More

    ಬಿಜೆಪಿಗರು ಸಂವಿಧಾನ ವಿರೋಧಿಗಳು

    ಚಿತ್ರದುರ್ಗ: ಬಿಜೆಪಿ ಮುಖಂಡರಾದ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿ ಇನ್ನಿತರರು ಈ ಹಿಂದೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮೌನ ವಹಿಸಿದ್ದು, ಏಕೆ ಎಂದು ವಕೀಲ ಅನಂತ ನಾಯ್ಕ್ ಪ್ರಶ್ನಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರಜೋಳ ಅವರು ಈ ಹಿಂದೆ ಅನೇಕ ಖಾತೆ ನಿರ್ವಹಿಸಿದ್ದು, ಸಮುದಾಯಕ್ಕೆ ಉಪಯೋಗ ಆಗುವಂತ ಯಾವ ಕಾರ್ಯ ಮಾಡಿಲ್ಲ. ಬದಲಿಗೆ ಸಮುದಾಯಕ್ಕೆ ಮೀಸಲಿದ್ದ ಅನುದಾನ ಬೇರೆ ಅಭಿವೃದ್ಧಿ ಕಾರ್ಯಕ್ಕೆ ನೀಡಿದ್ದಾರೆ. ಸ್ಕಾಲರ್‌ಶಿಪ್ ರದ್ದುಗೊಳಿಸಿದರು. ಅಲ್ಲದೆ, ಮೀಸಲಾತಿ ವಿಚಾರವಾಗಿ ಸಮುದಾಯಗಳ ಒಳಗೆ ಭಿನ್ನಾಭಿಪ್ರಾಯ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಂಜಾರ ಸಮುದಾಯದ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ, ಸಂವಿಧಾನ ವಿರೋಧಿ ಬಿಜೆಪಿಗರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವ ಸಂಕಲ್ಪ ಮಾಡಿದ್ದೇವೆ. ಆ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

    ವಿವಿಧ ಸಮುದಾಯದ ಮುಖಂಡರಾದ ನಾಗರಾಜ, ಲಿಂಗಾನಾಯ್ಕ, ಅನಂತಮೂರ್ತಿ ನಾಯ್ಕ, ತಿಪ್ಪೇಸ್ವಾಮಿ, ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts