More

    ತೈವಾನ್​ನಲ್ಲಿ 25 ವರ್ಷಗಳ ಬಳಿಕ ಪ್ರಬಲ ಭೂಕಂಪನ: ಜಪಾನ್​ಗೆ ಅಪ್ಪಳಿಸಿದ ಸುನಾಮಿ​

    ತೈಪೈ: ತೈವಾನ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಪರಿಣಾಮ ಜಪಾನ್​ನ ಯೊನಾಗುನಿ ದ್ವೀಪದಲ್ಲಿ ಸುನಾಮಿ ಎದ್ದಿದೆ. ರಿಕ್ಟರ್​ ಸ್ಕೇಲ್​ನಲ್ಲಿ 7.4 ತೀವ್ರತೆಯ ಭೂಕಂಪನ ದಾಖಲಾಗಿದ್ದು, 25 ವರ್ಷದ ಬಳಿಕ ತೈವಾನ್​ನಲ್ಲಿ ಭೂಮಿ ಕಂಪಿಸಿದೆ. ಈ ಹಿಂದೆ 1999ರಲ್ಲಿ ಪ್ರಬಲ ಭೂಕಂಪನವಾಗಿ 2500ಕ್ಕೂ ಅಧಿಕ ಮಂದಿ ಸಾವಿಗೀಡಾಗಿ 1300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

    ಭೂಮಿ ಕಂಪಿಸಿದ ರಭಸಕ್ಕೆ ತೈವಾನ್​ನ ಹುವಾಲಿಯನ್ ನಗರದಲ್ಲಿ ಕಟ್ಟಡಗಳು ನೆಲಕ್ಕುರುಳಿವೆ. ದೇಶಾದ್ಯಂತ ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಹುವಾಲಿಯನ್‌ ನಗರದಿಂದ ಸುಮಾರು 18 ಕಿಮೀ ದಕ್ಷಿಣ-ನೈಋತ್ಯಕ್ಕೆ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಇಂದು ಬೆಳಗ್ಗೆ 7.58ರ ಸುಮಾರಿಗೆ 35 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಅಮೆರಿಕದ ಜಿಯೋಲಜಿಕಲ್​ ಸರ್ವೆ ತಿಳಿಸಿದೆ.

    ಹುವಾಲಿಯನ್‌ನಲ್ಲಿನ ಐದು ಅಂತಸ್ತಿನ ಕಟ್ಟಡದ ಮೊದಲ ಮಹಡಿ ಭಾಗಶಃ ಕುಸಿದಿದ್ದು, ಕಟ್ಟಡವು 45 ಡಿಗ್ರಿ ಕೋನದಲ್ಲಿ ವಾಲಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ತೈವಾನ್​ ರಾಜಧಾನಿ ತೈಪೈ ಸೇರಿದಂತೆ ದೇಶಾದ್ಯಂತ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ.

    ಸದ್ಯಕ್ಕೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಭೂಕಂಪನ ಸಂಭವಿಸಿದ ಕೇವಲ 15 ನಿಮಿಷಗಳ ಅಂತರದಲ್ಲಿ ಸುಮಾರು 1 ಅಡಿ ಎತ್ತರದ ಸುನಾಮಿ ಯೊನಾಗುನಿ ದ್ವೀಪದಲ್ಲಿ ಕಂಡುಬಂದಿದೆ ಎಂದು ಜಪಾನ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜಪಾನ್​ನ ಒಕಿನಾವಾ ಪ್ರಾಂತ್ಯದ ಕರಾವಳಿ ಪ್ರದೇಶದ ನಿವಾಸಿಗಳಿಗೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಹೇಳಿದೆ ಮತ್ತು ದೇಶದ ನೈಋತ್ಯ ಕರಾವಳಿಯಲ್ಲಿ 3 ಮೀಟರ್‌ಗಳಷ್ಟು ಸುನಾಮಿ ಅಲೆಗಳು ತಲುಪುವ ನಿರೀಕ್ಷೆಯಿದೆ ಎಂದು ಎಚ್ಚರಿಸಿದೆ. (ಏಜೆನ್ಸೀಸ್)

    1940ರಲ್ಲಿ ಕರೆಂಟ್​ ಬಿಲ್​ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ!

    ಇಂಜಿನಿಯರಿಂಗ್​ಗೂ ಇನ್ನು ಕನ್ನಡ ಪ್ರಶ್ನೆಪತ್ರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts