More

    1940ರಲ್ಲಿ ಕರೆಂಟ್​ ಬಿಲ್​ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಖಚಿತ!

    ನವದೆಹಲಿ: ಈಗ ಏನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್​ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇತ್ತೀಚೆಗೆ ಕರೆಂಟ್ ಬಿಲ್ ಒಂದು ವೈರಲ್ ಆಗಿದೆ. ಅದೂ ಸ್ವಾತಂತ್ರ್ಯಪೂರ್ವದ ವಿದ್ಯುತ್ ಬಿಲ್. ಇದನ್ನು ನೋಡಿದ ನೆಟ್ಟಿಗರು ವಿದ್ಯುತ್ ಬಿಲ್ ಹೀಗೇ ಇರುತ್ತದಾ ಎಂದು ಆಶ್ಚರ್ಯ ಪಡುತ್ತಿದ್ದಾರೆ.

    ಪ್ರಸ್ತುತ ನಾವು-ನೀವು ಯಾವುದೇ ವಸ್ತುಗಳಿಗೆ ಸ್ವೀಕರಿಸುವ ಬಿಲ್‌ಗಳನ್ನು ನೋಡಿದರೆ ಆಶ್ಚರ್ಯ ಪಡುವಂಥದ್ದು ಏನಿಲ್ಲ. ಆದರೆ, ಅದೇ ವಸ್ತುಗಳಿಗೆ ಈ ಹಿಂದಿನ ಜನರು ಸ್ವೀಕರಿಸಿದ ಬಿಲ್ ನೋಡಿದರೆ ಖಂಡಿತ ಆಶ್ಚರ್ಯವಾಗುತ್ತದೆ. ಈ ಕಾರಣದಿಂದಲೇ ಯಾವುದಾದರೂ ಹಳೆಯ ವಸ್ತುಗಳನ್ನು ಕಂಡರೆ ನಾವು ವಿಚಿತ್ರವಾಗಿ ನೋಡುತ್ತೇವೆ. ಇಂದಿನ ಕರೆಂಟ್ ಬಿಲ್ ಬಗ್ಗೆ ಮಾತನಾಡಬೇಕಿಲ್ಲ. ಏಕೆಂದರೆ, ದುಬಾರಿಯಾಗಿದೆ. ಕನಿಷ್ಠ ದರವೇ 1000 ರಿಂದ 2000 ರೂಪಾಯಿ ನಡುವೆ ಇದೆ. ಆದರೂ ಜನರು ಇಂತಹ ವಿಷಯಗಳನ್ನು ನೋಡಿ ಆಶ್ಚರ್ಯಪಡುವುದಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದ ವಿದ್ಯುತ್ ಬಿಲ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ಆ ಫೋಟೋದಲ್ಲಿ ಹಿಂದಿನ ಬಿಲ್ ಮೊತ್ತು ಕಂಡು ಈಗಿನ ಜನರು ಹೌಹಾರಿದ್ದಾರೆ. ಏಕೆಂದರೆ ವಿದ್ಯುತ್​ ಬಿಲ್​ ಅಷ್ಟು ಕಡಿಮೆ ಇತ್ತು.

    ಸದ್ಯ ವೈರಲ್​ ಆಗುತ್ತಿರುವ ಬಿಲ್ ಸುಮಾರು 83 ವರ್ಷಗಳ ಹಿಂದಿನ ವಿದ್ಯುತ್​ ಬಿಲ್ ಆಗಿದೆ. ಆಗ ಒಂದು ತಿಂಗಳು ವಿದ್ಯುತ್ ಬಳಸಿದ್ದಕ್ಕೆ ಒಟ್ಟು ಬಿಲ್ 5 ರೂಪಾಯಿ. ಈ ರಸೀದಿ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕರೆಂಟ್ ಬಿಲ್ 1940, ಅಕ್ಟೋಬರ್ 15 ರಂದು ಮುದ್ರಣವಾಗಿರುವ ಬಿಲ್​. ಈ ಬಿಲ್ ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾಮ್‌ವೇ ಕಂಪನಿ ಲಿಮಿಟೆಡ್‌ಗೆ ಸೇರಿದೆ. ಈ ಹಳೆಯ ಬಿಲ್​ನಲ್ಲಿ 3.10 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ. ತೆರಿಗೆ ಸೇರಿ 5.2 ರೂ. ಬಿಲ್ ಬಂದಿದೆ.

    Old Bill 1

    ಇಂದು ಬಿಲ್​ಗಳನ್ನು ಮೆಷಿನ್​ನಲ್ಲಿ ಮುದ್ರಿಸಲಾಗುತ್ತದೆ. ಆದರೆ, ಆ ಕಾಲದಲ್ಲಿ ಕೈಯಿಂದಲೇ ವಿದ್ಯುತ್ ಬಿಲ್ ಬರೆಯುತ್ತಿದ್ದರು. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿನ ಕಾಲಕ್ಕೆ ಸಂಬಂಧಿಸಿದ ನಾನಾ ವಿಷಯಗಳು ಹರಿದಾಡುತ್ತಿವೆ. ಹೋಟೆಲ್ ಬಿಲ್‌ಗಳು, ಹಳೆಯ ಮೋಟಾರ್‌ಸೈಕಲ್ ಬಿಲ್‌ಗಳು, ಹಳೆಯ ಮಾರುಕಟ್ಟೆಯ ಬಿಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವೈರಲ್ ಆಗುತ್ತಿರುವ ಈ ಹಳೆಯ ಕರೆಂಟ್ ಬಿಲ್ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts