More

    ಪಿಡಿಓ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

    ಚಿಕ್ಕಮಗಳೂರು: ಪಂಚಾಯತಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಓ ಮೇಲೆ ಏಕಾಏಕಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಪಿಡಿಓ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ನೊಂದ ಪಿಡಿಓ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ಮಂಗಳವಾರ ದೂರು ದಾಖಲಿಸಿ ನ್ಯಾಯಕ್ಕೆ ಒತ್ತಾಯಿಸಿದರು.

    ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಚಿನ್‌ಕುಮಾರ್ ಅವರಿಗೆ ಹಲ್ಲೆಗೊಳಗಾದ ಲಕ್ಯಾ ಗ್ರಾಪಂ ಪಿಡಿಓ ಎನ್.ಎ.ಶೇಖರೇಶ್ ಕುಟುಂಬ ಸಮೇತ ಬಂದು ಸಂಘದ ನೇತೃತ್ವದಲ್ಲಿ ದೂರು ದಾಖಲಿಸಿದರು. ರಘು ಎಂಬಾತ ಕಚೇರಿಗೆ ನುಗ್ಗಿ ತನ್ನ ವಿರುದ್ಧ ಆವಾಚ್ಯವಾಗಿ ನಿಂಧಿಸಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಈ ವೇಳೆ ಮಾತನಾಡಿದ ಪಿಡಿಒ ಎನ್.ಎ.ಶೇಖರೇಶ್, ಎಂದಿನಂತೆ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ವೇಳೆಯಲ್ಲಿ ಕಣಿವೆದಾಸರಹಳ್ಳಿ ಗ್ರಾಮದ ರಘು ಎಂಬಾತನಿಗೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಜಾಗಕ್ಕೆ ಖಾತೆ ಮಾಡುವುದಿಲ್ಲವೆಂದು ಮೌಖಿಕವಾಗಿ ತಿಳಿಸುತ್ತಿದ್ದರೂ ಕಚೇರಿ ನೌಕರರ ಸಮ್ಮುಖದಲ್ಲಿ ಏಕಾಏಕಿ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದರು.
    ತದನಂತರ ಕಚೇರಿಯ ನೌಕರರು ಆತನನ್ನು ಹೊರಡೆ ಕಳಿಸಿದ ಬಳಿಕವು ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದು. ಸ್ವಲ್ಪಸಮಯದ ನಂತರ ಪುನಃ ಕಚೇರಿಗೆ ಆಗಮಿಸಿದ್ದು ಗ್ರಾಪಂ ಅಧ್ಯಕ್ಷರು, ಸದಸ್ಯರು ಪಿಡಿಓ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದವನನ್ನು ತಡೆದರು. ಆಗ ಆತ ಕಚೇರಿಯಿಂದ ಹೊರನಡೆದಿದ್ದಾನೆ ಎಂದು ತಿಳಿಸಿದರು.
    ಗ್ರಾಪಂ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೇ ತಮ್ಮ ಮೇಲೆ ಹಲ್ಲೆ ಮಾಡಿರುವ ಕಣಿವೆ ದಾಸರಹಳ್ಳಿ ಗ್ರಾಮದ ರಘು ಎಂಬಾತನ ವಿರುದ್ಧ ದೂರು ದಾಖಲಿಸಿ ಬಂಧಿಸಬೇಕು. ಅಲ್ಲದೇ ಘಟನೆಗೆ ಸಂಬಂಧಿಸಿದ ವೀಡಿಯೋ ಸಿಸಿ ಕ್ಯಾಮರಾದ ದೃಶ್ಯಾವಳಿಗಳು ದಾಖಲೆ ಸಮೇತ ದೂರಿನಲ್ಲಿ ಒದಗಿಸಿಕೊ ಡಲಾಗಿದೆ ಎಂದರು.
    ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕು ಪಿಡಿಓ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಸುಮಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಶ್ಮಿತಾ, ವಿಜಯ, ಕುಲದೀಪ್, ವಿವಿಧ ಪಂಚಾಯಿತಿ ಪಿಡಿಓಗಳಾದ ವಿಶ್ವನಾಥ್, ಜಗದೀಶ್, ಮಧುಸೂದನ್, ಮಂಜೇಗೌಡ, ಲೀಲಾ, ಸ್ಮಿತಾ, ಸುರೈಬಾನು, ರಾಜಕುಮಾರ್, ಪ್ರದೀಪ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts