More

    ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ, ಇಂದೇ ನಿಮ್ಮ ಮನೆಯಲ್ಲಿರಲಿ ಈ 3 ಸಾಧನಗಳು!

    ಬೆಂಗಳೂರು: ವಿದ್ಯುತ್ ಮೊದಲಿಗಿಂತ ಹೆಚ್ಚು ದುಬಾರಿಯಾಗಿದ್ದು, ವಿದ್ಯುತ್ ಬಿಲ್ ಹೆಚ್ಚಿಗೆ ಬಂದರೆ ಯಾರಿಗೆ ತಾನೇ ಟೆನ್ಷನ್ ಆಗುವುದಿಲ್ಲ ಹೇಳಿ, ಹಾಗೆಂದು ನೀವು ಸುಮ್ಮನೆ ಕೈ ಕಟ್ಟಿ ಕೂರಲು ಆಗುವುದಿಲ್ಲ. ಆದರೆ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಲು ಖಂಡಿತ ಕೆಲವು ಮಾರ್ಗಗಳಿವೆ. ನೀವೂ ನಿಮ್ಮ ಮನೆಯ ವಿದ್ಯುತ್ ಬಿಲ್ ಕಡಿಮೆಯಾಗಬೇಕೆಂದು ಬಯಸಿದರೆ ಇಲ್ಲಿದೆ ನೋಡಿ ಕೆಲವು ಟಿಪ್ಸ್​​​…

    ಎನರ್ಜಿ ಎಫಿಶಿಯಂಟ್ ಡಿವೈಸಸ್​​​​ 
    ಇಂಧನ ದಕ್ಷತೆಯಿರುವ ಕೆಲವು ಸಾಧನಗಳನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ಈಗ ಮನೆ, ಕಚೇರಿ, ಅಂಗಡಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸಲಾಗುತ್ತಿದೆ, ಆದರೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಎಲ್‌ಇಡಿಗಳು ಲಭ್ಯವಿವೆ. ಈ ಸಾಮಾನ್ಯ ಎಲ್ಇಡಿ ಮತ್ತು ಸ್ಮಾರ್ಟ್ ಎಲ್ಇಡಿ ನಡುವೆ ಕೆಲವು ವ್ಯತ್ಯಾಸಗಳಿವೆ. ಅಂದಹಾಗೆ ಎಲ್ಇಡಿಗಳು ಕಡಿಮೆ ಶಾಖವನ್ನು ಉತ್ಪಾದಿಸುತ್ತವೆ ಮತ್ತು ಪ್ರತ್ಯೇಕ ಬಣ್ಣಗಳನ್ನು ಉತ್ಪಾದಿಸುವಾಗ ಕಡಿಮೆ ಶಕ್ತಿಯನ್ನು ಬಳಸುತ್ತವೆ. ಸಾಮಾನ್ಯ ಬಲ್ಬ್‌ಗಳಿಗಿಂತ 25 ಪಟ್ಟು ಹೆಚ್ಚು ಬಾಳಿಕೆ ಬರುವ ಮತ್ತು ಶೇಕಡ 90 ರಷ್ಟು ಕಡಿಮೆ ವಿದ್ಯುತ್ ಬಳಸುವ ಅನೇಕ ಬಲ್ಬ್‌ಗಳಿವೆ. ಬಲ್ಬ್‌ಗಳಷ್ಟೇ ಅಲ್ಲ, ಕಡಿಮೆ ವಿದ್ಯುತ್ ಬಳಸುವ ಫ್ಯಾನ್‌ಗಳೂ ಇವೆ.

    ಸೌರ ಫಲಕ 
    ನೀವೆಲ್ಲರೂ ಇದರ ಬಗ್ಗೆ ಕೇಳಿರಬೇಕು. ಮನೆಯಲ್ಲಿ ಸೌರ ಫಲಕಗಳನ್ನು ಬಳಸಿದರೆ, ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಒಮ್ಮೆ ಈ ಫಲಕವನ್ನು ಮನೆಯಲ್ಲಿ ಅಳವಡಿಸಿಕೊಂಡರೆ ಇಡೀ ದಿನ ವಿದ್ಯುತ್ ಪಡೆಯಬಹುದು. ಇದರಿಂದ ದಿನನಿತ್ಯದ ವಿದ್ಯುತ್ ಬಿಲ್‌ ಕಡಿಮೆಯಾಗಲಿದೆ. ಸರ್ಕಾರವು ಸೌರ ಫಲಕಗಳನ್ನು ಸಬ್ಸಿಡಿಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

    ಸ್ಮಾರ್ಟ್ ಎನರ್ಜಿ ಮೀಟರ್ 
    ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಎನರ್ಜಿ ಮೀಟರ್‌ಗಳು ಲಭ್ಯವಿವೆ. ಇವುಗಳು ಸಾಮಾನ್ಯವಾಗಿ Wi-Fi-ಸಕ್ರಿಯಗೊಳಿಸಿದ ಸ್ಮಾರ್ಟ್ ಎನರ್ಜಿ ಮೀಟರ್ ಆಗಿದ್ದು, ಇದು ಮನೆಯಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡುತ್ತದೆ. ಇದಲ್ಲದೆ, ನೀವು ಒಂದು ದಿನದಲ್ಲಿ ಎಷ್ಟು ವಿದ್ಯುತ್ ಬಳಸುತ್ತೀರಿ ಎಂಬುದನ್ನು ಸಹ ನೀವು ವಿಶ್ಲೇಷಿಸಬಹುದು. ಇಂತಹ ಸಾಧನಗಳು ವಿದ್ಯುಚ್ಛಕ್ತಿಯು ಹೆಚ್ಚು ಬಳಕೆಯಾಗುತ್ತಿದೆಯೋ, ಇಲ್ಲವೋ ಮತ್ತು ಯಾವ ಸಾಧನವು ಹೆಚ್ಚು ವಿದ್ಯುತ್ ಅನ್ನು ಬಳಸುತ್ತದೆ ಎಂದು ತಿಳಿಸುತ್ತದೆ.

    ರಂಜಾನ್‌ ಮೊದಲ ದಿನವೇ ವಿಧ್ವಂಸಕ ಕೃತ್ಯ ಎಸಗಿದ ಇಸ್ರೇಲ್; 24 ಗಂಟೆಗಳಲ್ಲಿ 67 ಪ್ಯಾಲೆಸ್ತೀನಿಯರು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts