ಮದುವೆ ಮನೆಯಲ್ಲಿ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

icecream
Published on

ರಾಮನಗರ: ಬಿಸಿಲಿನ ಬೇಗೆಯ ಹಿನ್ನೆಲೆಯಲ್ಲಿ ಜನರು ತಂಪಾದ ಜ್ಯೂಸ್​, ಐಸ್​ ಕ್ರೀಂಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ಕೂಲ್​  ಆಗಲು ಹೋಗಿ  ಚನ್ನಪಟ್ಟಣ  ಟಿಪ್ಪುನಗರದ ಮಿಲನ್ ಶಾದಿಮಹಲ್‌ನಲ್ಲಿ  ಅವಧಿ ಮುಗಿದ ಐಸ್ ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

ಮಿಲನ್ ಶಾದಿಮಹಲ್‌ನಲ್ಲಿ ಭಾನುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದರು. ಈ ಪೈಕಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net