಲ್ಲಿ ಭಾರತಕ್ಕೆ21ನೇ ಒಲಿಂಪಿಕ್ಸ್​ ಕೋಟಾ; ಪ್ಯಾರಿಸ್​ಗೆ ದಾಖಲೆಯ ಶೂಟರ್​ಗಳು

web shooting
Published on

ನವದೆಹಲಿ: ಶೂಟರ್​ ಮಹೇಶ್ವರಿ ಚೌಹಾಣ್​ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತಕ್ಕೆ ಶೂಟಿಂಗ್​ನಲ್ಲಿ 21ನೇ ಕೋಟಾ ಸ್ಥಾನ ಗೆದ್ದುಕೊಟ್ಟಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್​ ಫೈನಲ್​ ಒಲಿಂಪಿಕ್ಸ್​ ಅರ್ಹತಾ ಕೂಟದ ಮಹಿಳೆಯರ ಸ್ಕೀಟ್​ ವಿಭಾಗದಲ್ಲಿ ರಜತ ಪದಕ ಜಯಿಸುವ ಮೂಲಕ ಮಹೇಶ್ವರಿ ಈ ಸಾಧನೆ ಮಾಡಿದರು. ಇದರೊಂದಿಗೆ ಭಾರತದ ದಾಖಲೆಯ ಒಲಿಂಪಿಕ್ಸ್​ ಕೋಟಾ ಸಂಖ್ಯೆ ಇನ್ನಷ್ಟು ಹೆಚ್ಚಿದಂತಾಗಿದೆ.

ಮಹೇಶ್ವರಿ ಫೈನಲ್​ನಲ್ಲಿ 3&4ರಿಂದ ಚಿಲಿಯ ಫ್ರಾನ್ಸಿಸ್ಕಾ ಕ್ರೊವೆಟ್ಟೊ ಕ್ಯಾಡಿಡ್​ ಎದುರು ಶೂಟ್​ಆಫ್​​ನಲ್ಲಿ ಸೋತು ಸ್ವರ್ಣ ಪದಕ ವಂಚಿತರಾದರು. ಮಹಿಳೆಯರ ಸ್ಕೀಟ್​ನಲ್ಲಿ ಭಾರತಕ್ಕೆ ಇದು 2ನೇ ಒಲಿಂಪಿಕ್ಸ್​ ಕೋಟಾ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net