ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಕ್ಷಣಗಣನೆ; ಇದೊಂದು ವಿಷಯಕ್ಕೆ ಕಾಯ್ತಿದ್ದಾರೆ ಎಸ್​ಐಟಿ ಅಧಿಕಾರಿಗಳು

WhatsApp Image 2024-05-06 at 10.22.50 AM
Published on

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಅಪಹರಿಸಿದ್ದ ಪ್ರಕರಣದಡಿ ಮಾಜಿ ಶಾಸಕ ಎಚ್​.ಡಿ. ರೇವಣ್ಣರನ್ನು ಬಂಧಿಸಿದ್ದ ಎಸ್​ಐಟಿ ಅಧಿಕಾರಿಗಳು, ನಿನ್ನೆಯಷ್ಟೇ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸದ್ಯ ರೇವಣ್ಣರನ್ನು ನಾಲ್ಕು ದಿನಗಳ ಕಾಲ ಎಸ್​ಐಟಿ ವಶದಲ್ಲಿರುವಂತೆ ಆದೇಶಿಸಿದ್ದಾರೆ. ಇನ್ನೂ ಈ ಬೆನ್ನಲ್ಲೇ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಆಗಮನಕ್ಕಾಗಿ ಏರ್​​ಪೋರ್ಟ್​ಗಳಲ್ಲಿ ಎಸ್​ಐಟಿ ತಂಡ ಕಾಯುತ್ತಿರುವುದು ವರದಿಯಾಗಿದೆ.

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ನಿನ್ನೆ (ಮೇ.05) ಸಂಜೆಯೇ ಬೆಂಗಳೂರಿಗೆ ಬರಬೇಕಿತ್ತು. ಆದರೆ, ಬಂಧನದ ಭೀತಿ ಎದುರಾಗುತ್ತಿದ್ದಂತೆ ತನ್ನ ವಾಸ್ತವ್ಯವನ್ನು ಬದಲಾಯಿಸುತ್ತಿರುವ ಹಿನ್ನೆಲೆ ಇದೀಗ ಬ್ಲೂಕಾರ್ನರ್​ ನೋಟಿಸ್​ ಸಹ ಹೊರಡಿಸಿದ್ದು, ಇದನ್ನು ತಪ್ಪಿಸದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌, ಪ್ರಜ್ವಲ್‌ ರೇವಣ್ಣ ವಿರುದ್ಧದ ಬ್ಲೂಕಾರ್ನರ್‌ ನೋಟಿಸ್‌ ಅನ್ನು ತನ್ನ ಸಹಭಾಗಿತ್ವ ದೇಶಗಳ ತನಿಖಾ ಸಂಸ್ಥೆಗಳಿಗೆ ಕಳುಹಿಸಿದೆ.

ಪ್ರಜ್ವಲ್‌ ಸದ್ಯ ದುಬೈನಲ್ಲಿದ್ದಾರೆ ಎಂದು ಇಂಟರ್‌ಪೋಲ್‌ ಅಧಿಕಾರಿಗಳು ಎಸ್‌ಐಟಿ ದಳಕ್ಕೆ ಮಾಹಿತಿ ನೀಡಿದ್ದು, ಇದರ ಆಧಾರದ ಮೇರೆಗೆ ಎಸ್​ಐಟಿ ತಂಡ ಏರ್​​ಪೋರ್ಟ್​ಗಳಲ್ಲಿ ಠಿಕಾಣಿ ಹೂಡಿದೆ. ಕೇವಲ ಪ್ರಜ್ವಲ್ ಆಗಮನಕ್ಕಾಗಿ ಸಮಯ ಎಣಿಸುತ್ತಿರುವ ಎಸ್​ಐಟಿ, ಅವರು ಬಂದ ಕೂಡಲೇ ಅರೆಸ್ಟ್​ ಮಾಡಲು ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net