More

    ಗುಜರಾತ್​ನಲ್ಲಿ ಪತ್ತೆಯಾಯ್ತು ವಿಶ್ವದ ಬೃಹತ್ ಹಾವಿನ ಪಳೆಯುಳಿಕೆ: ಇದು ಪುರಾಣಗಳಲ್ಲಿ ಬರುವ ವಾಸುಕಿಯೇ?!

    ಗಾಂಧಿನಗರ: ಗುಜರಾತ್​ನಲ್ಲಿ ಪತ್ತೆಯಾದ ಬೃಹತ್​ ಹಾವಿನ ಪಳೆಯುಳಿಕೆ ವಿಶ್ವದಲ್ಲಿ ಇದುವರೆಗೆ ಅಸ್ತಿತ್ವದಲ್ಲಿದ್ದ ಅತಿದೊಡ್ಡ ಕಶೇರುಖ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಇದನ್ನೂ ಓದಿ: ‘ಇದು ಡ್ರೋನ್ ಅಲ್ಲ, ಮಕ್ಕಳ ಆಟಿಕೆ’: ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ವ್ಯಂಗ್ಯ!

    ‘ವಾಸುಕಿ ಇಂಡಿಕಸ್’ ಎಂದು ಹೆಸರಿಸಲಾದ ಈ ಪಳೆಯುಳಿಕೆಯನ್ನು ಆರಂಭದಲ್ಲಿ 2005 ರಲ್ಲಿ ಐಐಟಿ-ರೂರ್ಕಿಯ ಸಂಶೋಧಕರು ಪತ್ತೆ ಮಾಡಿದರು. ಇತ್ತೀಚೆಗೆ ಇದು ಬೃಹತ್ ಸರ್ಪ ಎಂದು ದೃಢಪಡಿಸಲಾಗಿದೆ.

    ‘ವಾಸುಕಿ ಇಂಡಿಕಸ್’ ನ ಪಳೆಯುಳಿ 47 ಮಿಲಿಯನ್ ವರ್ಷಗಳ ಹಿಂದೆ ಮಧ್ಯ ಇಯಸೀನ್ ಅವಧಿಗೆ ಹಿಂದಿನದು. ಈ ಸರ್ಪ 11ಮೀ (36ಅಡಿ) ಮತ್ತು 15ಮೀ (49.22ಮೀ) ಗಾತ್ರ ಹೊಂದಿದೆ. ಇದು ಅತಿದೊಡ್ಡ ಮ್ಯಾಡ್ಟ್ಸೊಯಿಡ್ ಹಾವು ಎಂದು ನಂಬಲಾಗಿದೆ. ಇದು ಅಳಿವಿನಂಚಿನಲ್ಲಿರುವ ಟೈಟಾನೊಬೊವಾ ಗಾತ್ರವನ್ನು ಮೀರಿಸಬಹುದು.

    ಭಾರತದ ಲಿಗ್ನೈಟ್ ಗಣಿಗಳಲ್ಲಿ ಪ್ರಾಯಶಃ ಭೂಮಿಯಲ್ಲಿ ಸಂಚರಿಸುವ ಅತಿ ದೊಡ ಹಾವು ವಾಸುಕಿ ಇಂಡಿಕಸ್ ಅನ್ನು ಪ್ರಾಗ್ಜೀವಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಇದು 11 ರಿಂದ 15 ಮೀಟರ್( 50 ಅಡಿ ) ಉದ್ದ ಎಂದು ಅಂದಾಜಿಸಲಾಗಿದೆ. ಇದು ಟೈಟಾನೊಬೊವಾವಕ್ಕಿಂತ ಅತಿದೊಡ್ಡ ಸರ್ಪವಾಗಿದೆ ಎಂದು ದೃಢಪಟ್ಟಿದೆ.

    ಆಶ್ಚರ್ಯಕರವಾದ ಸೌಮ್ಯ ವರ್ತನೆ ಈ ಹಾವಿಗೆ ಇತ್ತು. ಇದು ಜೌಗು ಪ್ರದೇಶದಲ್ಲಿ ವಾಸಿಸುವ ದೈತ್ಯಜೀವಿಯಾಗಿತ್ತು. ಇದು ಪ್ರಾಚೀನ ಭಾರತದ ಪ್ರಾಗ್ಜೀವಶಾಸ್ತ್ರದ ಪ್ರಾಮುಖ್ಯತೆಯ ಒಳನೋಟಗಳನ್ನು ಒದಗಿಸುತ್ತದೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತಹ ಜನಜೀವನವನ್ನು ಅರ್ಥಮಾಡಿಕೊಳ್ಳುವಲ್ಲಿ ಹೊಸ ಅಧ್ಯಾಯ ತೆರೆದಂತಾಗಿದೆ ಎಂದು ‘ವೈಜ್ಞಾನಿಕ ವರದಿಗಳು’ ನಲ್ಲಿ ಪ್ರಕಟಿಸಲಾಗಿದೆ. ಇದು ಭೂಮಿಯ ಡೈನಾಮಿಕ್ ಇತಿಹಾಸ ಮತ್ತು ರಹಸ್ಯಗಳನ್ನು ಒತ್ತಿಹೇಳುತ್ತದೆ ಎಂದು ವಿವರಿಸಲಾಗಿದೆ.

    ಪ್ರಾಗ್ಜೀವಶಾಸ್ತ್ರ ಕ್ಷೇತ್ರದಲ್ಲಿ ಇದು ಸಂಚಲನ ಮೂಡಿಸಿದೆ. ಹೊಸ ಆವಿಷ್ಕಾರ. ಅಧ್ಯಾಯನಕ್ಕೆ ವಸ್ತುವನ್ನು ಒದಗಿಸಿದೆ. ಭೂಮಂಡಲದ ಮೇಲೆ ಪತ್ತೆಯಾದ ಇದುವರೆಗಿನ ಅತಿದೊಡ್ಡ ಹಾವು ಇದಾಗಿದೆ ಎಂದು ಪಳೆಯುಳಿಕೆಯ ಅವಶೇಷಗಳನ್ನು ಸಂಶೋದಿಸಿ ಸಂಶೋಧಕರು ಹೇಳಿದ್ದಾರೆ. ಹಿಂದೂಗಳ ನಂಬಿಕೆಯ ಶಿವಪುರಾಣದ ಹಾವಿನ ರಾಜ ವಾಸುಕಿಯ ಕಾಲ್ಪನಿಕ ಕಥೆಗೆ ಇದು ದೃಢೀಕರಣಪಡಿಸಿದಂತೆ ಆಗಿದೆ. ಇದಕ್ಕೆ ವಾಸುಕಿ ಇಂಡಿಕಸ್ ಎಂದು ಹೆಸರಿಸಲಾಗಿದೆ.

    ಐಐಟಿ ರೂರ್ಕಿಯ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸುನಿಲ್ ಬಾಜ್‌ಪೇಯಿ ಪ್ರಕಾರ ವಾಸುಕಿ ಇಂಡಿಕಸ್‌ನ ಹತ್ತಿರದ ಸಂಬಂಧಿಗಳು ಟೈಟಾನೊಬೊವಾ ಮತ್ತು ಪೈಥಾನ್ ಎಂದು ಅಧ್ಯಯನದಲ್ಲಿ ತಿಳಿಸಿದ್ದಾರೆ. .

    ‘ವಾಸುಕಿ ಇಂಡಿಕಸ್’ ಗಾತ್ರವು ಸರಿಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಕೊಲಂಬಿಯಾದಲ್ಲಿ ವಾಸವಾಗಿದ್ದ ಟೈಟಾನೊಬೊವಾ, ಹಾವಿಗೆ ಪ್ರತಿಸ್ಪರ್ಧಿಯಾಗಿದೆ. ಟೈಟಾನೊಬೊವಾ ಸುಮಾರು 43 ಅಡಿ ಉದ್ದ ಮತ್ತು ಒಂದು ಟನ್‌ಗಿಂತ ಹೆಚ್ಚು ತೂಕವಿತ್ತು.

    ಮೊದಲ ಹಂತದಲ್ಲಿ ಎನ್‌ಡಿಎ ಪರ ಏಕಪಕ್ಷೀಯ ಮತದಾನ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts