More

    ಜಪಾನ್ ನೌಕಾಪಡೆಯ 2 ಹೆಲಿಕಾಪ್ಟರ್‌ ಪತನ: ಓರ್ವ ಸಾವು- ಏಳು ಮಂದಿ ನಾಪತ್ತೆ

    ಟೋಕಿಯೊ: ಜಪಾನ್ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಪೆಸಿಫಿಕ್ ಸಾಗರದಲ್ಲಿ ಪತನಗೊಂಡಿವೆ. ಈ ಹೆಲಿಕಾಪ್ಟರ್‌ಗಳಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು. ಅದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ನಾಲ್ಕು ವರ್ಷದ ಪುತ್ರಿಗೆ ಕನ್ಯಾಪೂಜೆ ನೆರವೇರಿಸಿದ ಶಿಲ್ಪಾಶೆಟ್ಟಿ! ಕಾರಣ ಹೀಗಿದೆ ನೋಡಿ..

    ಜಪಾನ್‌ನ ಸ್ವ-ರಕ್ಷಣಾ ಪಡೆ (ಎಸ್‌ಡಿಎಫ್) ವಕ್ತಾರರು ಶನಿವಾರ ತಡರಾತ್ರಿ ಘಟನೆಯನ್ನು ದೃಢಪಡಿಸಿದ್ದು, ಆರಂಭದಲ್ಲಿ ಒಬ್ಬ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎನ್ನಲಾಗಿತ್ತಾದರೂ, ನಂತರ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

    ಎರಡು ಎಸ್ಎಚ್-60ಕೆ ಹೆಲಿಕಾಪ್ಟರ್‌ ತಡರಾತ್ರಿ ತರಬೇತಿ ವೇಳೆ ಟೋ‍ಕಿಯೊದ ದಕ್ಷಿಣ ಪೆಸಿಫಿಕ್ ಮಹಾಸಾಗರದ ತೊರಿಶಿಮಾದ್ವೀ ಪದ ಬಳಿ ಸಂಪರ್ಕ ಕಳೆದುಕೊಂಡಿತು ಎಂದು ರಕ್ಷಣಾ ಸಚಿವ ಮಿನೋ ರು ಕಿಹರಾ ಸುದ್ದಿಗಾರರಿಗೆ ತಿಳಿಸಿದರು.

    ‘ಛಾನ್ಸ್​ ಕೊಟ್ರೆ ನನಗೇನು ಕೊಡ್ತೀಯಾ?’…ಹೀಗೆಂದ ಟಾಪ್ ಹೀರೋಗೆ ನಟಿ ಹೇಳಿದ್ದೇನು? ಕಡೆಗೆ ‘ಛಾನ್ಸ್​’ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts