ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದಿಗ ಈ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೋಶಿಯಲ್ ಮೀಡಿಯಾ ಮೂಲಕವಾಗಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೌನವಾಗಿರುವುದು ಏಕೆ..? ಗೊತ್ತಿದ್ದೂ ಮೋದಿ ಅವರ ಪರ ಪ್ರಚಾರ ಮಾಡಿದ್ದು ನಮಗೇಕೆ ಆಘಾತ ತಂದಿದೆ. ಕಥುವಾ, ಉನ್ನಾವೋ, ಹತ್ರಾಸ್, ಕುಲದೀಪ್ ಸೆಂಗರ್, ಬ್ರಿಜ್‌ಭೂಷಣ್ ಶರಣ್ ಮತ್ತು ಇತರರ ಉದಾಹರಣೆ ನಮ್ಮಲ್ಲಿದೆ.. ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ ಇಲ್ಲವೇ ಕಾಂಗ್ರೆಸ್‌ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತ ಸ್ವರಾ ಭಾಸ್ಕರ್ ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Why are we shocked at Modi led BJP Govt.’s silence on #PrajwalRevanna sexual assault crimes? Why are we shocked that Modi despite knowing campaigned for him? We have the example of Kathua, Unnao, Hathras, Kuldeep Sengar, Brijbhushan Sharan and others! They only care about women’s…
— Swara Bhasker (@ReallySwara) April 29, 2024
ಹಾಸನ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಸೆಕ್ಸ್ ವೀಡಿಯೋಗಳು ಹಾಸನದ ಹಲವು ಕಡೆ ಓಡಾಡುತ್ತಿದ್ದಂತೆ, ಪ್ರಜ್ವಲ್ ರೇವಣ್ಣ ರಾಜ್ಯದಿಂದ ನಾಪತ್ತೆಯಾಗಿದ್ದಾರೆ. ರಾಜ್ಯ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ಆಡಳಿತಾರೂಢ ಕಾಂಗ್ರೆಸ್ ಟೀಕಿಸಿತ್ತು. ಈ ಪ್ರಕರಣ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಸಧ್ಯ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದು ಅವರ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಅಲ್ಲದೇ ಇದೆ ವೇಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರೇವಣ್ಣ ಅವರನ್ನು ಬಂಧಿಸಲಾಗಿದೆ. ಎಸ್‌ಎಐಟಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.