ಚೊಚ್ಚಲ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾದ ಸಮಂತಾ: 'ಬಂಗಾರಂ' ಫಸ್ಟ್ ಲುಕ್ ರಿಲೀಸ್..

Capture
Published on

ಹೈದರಾಬಾದ್​: ಸಮಂತಾ ಭಾನುವಾರ(ಏ.28) ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಈ ಸಂದರ್ಭದಲ್ಲಿ ತನ್ನ ಅಭಿಮಾನಿಗಳಿಗೆ ವಿಶೇಷ ಮತ್ತು ಅಚ್ಚರಿ ಎನಿಸುವ ಉಡುಗೊರೆ ನೀಡಿದ್ದಾರೆ. ಸಮಂತಾ ತನ್ನ ನಿರ್ಮಾಣ ಸಂಸ್ಥೆ ತ್ರಲಾಲಾ ಮೂವಿಂಗ್ ಪಿಕ್ಚರ್ಸ್‌ನಿಂದ ಮೊದಲ ಚಲನಚಿತ್ರವನ್ನು ಘೋಷಿಸಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.

ಪ್ರಕಟಣೆಯ ಜೊತೆಗೆ ಸಮಂತಾ ತನ್ನ ಮುಂಬರುವ ಚಿತ್ರದ ಪೋಸ್ಟರ್ ಮತ್ತು ಮೋಷನ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಬಂಗಾರಂ ಎಂಬ ಶೀರ್ಷಿಕೆ ಚಿತ್ರಕ್ಕಿದ್ದು, ಕುತೂಹಲ ಕೆರಳಿಸಿದೆ.

ಆದರೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಅದೇನೇ ಇದ್ದರೂ, ಈ ಘೋಷಣೆಯೊಂದಿಗೆ ಸಮಂತಾ ನಟನೆಯಿಂದ ಏಳು ತಿಂಗಳ ವಿರಾಮವನ್ನು ಮುರಿದಿದ್ದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.

'ಬಂಗಾರಮ್' ಚಿತ್ರದ ಫಸ್ಟ್ ಲುಕ್‌ನಲ್ಲಿ ಸಮಂತಾ ತನ್ನ ತೀಕ್ಷ್ಣ ನೋಟದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ. 'ಚಿನ್ನವಾಗಲು ಎಲ್ಲವೂ ಹೊಳೆಯಬೇಕಿಲ್ಲ, ಬಂಗಾರಂ ಶೀಘ್ರದಲ್ಲೇ ಆರಂಭವಾಗಲಿದೆ' ಎಂಬ ಶೀರ್ಷಿಕೆಯು ಯೋಜನೆಯ ಸುತ್ತಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

'ಬಂಗಾರಮ್' ಹೊರತಾಗಿ, ರಾಜ್ ಮತ್ತು ಡಿಕೆ ನಿರ್ದೇಶನದ 'ಸಿಟಾಡೆಲ್: ಹನಿ ಬನ್ನಿ ' ಬಿಡುಗಡೆಗೆ ಸಮಂತಾ ಸಜ್ಜಾಗುತ್ತಿದ್ದಾರೆ. ಅವರ ಜೊತೆಯಲ್ಲಿ ವರುಣ್ ಧವನ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net