More

    ‘ಇದು ಡ್ರೋನ್ ಅಲ್ಲ, ಮಕ್ಕಳ ಆಟಿಕೆ’: ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ವ್ಯಂಗ್ಯ!

    ಟೆಹ್ರಾನ್: ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರಾ ಅಬ್ದುಲ್ಲಾಹಿ ‘ದಾಳಿಯಲ್ಲಿ ಡ್ರೋನ್ ಭಾಗವಹಿಸಿಲ್ಲ, ಅವುಗಳನ್ನು ನೋದಡಿದರೆ ಮಕ್ಕಳ ಆಟಿಕೆಯಂತಿವೆ’ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ಮೊದಲ ಹಂತದಲ್ಲಿ ಎನ್‌ಡಿಎ ಪರ ಏಕಪಕ್ಷೀಯ ಮತದಾನ: ಪ್ರಧಾನಿ ಮೋದಿ

    ದಾಳಿಗೂ ಇಸ್ರೇಲ್‌ಗೂ ಏನಾದರೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಶುಕ್ರವಾರ ಬೆಳಗ್ಗೆ ಇರಾನ್ ಮೇಲೆ ದಾಳಿ ನಡೆದಿದೆ. ಇರಾನ್‌ಗೆ ಪ್ರವೇಶಿಸಿದ ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಆದರೆ ವಿದೇಶಾಂಗ ಸಚಿವರು ಇದು ಡ್ರೋನ್ ಅಲ್ಲ ಆಟಿಕೆ ಎಂದು ದಾಳಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ಇರಾನ್ ನ ಇಸ್ಫಹಾನ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಸಣ್ಣ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇಸ್ಫಹಾನ್‌ನಲ್ಲಿರುವ ವಾಯುಪಡೆ ನೆಲೆಯ ಮೇಲೆ ದಾಳಿ ನಡೆದಿದೆ. ಆದರೆ ದಾಳಿಯಲ್ಲಿ ಇರಾನ್‌ಗೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ದಾಳಿಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಏನೂ ಆಗಿಲ್ಲ: ಇಸ್ಫಹಾನ್ ನಗರದ ವಾಯುನೆಲೆಯ ಮೇಲೆ ಇಸ್ರೇಲ್ ನ ಡ್ರೋನ್ ದಾಳಿಗೆ, ಏನೂ ಆಗಿಲ್ಲ ಎಂದು ಪ್ರತಿಕ್ರಿಯಿಸಿದ ಇರಾನ್ ಪ್ರತೀಕಾರ ತೀರಿಸುವ ಉದ್ದೇಶವಿಲ್ಲ ಎಂದು ಹೇಳಿದೆ. ಇಟಲಿಯಲ್ಲಿ ನಡೆದ ಜಿ7 ವಿದೇಶಾಂಗ ಸಚಿವರ ಸಭೆಯಲ್ಲಿ ಇಸ್ರೇಲ್ ದಾಳಿಯಯನ್ನು ಘೋಷಿಸಿಲ್ಲ, ಆದರೆ ದಾಳಿಯ ಮೊದಲು ತನಗೆ ತಿಳಿಸಲಾಗಿದೆ ಎಂದು ಯುಎಸ್ ಹೇಳಿದೆ.

    ಎಲೋನ್ ಮಸ್ಕ್ ಭಾರತ ಪ್ರವಾಸ ಮುಂದೂಡಿಕೆ: ಕಾರಣ ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts