ಜಪಾನ್​ನಲ್ಲಿ ಭೂಕಂಪ.. 28ನೇ ಮಹಡಿಯಲ್ಲಿ ರಾಜಮೌಳಿ ಕುಟುಂಬ!

rajamouly family
Published on

ಟೋಕಿಯೋ: ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದಿಂದ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಕುಟುಂಬ ಪಾರಾಗಿದ್ದಾರೆ. ರಾಜಮೌಳಿ ಪುತ್ರ ಎಸ್‌.ಎಸ್. ಕಾರ್ತಿಕೇಯ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

'ಆರ್‌ಆರ್‌ಆರ್' ಚಿತ್ರ ಆಸ್ಕರ್​ ಪ್ರಶಸ್ತಿಗೆ ಆಯ್ಕೆಯಾಗಿದ್ದು ಮತ್ತು ಜಪಾನ್‌ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ಹಿನ್ನೆಲೆಯಲ್ಲಿ . ರಾಜಮೌಳಿ ಮತ್ತು ಕುಟುಂಬ ಜಪಾನ್‌ಗೆ ಹೋಗಿ ಅಲ್ಲಿನ ಪ್ರೇಕ್ಷಕರೊಂದಿಗೆ ಭಾಗವಹಿಸುತ್ತ ಈ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಇದರ ನಡುವೆ ಕಾರ್ತಿಕೇಯ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಗುರುವಾರ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಿದ್ದಾರೆ.

"ಇದೀಗ ಜಪಾನಿನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ನಾವೆಲ್ಲರೂ 28 ನೇ ಮಹಡಿಯಲ್ಲಿದ್ದಾಗ, ಭೂಮಿಯು ನಿಧಾನವಾಗಿ ಚಲಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಭೂಕಂಪ ಎಂದು ತಿಳಿಯಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ನಾವೆಲ್ಲ ಒಂದೆಡೆ ಭಯಭೀತರಾಗಿದ್ದರೂ ಜಪಾನಿಗರು ಮಳೆ ಬರುತ್ತಿದ್ದಂತೆಯೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಭೂಕಂಪವನ್ನು ಅನುಭವಿಸುವ ಬಯಕೆ ಈಡೇರುತ್ತದೆ. ಮೇಲಾಗಿ ಈ ಪೋಸ್ಟ್ ನಲ್ಲಿ ಭೂಕಂಪಕ್ಕೂ ಮುನ್ನ ಬಂದಿದ್ದ ಎಚ್ಚರಿಕೆ ಸಂದೇಶವನ್ನೂ ಕಾರ್ತಿಕೇಯ ತೋರಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net