More

  ಎಲೋನ್ ಮಸ್ಕ್ ಭಾರತ ಪ್ರವಾಸ ಮುಂದೂಡಿಕೆ: ಕಾರಣ ಹೀಗಿದೆ ನೋಡಿ..

  ವಾಷಿಂಗ್ಟನ್​: ಬಹು ನಿರೀಕ್ಷಿತ ಎಲೋನ್ ಮಸ್ಕ್ ಭಾರತ ಭೇಟಿ ಮುಂದೂಡಲಾಗಿದೆ. ಆದರೆ ಭಾರತದೊಂದಿಗೆ ವ್ಯವಹರಿಸಲು ಹಲವು ಜವಾಬ್ದಾರಿಗಳು ನಮ್ಮ ಮೇಲಿವೆ ಎಂದು ಟೆಸ್ಲಾ

  ಇದನ್ನೂ ಓದಿ: ರೋಹಿತ್ ಶರ್ಮಾ ಬಗ್ಗೆ ನಾನು ಹಾಗೆ ಹೇಳಿಲ್ಲ.. ಪ್ರೀತಿ ಜಿಂಟಾ ಹೀಗೆ ಹೇಳಿದ್ದರ ಹಿಂದಿದೆ ಬಲವಾದ ಕಾರಣ!

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಏಪ್ರಿಲ್ 21 ರಿಂದ 22 ರವರೆಗೆ ಭಾರತಕ್ಕೆ ಪ್ರಯಾಣಿಸುವುದಾಗಿಯೂ, ಇದೇ ಸಂದರ್ಭದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಯೋಜನೆಗಳನ್ನು ಪ್ರಕಟಿಸುವುದಾಗಿಯೂ ಮಸ್ಕ್ ಈ ಹಿಂದೆ ಘೋಷಿಸಿದ್ದರು.

  “ದುರದೃಷ್ಟವಶಾತ್, ಭಾರತಕ್ಕೆ ಭೇಟಿ ನೀಡುವುದು ವಿಳಂಬವಾಗುತ್ತಿದೆ. ಆದರೆ ಈ ವರ್ಷದ ನಂತರ ಭೇಟಿ ನೀಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದನ್ನು ತಿಳಿಸಲು ತುಂಬಾ ನೋವಾಗುತ್ತಿದ್ದು, ಹೃದಯ ಭಾರವಾಗುತ್ತಿದೆ. ಟೆಸ್ಲಾದ ತ್ರೈಮಾಸಿಕ ಲೆಕ್ಕಪರಿಶೋಧನೆ, ಚೀನಾ ಸರ್ಕಾರದ ನಿರ್ಧಾರದಿಂದ ಎದುರಾಗಿರುವ ಸಮಸ್ಯೆ ಸರಿಪಡಿಸಿಕೊಳ್ಳುವುದು ಮತ್ತಿತರ ಕಾರ್ಯಗಳಿಂದಾಗಿ ಭಾರತ ಭೇಟಿ ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಭೇಟಿ ನೀಡುವುದನ್ನು ವಿಳಂಬಗೊಳಿಸುವ ಅಗತ್ಯವಿದೆ” ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  “ಆದರೆ ಈ ವರ್ಷದ ನಂತರ ಭಾರತಕ್ಕೆ ಭೇಟಿ ನೀಡಲು ನಾನು ತುಂಬಾ ಎದುರು ನೋಡುತ್ತಿದ್ದೇನೆ” ಎಂದು ಮಸ್ಕ್ ಹೇಳಿದ್ದಾರೆ.

  ಟೆಸ್ಲಾ ಸಿಇಒ ಭಾರತ ಮಾರುಕಟ್ಟೆಗೆ ಪ್ರವೇಶಿಸುವ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿತ್ತು. ಅವರು ಇದೇ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರತಿನಿಧಿಗಳನ್ನು ಭೇಟಿ ಮಾಡಲು ಸಹ ಸಿದ್ಧರಾಗಿದ್ದರು.

  ಖ್ಯಾತ ನಟಿಗೆ ಅಪಘಾತ.. ಗಂಭೀರ ಗಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts